ಕ್ರೀಡೆ

ನಡೆಯದ ಸೋಮನಾಟ

Published On :

ಪ್ಯಾರೀಸ್: ಫ್ರೆಂಚ್ ಒಪನ್‌ನಲ್ಲಿ ಭಾರತೀಯರಿಗೆ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಸೋಮ್‌ದೇವ್ ದೇವ್‌ವರ್ಮನ್, 2ನೇ ಶ್ರೇಯಾಂಕ ಪಡೆದಿರುವ ರೋಜರ್ ಫೆಡರರ್ ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದರು.
17 ಬಾರಿ ಗ್ರಾನ್ ಸ್ಲ್ಯಾಮ್ ಗೆದ್ದಿರುವ ಫೆಡರರ್ ಸೋಮ್‌ದೇವ್ ವಿರುದ್ಧ ಕೇವಲ ನಾಲ್ಕು ಗೇಮ್‌ಗಳಲ್ಲಿ ಮಾತ್ರ ಹಿನ್ನಡೆ ಅನುಭವಿಸಿದರು. ಅನುಭವಿಯ ಮುಂದೆ ಭಾರತದ ಸೋಮ್‌ದೇವ್ ಆಟ ನಡೆಯಲಿಲ್ಲ. ಹೀಗಾಗಿ ದ್ವಿತೀಯ ಸುತ್ತಿನ ಪಂದ್ಯದಲ್ಲಿ 6-2, 6-1, 6-1 ಅಂತರದಿಂದ ಸೋಮ್ ಸೋಲನುಭವಿಸಿದರು.
ನಾಲ್ಕನೇ ಗೇಮ್‌ನಲ್ಲಿ ಸೋಮ್‌ದೇವ್ ಕೊಂಚ ಬಿರುಸಿನ ಹೋರಾಟ ನಡೆಸಿದರು. ಆಗ ಸೋಮ್ ಎರಡು ಬ್ರೇಕ್ ಅವಕಾಶ ಪಡೆದರು. ಆದರೆ, ಎರಡನ್ನೂ ಉಪಯೋಗಿಸಿಕೊಳ್ಳಲಿಲ್ಲ.
ಮೊದಲೆರಡು ಗೇಮ್‌ಗಳಲ್ಲಿ ಸೋಮ್‌ದೇವ್‌ಗೆ ಏಕೈಕ ಪಾಯಿಂಟ್ ಸಹ ಗಳಿಸಲಾಗಲಿಲ್ಲ. ಆದರೆ, ಮೂರನೇ ಗೇಮ್‌ನಲ್ಲಿ ಸೋಮ್‌ದೇವ್ ಅಂಕಗಳಿಸಿದರು.
ಹೀಗಾಗಿ ಪಂದ್ಯದ ಅಂತ್ಯದವರೆಗೂ ಬಲಿಷ್ಠ ಎದುರಾಳಿಗೆ ಸೂಕ್ತ ಸವಾಲೊಡ್ಡುವಲ್ಲಿ ಸೋಮ್‌ದೇವ್ ಸಂಪೂರ್ಣವಾಗಿ ವೈಫಲ್ಯ ಕಂಡರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.