ಕ್ರೀಡೆ

ಲಿಯಾಂಡರ್- ಜರ್ಗನ್ ಜೋಡಿಗೆ ಮುನ್ನಡೆ

Published On :

ಪ್ಯಾರೀಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತ ಮಿಶ್ರಫಲ ಅನುಭವಿಸಿದೆ. ಭಾರತದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದರೆ, ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮತ್ತು ಜತೆಯಾಟಗಾರ ಆಸ್ಟ್ರಿಯಾದ ಜರ್ಗನ್ ಮೇಲ್ಜರ್ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
4ನೇ ಶ್ರೇಯಾಂಕ ಪಡೆದಿದ್ದ ಭೂಪತಿ ಮತ್ತು ಬೋಪಣ್ಣ ಜೋಡಿ ಶ್ರೇಯಾಂಕ ಪಡೆಯದ ಪೊಲೆಂಡ್ನ ತಾಮಸ್ ಬೆಡ್ನೆರೆಕ್ ಮತ್ತು ಜೆರ್ಜಿ ಜಾನೋವಿಚ್ ಜೋಡಿ ವಿರುದ್ಧ 5-7, 4-6 ನೇರ ಸೆಟ್ಗಳಿಂದ ವಿರೋಚಿತ ಸೋಲನುಭವಿಸಿತು.
ಕೆಚ್ಚೆದೆ ಹೋರಾಟ ನಡೆಸಿದ ಪೊಲೆಂಡ್ನ ಜೋಡಿ ಕೇವಲ 76 ನಿಮಿಷಗಳಲ್ಲಿ ಭಾರತದ ಜೋಡಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಆದರೆ, ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮತ್ತು ಜರ್ಗನ್ ಮೇಲ್ಜರ್ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶಿಸುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಕೊಂಚ ರಂಜನೆ ನೀಡಿತು.
ಪಂದ್ಯಾವಳಿಯಲ್ಲಿ 9ನೇ ಶ್ರೇಯಾಂಕ ಪಡೆದಿರುವ ಭಾರತ ಮತ್ತು ಆಸ್ಟ್ರೀಯ ಜೋಡಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಸ್ಥಳೀಯ ಜೋಡಿ ಪೀರ್ರೆ ಹ್ಯೂಜಸ್ ಹಾರ್ಬರ್ಟ್ ಮತ್ತು ನಿಕೋಲಾಸ್ ರೆನಾಂದ್ ಜೋಡಿಯನ್ನು 6-3, 6-3 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು.
ಅರ್ಜೆಂಟೀನಾದ ಕಾರ್ಲೋಸ್ ಬೆರ್ಲಾಕ್ ಮತ್ತು ಲಿಯೋನಾರ್ಡೋ ಮೇಯರ್ ಜೋಡಿ, ಉರುಗಾನ್ ಮತ್ತು ಅರ್ಜೆಂಟೀನಾ ಜೋಡಿ ಪಬ್ಲೊ ಕುವಾಸ್ ಮತ್ತು ಹೊರಾಸಿಯೋ ಜೆಬಲ್ಲೋಸ್ ಜೋಡಿ ನಡುವೆ ಇನ್ನೊಂದು ಮೊದಲ ಸುತ್ತಿನ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ಜೋಡಿಯನ್ನು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪೇಸ್ ಮತ್ತು ಮೇಲ್ಜರ್ ಜೋಡಿ ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.