ಕ್ರೀಡೆ

ನೆದರ್ಲ್ಯಾಂಡ್ಸ್ ಮುಂದೆ ಇಂಗ್ಲೆಂಡ್ಗೆ ಮುಖಭಂಗ

Published On :

ಚಿತ್ತಗಾಂಗ್: ಈಗಷ್ಟೇ ಜಾಗತಿಕ ಕ್ರಿಕೆಟ್ನಲ್ಲಿ ತನ್ನ ಛಾಪು ಮೂಡಿಸಲಾರಂಭಿಸಿರುವ ನೆದರ್ಲ್ಯಾಂಡ್ಸ್ ಆಟಗಾರರು ಪ್ರಸಕ್ತ ನಡೆಯುತ್ತಿರುವ ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ ಅಚ್ಚರಿ ಫಲಿತಾಂಶವೊಂದನ್ನು ನೀಡಿದ್ದಾರೆ.
ಚಿತ್ತಗಾಂಗ್ನಲ್ಲಿ ಸೋಮವಾರ ನಡೆದ ಗುಂಪು-1ರ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ 45 ರನ್ಗಳಿಂದ ಜಯಗಳಿಸಿ ಎದುರಾಳಿಯಾದ ಪ್ರಬಲ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಶಾಕ್ ಕೊಟ್ಟಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ 5 ವಿಕೆಟ್ ನಷ್ಟಕ್ಕೆ 133 ರನ್ಗಳ ಸಾಧಾರಣ ಮೊತ್ತ ಸಂಪಾದಿಸಿತು. ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವೆಸ್ಲೆ ಬ್ಯಾರೆಸಿ (48ರನ್, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಸ್ಟೀಫನ್ ಮೈಬರ್ಗ್ (39ರನ್, 31 ಎಸೆತ, 6 ಬೌಂಡರಿ, 1 ಸಿಕ್ಸರ್) ಗಮನ ಸೆಳೆದರು. ಇಂಗ್ಲೆಂಡ್ ಪರ ಮಧ್ಯಮ ವೇಗದ ಬೌಲರ್, ನಾಯಕ ಸ್ಟುವರ್ಟ್ ಬ್ರಾಡ್ 3 ವಿಕೆಟ್ ಪಡೆದರು.  ಉತ್ತರವಾಗಿ ಇಂಗ್ಲೆಂಡ್ 17.4 ಓವರುಗಳಲ್ಲಿ 88 ರನ್ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಆಟಗಾರ ರವಿ ಬೊಪಾರ 18 ರನ್ಗಳಿಸಿದ್ದೇ ಉತ್ತಮ ಸಾಧನೆ ಎನಿಸಿತು.  
ನೆದರ್ಲ್ಯಾಂಡ್ಸ್ ಏಕೈಕ ಗೆಲವಿನೊಂದಿಗೆ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡರೆ, ಇಂಗ್ಲೆಂಡ್ ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ 1 ಜಯದ ನೆಮ್ಮದಿಯೊಂದಿಗೆ ತೀರ ನಿರಾಶಾದಾಯಕ ಪ್ರದರ್ಶನದ ಮೂಲಕ ಟೂರ್ನಿಗೆ ವಿದಾಯ ಹೇಳುವಂತಾಯಿತು. ಈ ಎರಡೂ ತಂಡಗಳು ಮೊದಲೇ ಸೆಮಿಫೈನಲ್ ಸ್ಪರ್ಧಾಕಣದಿಂದ ಹೊರಬಿದ್ದಿದ್ದರಿಂದ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವವಿರಲಿಲ್ಲ.



ಸಂಕ್ಷಿಪ್ತ ಸ್ಕೋರ್
ನೆದರ್ಲ್ಯಾಂಡ್ಸ್ 20 ಓವರ್ಗೆ 5 ವಿಕೆಟ್ಗೆ 133
(ವೆಸ್ಲೆ ಬ್ಯಾರೆಸಿ 48, ಸ್ಟೀಫನ್ ಮೈಬರ್ಗ್ 39, ಸ್ಟುವರ್ಟ್ ಬ್ರಾಡ್ 24ಕ್ಕೆ3). ಇಂಗ್ಲೆಂಡ್ 17.4 ಓವರುಗಳಲ್ಲಿ 88 (ರವಿ ಬೊಪಾರ 18, ಕ್ರಿಸ್ ಜೋರ್ಡಾನ್ 14, ಲೊಗಾನ್ ವ್ಯಾನ್ ಬೀಕ್ 9ಕ್ಕೆ3, ಮುದಸ್ಸರ್ ಬುಖಾರಿ 12ಕ್ಕೆ3).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.