ಕ್ರೀಡೆ

ಜೊಕೊವಿಚ್ ಗೆ ಜಯ

ಜೊಕೊವಿಚ್ ಗೆ ಜಯ
Published On :

ಪ್ಯಾರೀಸ್: ವಿಶ್ವದ ಖ್ಯಾತ ಟೆನಿಸ್ ತಾರೆ ಸರ್ಬಿಯಾದ ನೊವಾಕ್ ಜೊಕೊವಿಚ್ ಮೊದಲ ಫ್ರೆಂಚ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರದಿಂದ ಎದುರು ನೋಡುತ್ತಿದ್ದಾರೆ.
ವಿಶ್ವದ ನಂಬರ್ ಒನ್ ಆಟಗಾರ ಜೊಕೊವಿಚ್ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್ ಜೋಫ್ಪಿನ್ ಅವರನ್ನು 7-6 (7/5), 6-4, 7-5 ಸೆಟ್ಗಳಿಂದ ಪರಾಭವಗೊಳಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಪಡೆದರು. ದ್ವಿತೀಯ ಸುತ್ತಿನಲ್ಲಿ ಜೊಕೊವಿಚ್ ಅರ್ಜೆಂಟೀನಾದ ಗುಯಿಡೋ ಪೆಲ್ಲಾ ಅವರನ್ನು ಎದುರಿಸಲಿದ್ದಾರೆ.
ಮಂಗಳವಾರ ತಡ ರಾತ್ರಿ ಬಹು ಹೊತ್ತಿನವರೆಗೆ ನಡೆದ ಮಹಿಳೆಯರ ಪಂದ್ಯದ ನಂತರ ಜೊಕೊವಿಚ್ ಪಂದ್ಯ ನಡೆದರೂ ಅಭಿಮಾನಿಗಳು ಕಾಯ್ದು ಕುಳಿತಿದ್ದರು.
'ನನ್ನ ಪಂದ್ಯ ವೀಕ್ಷಣೆಗೆ ಕಾಯ್ದಿದ್ದಕ್ಕಾಗಿ ನಾನು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದೊಂದು ಉತ್ತಮ ಪಂದ್ಯವಾಗಿತ್ತು. ಡೇವಿಡ್ ಅತ್ಯುತ್ತಮ ಪ್ರತಿಭೆಯನ್ನು ಹೊಂದಿದ್ದು ಶ್ರೇಷ್ಠ ಆಟಗಾರ. ಈ ಪಂದ್ಯದಲ್ಲಿ ಗೆದ್ದಿರುವುದು ನನಗೆ ಸಂತಸ ಉಂಟುಮಾಡಿದೆ. ಇದೇ ರೀತಿಯ ಹೋರಾಟವನ್ನು ಮುಂದುವರಿಸುವ ವಿಶ್ವಾಸ ಹೊಂದಿದ್ದೇನೆ' ಎಂದು ಪಂದ್ಯದ ನಂತರ ಜೊಕೊವಿಚ್ ಹೇಳಿದ್ದಾರೆ.
2012ರ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್ ಪ್ರಶಸ್ತಿ ಗಳಿಸಿದಾಗ ಜೊಕೊವಿಚ್ ರನ್ನರ್ಸ್ ಅಪ್ಗೆ ತೃಪ್ತಿಪಟ್ಟಿದ್ದರು. ಆಗ ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತು ಪ್ರವೇಶಿಸಿದ್ದ ಡೇವಿಡ್ ಈ ಪಂದ್ಯದಲ್ಲಿ ಜೊಕೊವಿಚ್ಗೆ ಸವಾಲಾಗಿ ಪರಿಣಮಿಸಿದ್ದರು. ಆದರೆ, ಜೊಕೊವಿಚ್ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಹಿಂದೆ ಸರಿದ ಟಾಮಿಕ್: ದಿನದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೆರ್ನಾರ್ಡ್ ಟಾಮಿಕ್ ಗಾಯಗೊಂಡು ಪಂದ್ಯದಿಂದ ನಿವೃತ್ತಿ ಪಡೆದರು. ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ 20 ವರ್ಷದ ಟಾಮಿಕ್ ಮೊದಲ ಸುತ್ತಿನ ಪಂದ್ಯದಲ್ಲಿ ವಿಕ್ಟೋರ್ ಹಾನೆಸ್ಕ್ಯೂ ವಿರುದ್ಧ ಹಿಂದೆ ಸರಿದಿದ್ದರು.
ಪಂದ್ಯದಿಂದ ಹಿಂದೆ ಸರಿದರೂ ವಿಶ್ವದ ನಂಬರ್ 61ನೇ ಆಟಗಾರ ಸ್ಪೇನ್ನಲ್ಲಿ ಅಪರಾಧದ ಆರೋಪಗಳನ್ನು ಎದುರಿಸಿತ್ತಿರುವ ತಮ್ಮ ತಂದೆ ಮತ್ತು ತರಬೇತುದಾರ ಜಾನ್ ಟಾಮಿಕ್ ಅವರನ್ನು ಸಮರ್ಥಿಸಿಕೊಂಡರು.
ಜಾನ್ ಟಾಮಿಕ್ ತಮ್ಮ ಪುತ್ರ ಜತೆಯಲ್ಲಿ ತರಬೇತಿ ಪಡೆಯುತ್ತಿದ್ದ ಆಟಗಾರನ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.