ಉತ್ತರಕ್ಕೆ ಜಾರಿದ ಜಾರ್ಖಂಡ್
ರಾಜ್‌ಕೋಟ್: ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಉತ್ತರಪ್ರದೇಶ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ನಿರಾಯಾಸ ಜಯ ಗಳಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಉತ್ತರಪ್ರದೇಶ ತಂಡ 8ವಿಕೆಟ್‌ಗಳಿಂದ ಜಾರ್ಖಂಡ್ ತಂಡವನ್ನು ಪರಾಭವಗೊಳಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಜಾರ್ಖಂಡ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 114 ರನ್‌ಗಳನ್ನಷ್ಟೇ ಸಂಪಾದಿಸಿತು.
ಆರಂಭಿಕ ಇಶಾಂಕ್ ಜಗ್ಗಿ (39ರನ್, 37 ಎಸೆತ, 6 ಬೌಂಡರಿ) ಬಿಟ್ಟರೆ ಉಳಿದ ಆಟಗಾರರು ಸ್ಫೋಟಿಸುವಲ್ಲಿ ವಿಫಲರಾದರು. ಉತ್ತರಪ್ರದೇಶ ಬೌಲರ್ ಅಕ್ಷದೀಪ್ ನಾಥ್ 20ಕ್ಕೆ3 ವಿಕೆಟ್ ಉರುಳಿಸಿ ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ತಡೆದರು.
ಉತ್ತರವಾಗಿ ರಾಜಸ್ಥಾನ ಪಡೆ 14.4 ಓವರುಗಳಲ್ಲಿಯೇ ಕೇವಲ 2 ವಿಕೆಟ್ ಒಪ್ಪಿಸಿ 120 ರನ್‌ಗಳೊಂದಿಗೆ ಸುಲಭ ಗೆಲವು ಪಡೆಯಿತು. ಆರಂಭಿಕ ಮುಕುಲ್ ದಗಾರ್ 45 ಎಸೆತಗಳಲ್ಲಿ 10 ಬೌಂಡರಿಗಳಿದ್ದ 63 ರನ್‌ಗಳಿಸಿ ಉತ್ತರಪ್ರದೇಶ ತಂಡಕ್ಕೆ ಬೇಗನೆ ಗೆಲವು ತಂದುಕೊಟ್ಟರು.
ಗುಜರಾತ್ ವಿರುದ್ಧ ಹರ್ಯಾಣಕ್ಕೆ ಜಯ: ರಾಜ್‌ಕೋಟ್‌ನಲ್ಲಿಯೇ ನಡೆದ ಮತ್ತೊಂದು ಪಂದ್ಯದಲ್ಲಿ ಹರ್ಯಾಣ ತಂಡ 6 ವಿಕೆಟ್‌ಗಳಿಂದ ಗುಜರಾತ್ ವಿರುದ್ಧ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಮಧ್ಯಮ ಕ್ರಮಾಂಕದ ಆಟಗಾರ ಹಿಮಾಲಯ ಬಾರದ್ ಕೇವಲ 38 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 48 ರನ್‌ಗಳಿಸಿ ತಂಡಕ್ಕೆ ನೆರವಾದರು.
ಇದಕ್ಕೆ ಉತ್ತರವಾಗಿ ಹರ್ಯಾಣ 19.3 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು.
ಆರಂಭಿಕ ಆಟಗಾರರಾದ ಅವಿ ಬಾರೋಟ್ (56ರನ್, 37 ಎಸೆತ, 8 ಬೌಂಡರಿ,1 ಸಿಕ್ಸರ್) ಮತ್ತು ರಾಹುಲ್ ದಿವಾನ್ (36ರನ್, 42 ಎಸೆತ, 2 ಬೌಂಡರಿ) ಮೊದಲ ವಿಕೆಟ್‌ಗೆ ಕೇವಲ 68 ಎಸೆತಗಳಲ್ಲಿ 94 ರನ್ ಸೇರಿಸಿ ತಂಡದ ವಿಜಯೋತ್ಸವಕ್ಕೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಜಾರ್ಖಂಡ್ 20 ಓವರುಗಳಲ್ಲಿ 6 ವಿಕೆಟ್‌ಗೆ 114 (ಇಶಾಂಕ್ ಜಗ್ಗಿ 39, ಸಂದೀಪ್ ಗುಪ್ತಾ 28, ಅಕ್ಷದೀಪ್ ನಾಥ್ 20ಕ್ಕೆ3).
ಉತ್ತರಪ್ರದೇಶ 14.4 ಓವರುಗಳಲ್ಲಿ 2 ವಿಕೆಟ್‌ಗೆ 120 (ಮುಕುಲ್ ದಗಾರ್ 63, ಏಕಲವ್ಯ ದ್ವಿವೇದಿ ಅಜೇಯ 37).
ಗುಜರಾತ್ 20 ಓವರುಗಳಲ್ಲಿ 7 ವಿಕೆಟ್‌ಗೆ 146 (ಹಿಮಾಲಯ ಬಾರದ್ 48, ಪ್ರಿಯಾಂಕ್ ಪಾಂಚಲ್ 36
ಜೋಗಿಂದರ್ ಶರ್ಮಾ 24ಕ್ಕೆ2).
ಹರ್ಯಾಣ 19.3 ಓವರುಗಳಲ್ಲಿ 4 ವಿಕೆಟ್‌ಗೆ 150 (ಅವಿ ಬಾರೋಟ್ 56, ರಾಹುಲ್ ದಿವಾನ್ 36, ಜೇ ದೇಸಾಯಿ 30ಕ್ಕೆ3).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

