ಕ್ರೀಡೆ

ಡ್ರಾಗೆ ತೃಪ್ತಿಪಟ್ಟ ಚರ್ಚಿಲ್-ಸ್ಪೋರ್ಟಿಂಗ್

Published On :

ಮಡಗಾಂವ್: ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ಮತ್ತು ಚರ್ಚಿಲ್ ಬ್ರದರ್ಸ್ ತಂಡಗಳ ಆಟಗಾರರು ಭಾನುವಾರ ನಡೆದ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪರಸ್ಪರ 1-1 ಗೋಲಿನಿಂಗ ಡ್ರಾ ಫಲಿತಾಂಶಕ್ಕೆ ತೃಪ್ತರಾಗಿದ್ದಾರೆ.
ಇಲ್ಲಿನ ನೆಹರು ಮೈದಾನದಲ್ಲಿ ನಡೆದ ರೋಚಕ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಚರ್ಚಿಲ್ ಬ್ರದರ್ಸ್ ತಂಡ ಪಂದ್ಯದ 72ನೇ ನಿಮಿಷದಲ್ಲಿ ಆಂಥೋಣಿ ವೋಲ್ಫ್ ಗೋಲಿನ ಮೂಲಕ ಮುನ್ನಡೆ ಸಾಧಿಸಿತು.  ಆದರೆ, ಕೇವಲ ಎಂಟು ನಿಮಿಷಗಳ ಅಂತರದಲ್ಲಿ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ತಂಡದ ಪರ ಆಸ್ಟ್ರೇಲಿಯಾ ಮೂಲದ ಬೊಯಿಮಾ ಜೆರ್ರಿ ಕಾರ್ಪೆ ಗೋಲುಗಳಿಸಿ ಪಂದ್ಯ ಡ್ರಾಗೊಳ್ಳಲು ಕಾರಣರಾದರು.
ಈ ಡ್ರಾದಿಂದಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡವು.  ಈ ಮಧ್ಯೆ ಉತ್ತರಾರ್ಧದ ಆಟದಲ್ಲಿ ಕೂಡ ಬೇಗನೆ ಗೋಲು ಸಂಪಾದನೆಯಾಗಲಿಲ್ಲ. ಆದರೂ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿಕೊಂಡ ಚರ್ಚಿಲ್ ಬ್ರದರ್ಸ್ ಆಟಗಾರರು ಕೊನೆಯೂ ಆಟ ಮುಗಿಯಲು 12 ನಿಮಿಷಗಳಿದ್ದಾಗ ಗೋಲಿನ ಖಾತೆ ತೆರೆದು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಆದರೆ, ಚರ್ಚಿಲ್ ಆಟಗಾರರ ಈ ಸಂಭ್ರಮ ಬಹಳ ಸಮಯ ಉಳಿಯಲಿಲ್ಲ. ಇದರೊಂದಿಗೆ ಸ್ಪೋರ್ಟಿಂಗ್ ಕ್ಲಬ್ ಡಿ ಗೋವಾ ತಂಡ ಆಡಿದ 22 ಪಂದ್ಯಗಳಿಂದ 33 ಅಂಕಗಳನ್ನು ಕಲೆಹಾಕಿ 13 ತಂಡಗಳ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಮತ್ತೊಂದೆಡೆ ಚರ್ಚಿಲ್ ಬ್ರದರ್ಸ್ 20 ಪಂದ್ಯಗಳಿಂದ 19 ಅಂಕಗಳಿಸಿ 12ನೇ ಸ್ಥಾನದಲ್ಲಿ ಉಳಿದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.