ಸಹ ಸಂಸ್ಥೆಗಳ ಟೆಸ್ಟ್ ಮಾನ್ಯತೆಗೆ ಐಸಿಸಿ ದಾರಿ
ದುಬೈ: 'ಐಸಿಸಿ ಟೆಸ್ಟ್ ಚಾಲೆಂಜ್'ಅನ್ನು ಪರಿಚಯಿಸುವ ಮೂಲಕ ವಿಶ್ವ ಕ್ರಿಕೆಟ್ ಸಂಸ್ಥೆ ತನ್ನ ಸಹ ಸಂಸ್ಥೆಗಳೂ ಟೆಸ್ಟ್ ಆಡುವ ಮಾನ್ಯತೆ ಪಡೆಯಲು ಅವಕಾಶ ನೀಡಲು ನಿರ್ಧರಿಸಿದೆ.
ಈ ಟೆಸ್ಟ್ ಚಾಲೆಂಜ್ ಪಂದ್ಯಾವಳಿಯು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿದ್ದು, ಟೆಸ್ಟ್ ರ್ಯಾಂಕಿಂಗ್ನಲ್ಲಿ ಕಡಿಮೆ ರ್ಯಾಂಕಿಂಗ್ ಹೊಂದಿರುವ ತಂಡಗಳು ಹಾಗೂ ಐಸಿಸಿ ಖಂಡಾಂತರ ಕಪ್ ವಿಜೇತ ತಂಡಗಳ ನಡುವೆ ನಡೆಯಲಿದೆ.
ಐಸಿಸಿಯು ತನ್ನ ಕಾರ್ಯಕಾರಿ ಸಮಿತಿ ಸಭೆಯ ವೇಳೆ ಈ ನಿರ್ಧಾರ ತೆಗೆದುಕೊಂಡಿದ್ದು, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಕಡಿಮೆ ರ್ಯಾಂಕಿಂಗ್ ಹೊಂದಿರುವ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳಲ್ಲಿ ಒಂದು ತಂಡ ನೆದರ್ಲೆಂಡ್, ಐರ್ಲೆಂಡ್ ಹಾಗೂ ಯುಎಇ ತಂಡಗಳ ಜತೆ ಟೆಸ್ಟ್ ಮಾನ್ಯತೆಗಾಗಿ ಕಾದಾಟ ನಡೆಸಬೇಕಿದೆ. ಐಸಿಸಿ ಟೆಸ್ಟ್ ಚಾಲೆಂಜ್ ಪಂದ್ಯಾವಳಿಯನ್ನು ಆಯೋಜಿಸಲು ಮಂಡಳಿ ನಿರ್ಧರಿಸಿದೆ. ಈ ಪಂದ್ಯಾವಳಿಯನ್ನು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಟೆಸ್ಟ್ ರ್ಯಾಕಿಂಗ್ನಲ್ಲಿ ಕಡೇ ಸ್ಥಾನ ಪಡೆದಿರುವ ಹಾಗೂ ಐಸಿಸಿ ಖಂಡಾಂತರ ಕಪ್ ವಿಜೇತ ತಂಡಗಳ ನಡುವೆ ನಡೆಸಲಾಗುವುದು ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಸ್ತಾವನೆಯಲ್ಲಿ 2017ರ ಡಿ.31ರವರೆಗೆ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿರುವ ತಂಡ, 2018ರಲ್ಲಿ ಟೆಸ್ಟ್ ಚಾಲೆಂಜ್ ಕಪ್ ಪಂದ್ಯಾವಳಿಯನ್ನು ಆಡಬೇಕಿದೆ. ಈ ಪಂದ್ಯಾವಳಿಯಲ್ಲಿ 10ನೇ ಸ್ಥಾನ ಪಡೆದ ತಂಡ ಖಂಡಾಂತರ ಕಪ್ ವಿಜೇತ ತಂಡದ ವಿರುದ್ಧ ತನ್ನ ತವರಿನಲ್ಲಿ ಐದು ದಿನಗಳ ಎರಡು ಟೆಸ್ಟ್ ಪಂದ್ಯ ಹಾಗೂ ಹೊರಗಡೆ ಐದು ದಿನಗಳ ಎರಡು ಟೆಸ್ಟ್ ಪಂದ್ಯಗಳನ್ನಾಡಬೇಕಿದೆ ಎಂದು ತಿಳಿಸಲಾಗಿದೆ.
ಮುಂದಿನ 8 ವರ್ಷಗಳಲ್ಲಿ 2 ಬಾರಿ ಐಸಿಸಿ ಖಂಡಾಂತರ ಕಪ್ ಆಯೋಜಿಸಲು ಐಸಿಸಿ ನಿರ್ಧರಿಸಿದ್ದು, ಚೊಚ್ಚಲ ಪಂದ್ಯಾವಳಿಯನ್ನು 2015ರಿಂದ 2017ರವರೆಗೆ ನಡೆಸಲು ಹಾಗೂ ಎರಡನೇ ಪಂದ್ಯಾವಳಿಯನ್ನು 2019 ಹಾಗೂ 2021ರವರೆಗೆ ನಡೆಸಲು ನಿರ್ಧರಿಸಿದ್ದು, ದ್ವಿತೀಯ ಟೆಸ್ಟ್ ಚಾಲೆಂಜ್ ಪಂದ್ಯಾವಳಿಯನ್ನು 2022ರಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಐಸಿಸಿ ಟೆಸ್ಟ್ ಚಾಲೆಂಜ್ ಪಂದ್ಯಾವಳಿಯಿಂದ ಐಸಿಸಿಯ ಸಹ ಸಂಸ್ಥೆಗಳು ಅಂತಾರಾಷ್ಟ್ರೀಯ ಟೆಸ್ಟ್ ಆಡುವ ಅವಕಾಶ ಪಡೆಯಲು ಒಂದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಂತಾಗಲಿದೆ ಎಂದು ಐಸಿಸಿ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಡೇವಿಡ್ ರಿಚರ್ಡ್ಸನ್ ತಿಳಿಸಿದ್ದಾರೆ.
ಐಸಿಸಿಯ ಈ ಬಾರಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳೆದ ಬಾರಿ ಫೆ.8ರಂದು ನಡೆಸಲಾಗಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಅಲ್ಲದೆ ಮಂಡಳಿಯ ಅಧಿಕಾರಿಗಳು ಐಸಿಸಿಯ ಸಂವಿಧಾನಿಕ ಬದಲಾವಣೆಗೆ ರೂಪುರೇಷೆ ನೀಡಿದ್ದು, ಐಸಿಸಿ ವಾರ್ಷಿಕ ಸಭೆಯಲ್ಲಿ ಅದನ್ನು ಅಂಗೀಕರಿಸಲಾಗುವುದು.
ಇನ್ನು ಭವಿಷ್ಯದ ವೇಳಾಪಟ್ಟಿಯ ಬಗ್ಗೆ ಸ್ವರೂಪ ನೀಡಿದ್ದು, 2023ರವರೆಗೆ ನಿರ್ಧರಿಸಲಾಗುವುದು. ಈ ಬಗ್ಗೆ ಮಾಹಿತಿ ನೀಡಿದ ರಿಚರ್ಡ್ಸನ್, ಭವಿಷ್ಯದ ವೇಳಪಟ್ಟಿಯ ಯೋಜನೆಯು ಪ್ರಮುಖ ಅಂಶವಾಗಿದ್ದು, ಇದು ದೀರ್ಘಾವಧಿಯವರೆಗೆ ಆಟಗಾರರ, ಆಟದ ವೇಳಾಪಟ್ಟಿ ಆರ್ಥಿಕ ವ್ಯವಸ್ಥೆಯ ಯೋಜನೆಯಾಗಲಿದೆ. ಹಾಗಾಗಿ ಈ ಕುರಿತು ಮಹತ್ವದ ಯೋಜನೆ ರೂಪಿಸಿದ್ದು, ಸಮತೋಲಿತವಾಗಿ ರೂಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ವಿಶ್ವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

