ವಿವಾದದಿಂದ ತಂಡದ ಪ್ರದರ್ಶನಕ್ಕೆ ಅಡ್ಡಿ ಇಲ್ಲ: ರೈನಾ
ನವದೆಹಲಿ: ಐಪಿಎಲ್ಸ ಏಳನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರುನೋಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ ಸುರೇಶ್ ರೈನಾ, ಕಳೆದ ಆವೃತ್ತಿಯಲ್ಲಿ ತಂಡ ಸಿಲುಕಿದ ವಿವಾದಗಳು ಈ ಬಾರಿಯ ಆವೃತ್ತಿಯ ಪ್ರದಶಂನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ತಂಡ ಸಮತೋಲನದಿಂದ ಕೂಡಿದೆ. ಬ್ರೆಂಡನ್ ಮೆಕಲಂ ತಂಡಕ್ಕೆ ಸೇರ್ಪಡೆಯಾಗಿರುವುದು ಪ್ಲಸ್ ಪಾಯಿಂಟ್. ಡುಪ್ಲೆಸಿಸ್, ಡ್ವೈನ್ ಸ್ಮಿತ್, ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಸ್ಯಾಮ್ಯುಯೆಲ್ ಬದ್ರಿ, ಅಶ್ವಿನ್ರಂತಹ ಪರಿಣಾಮಕಾರಿ ಸ್ಪಿನ್ನರ್ಗಳಿದ್ದು, ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ನಾವು ವೃತ್ತಿಪರ ಆಟಗಾರರಾಗಿದ್ದು, ಯಾವುದೇ ಅಂಶ ನಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಲು ಅವಕಾಶ ನೀಡುವುದಿಲ್ಲ. ಪಂದ್ಯಾವಳಿಯ ಆರಂಭಿಕ ಐದು ಪಂದ್ಯಗಳು ಪ್ರಮುಖವಾಗಲಿದ್ದು, ಆ ಪಂದ್ಯಗಳಲ್ಲಿ ಗೆಲವು ದಾಖಲಿಸಲು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು. ಗಂಗೂಲಿಯವರೊಂದಿಗೆ ಮಾತುಕತೆ ನಡೆಸಿದಾಗ ಅವರು ಆತ್ಮವಿಶ್ವಾಸದಿಂದಿರಲು ಸಲಹೆ ನೀಡಿದ್ದಾರೆ. ಹಾಗಾಗಿ ನಾನು ಕೇವಲ ಟಿ20 ಕ್ರಿಕೆಟ್ ಬಗ್ಗೆ ಗಮನಹರಿಸುತ್ತಿದ್ದು, ಇತರೆ ಮಾದರಿ ಕ್ರಿಕೆಟ್ ಬಗ್ಗೆ ಚಿಂತಿಸುತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

