ಕ್ರೀಡೆ

ಯುವಿ ಬಗ್ಗೆ ಉತ್ತರಿಸಲು ಪ್ರಯಾಸಪಟ್ಟ ನಾಯಕ ಧೋನಿ

ಯುವಿ ಬಗ್ಗೆ ಉತ್ತರಿಸಲು ಪ್ರಯಾಸಪಟ್ಟ ನಾಯಕ ಧೋನಿ
Published On :

ಮೀರ್‌ಪುರ: ದಣಿವು ಮತ್ತು ಬೇಸರಗೊಂಡಿದ್ದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ಪಂದ್ಯದಲ್ಲಿ ತಂಡದ ಸಹ ಆಟಗಾರ ಯುವರಾಜ್ ಸಿಂಗ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಕುರಿತು ಉತ್ತರಿಸಲು ಪ್ರಯಾಸಪಟ್ಟರು.
 ಆದರೆ, ಕಠಿಣ ಪರಿಸ್ಥಿತಿಯಲ್ಲಿ ಯುವರಾಜ್ ಸಾಧ್ಯವಾದಷ್ಟು ಶ್ರೇಷ್ಠ ಬ್ಯಾಟಿಂಗ್ ಮಾಡಲು ಯತ್ನಿಸಿದರು ಎಂದಿದ್ದಾರೆ. ಮಹತ್ವದ ಫೈನಲ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಯುವರಾಜ್ 21 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿದ್ದು, ಭಾರತ ತಂಡ ಕೇವಲ 130 ರನ್ ಗಳಿಸಿದ್ದರ ಮೇಲೆ ಪರಿಣಾಮ ಬೀರಿತ್ತು.ನಂತರ ಈ ಸಾಧಾರಣ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ಕೇವಲ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ವಿಜಯ ಸಾಧಿಸಿತ್ತು. ಹೀಗಾಗಿ ಯುವಿ ಟೀಕೆಗೊಳಪಟ್ಟಿದ್ದರು.     'ಯುವರಾಜ್‌ಗೆ ಇದೊಂದು ಕೆಟ್ಟ ದಿನ. ಆದಾಗ್ಯೂ ಅವರು ತಮಗೆ ಸಾಧ್ಯವಾದಷ್ಟು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಯತ್ನಿಸಿದರು' ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಪ್ರದರ್ಶನದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಅಲ್ಲದೆ, ಪತ್ರಿಕಾಗೋಷ್ಠಿಯಲ್ಲಿ ಧೋನಿ ತುಂಬಾ ಮಂಕಾದಂತೆ ಕಂಡುಬಂದರು. ಪಂದ್ಯಾವಳಿಯಲ್ಲಿ ಯಾವುದೇ ಪತ್ರಿಕಾಗೋಷ್ಠಿಯಲ್ಲೂ ಧೋನಿ ಈ ರೀತಿ ನೀರಸವಾಗಿ ಕಂಡುಬಂದಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.