ಕ್ರೀಡೆ

ವಿಶ್ವ ಚೆಸ್: ಅನನ್ಯಾಗೆ ಕಂಚು

Published On :

ಮುಂಬೈ: ಗ್ರೀಸ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಶಾಲಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಒಂಭತ್ತು ವರ್ಷದ ಬಾಲಕಿ ಅನನ್ಯಾ ಗುಪ್ತಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.  ಪಂದ್ಯಾವಳಿಯಲ್ಲಿ 7ನೇ ಶ್ರೇಯಾಂಕ ಪಡೆದಿದ್ದ ಇವರು, ದಕ್ಷಿಣ ಮುಂಬೈನ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.  ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಅನನ್ಯಾ, ತನಗಿಂತಲೂ ಉತ್ತಮ ಶ್ರೇಯಾಂಕ ಹೊಂದಿದ್ದ ಆಟಗಾರರನ್ನೂ ಸೋಲಿಸಿ, ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಚುಂಗ್ ಶಾಲೆ ಮಕ್ಕಳಿಗೆ ಅವಕಾಶ
ನವದೆಹಲಿ:
ಬೈಚುಂಗ್ ಭುಟಿಯಾ ಫುಟ್ಬಾಲ್ ಶಾಲೆ (ಬಿಬಿಎಫ್‌ಎಸ್)ಯು ಮುಂದಿನ ತಿಂಗಳು ಹಾಲೆಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದೆ. 11ರ ವಯೋವುತಿ, 13ರ ವಯೋವುತಿ ಹಾಗೂ 15ರ ವಯೋವುತಿಯ ಬಾಲಕರ ತಂಡಗಳಿಗೆ ಇದರಲ್ಲಿ ಆಡಲು ಅವಕಾಶವಿರುತ್ತದೆ. ಇದೀಗ, ಬಿಬಿಎಫ್‌ಎಸ್ ಕೂಡಾ ಈ ಪಂದ್ಯಾವಳಿಯಲ್ಲಿ ಆಜೀವ ಪರ್ಯಂತ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆದಿರುವುದರಿಂದ, ಈ ಶಾಲೆಯಲ್ಲಿನ 11, 13 ಹಾಗೂ 15ರ ವಯೋವುತಿಯ ಮಕ್ಕಳಿಗೆ ಇತ್ತೀಚೆಗೆ ನಡೆದ ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾದ ಬೊರುಸಿಯಾ ಡೊರ್ಟ್‌ಮಂಡ್, ಫೆಯೆನೂರ್ಡ್ ರಾಟರ್‌ಡ್ಯಾಂ, ಫುಲ್ಹಾಮ್ ಪಿಎಸ್‌ವಿ ಇಂದೋವೆನ್, ಫಾರ್ಚುನಾ ಡಸೆಲ್‌ಡಾರ್ಫ್ ಹಾಗೂ ಸ್ಪಾರ್ಟಾ ಪ್ರಾಗ್ ತಂಡಗಳ ಜೊತೆ ಸೆಣೆಸುವ ಅರ್ಹತೆ ಸಿಗಲಿದೆ.

ಕೋಚ್‌ಗೆ  ವಿದಾಯ
ಪಣಜಿ:
ತರಬೇತುದಾರರಾಗಿ ಡೆಂಪೋ ಸ್ಪೋಟ್ಸ್ ಕ್ಲಬ್ ತಂಡವನ್ನು ಸುಮಾರು 13 ವರ್ಷಗಳ ಕಾಲ ಮುನ್ನಡೆಸಿದ ಅರ್ಮಾಂಡೊ ಕೊಲಾಕೊ ಅವರಿಗೆ ಭಾವುಕ ವಿದಾಯವನ್ನು ಡೆಂಪೊ ತಂಡದ ವ್ಯವಸ್ಥಾಪಕ ಮಂಡಳಿ ಮಂಗಳವಾರ ನೀಡಿತು. ಸರಳವಾಗಿ ಏರ್ಪಡಿಸಲಾಗಿದ್ದ ವಿದಾಯ ಸಮಾರಂಭದಲ್ಲಿ ಆಟಗಾರರು, ತಂಡದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.