ಡೆವಿಲ್ಸ್ ಎದುರು ಆರ್ಸಿಬಿ ಮೊದಲ ಕಾಳಗ

ಶಾರ್ಜಾ: ಹೊಸ ಸ್ವರೂಪ, ಹೊಸ ಸ್ಫೂರ್ತಿಯೊಂದಿಗೆ ಮತ್ತೆ ಪ್ರಶಸ್ತಿ ಗೆಲ್ಲು ಆಸೆಯನ್ನು ಹೊತ್ತು ಐಪಿಎಲ್ ಏಳನೇ ಆವೃತ್ತಿಯಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಡೇರ್ಡೆವಿಲ್ಸ್, ಪರಸ್ಪರ ಕಾದಾಟ ನಡೆಸಲು ಸಜ್ಜಾಗಿವೆ.
ಗುರುವಾರ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಐಪಿಎಲ್ನ ಎರಡನೇ ಪಂದ್ಯ ನಡೆಯಲಿದ್ದು, ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ತನ್ನ ಅಬ್ಬರದ ಪ್ರದರ್ಶನ ತೋರಲು ಪ್ರಬಲ ದಾಂಡಿಗರ ದಂಡನ್ನು ಹೊತ್ತಿರುವ ಆರ್ಸಿಬಿ ಸಜ್ಜಾಗಿದೆ. ಆರ್ಸಿಬಿ ಹಾಗೂ ಡೆಲ್ಲಿ ತಂಡಗಳು ಇದುವರೆಗೂ ಪ್ರಶಸ್ತಿ ಎತ್ತಿಹಿಡಿಯಲು ಯಶಸ್ವಿಯಾಗಿಲ್ಲ. ಹಾಗಾಗಿ ಈ ಬಾರಿ ತಮ್ಮ ಪ್ರಶಸ್ತಿಯ ದಾಹವನ್ನು ನೀಗಿಸಿಕೊಳ್ಳಲು ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ಎದುರು ನೋಡುತ್ತಿವೆ. ಆರ್ಸಿಬಿ ತಂಡ ಕಳೆದ ಬಾರಿಯಲ್ಲಿದ್ದ ತಂಡದ ಆಧಾರ ಸ್ತಂಭವಾಗಿದ್ದ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಈ ಬಾರಿಯೂ ಅದೇ ಪ್ರದರ್ಶನ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇನ್ನು ಯುವರಾಜ್ ಜತೆಗೆ ಆಲ್ರೌಂಡರ್ಗಳಾದ ಆಲ್ಬಿ ಮಾರ್ಕೆಲ್, ರವಿ ರಾಮ್ಪಾಲ್, ವೇಗಿಗಳಾದ ಸ್ಟಾರ್ಕ್, ವರುಣ್ ಎರಾನ್, ಹರ್ಷದ್ ಪಟೇಲ್ ಸಹ ತಮ್ಮ ಸಾಮರ್ಥ್ಯ ತೋರಲು ಸಿದ್ಧರಿದ್ದಾರೆ. ಇನ್ನು ಡೆಲ್ಲಿ ತಂಡ ಹೊಸ ಆಟಗಾರರಿಂದ ಕೂಡಿದೆಯಾದರೂ ತಂಡದಲ್ಲಿ ರಾಸ್ ಟೇಲರ್, ದಿನೇಶ್ ಕಾರ್ತಿಕ್, ಮುರಳಿ ವಿಜಯ್, ಮನೋಜ್ ತಿವಾರಿ, ಖಿಟಾನ್ ಡಿ ಕಾಕ್, ಡುಮಿನಿ ಬ್ಯಾಟಿಂಗ್ ಆಧಾರವಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಜಯ್ದೇವ್ ಇನಾದ್ಕತ್, ಶರತ್, ವೇಯ್ನ್ ಪಾರ್ನೆಲ್, ಮೊಹ್ಮದ್ ಶಮಿ ಪ್ರಬಲ ಅಸ್ತ್ರವಾಗಿದ್ದಾರೆ. ಒಟ್ಟಿನಲ್ಲಿ ಎರಡೂ ತಂಡಗಳು ಪ್ರಬಲವಾಗಿದ್ದು, ಮೈದಾನದಲ್ಲಿನ ಕಾಳಗದಲ್ಲಿ ಯಾರ ಕೈ ಮೇಲಾಗುವುದು ಎಂಬುದನ್ನು ಕಾದುನೋಡಬೇಕು.
ತಂಡಗಳು
ಆರ್ಸಿಬಿ
ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ನಿಕ್ ಮ್ಯಾಡಿನ್ಸನ್, ವಿಜಯ್ ಜೋಲ್, ಪಾರ್ಥೀವ್ ಪಟೇಲ್, ತನ್ಮಯ್ ಮಿಶ್ರಾ, ಮುತ್ತಯ್ಯ ಮುರಳಿಧರನ್, ಯೋಗೆಶ್ ಟಕವಾಲೆ, ಸಂದೀಪ್ ವಾರಿಯರ್, ಮಿಚೆಲ್ ಸ್ಟಾರ್ಕ್, ರವಿ ರಾಮ್ಪಾಲ್, ಹರ್ಷಲ್ ಪಟೇಲ್, ಆಲ್ಬಿ ಮಾರ್ಕೆಲ್, ಶದಾಬ್ ಜಕಾಟಿ, ಅಶೋಕ್ ದಿಂಡಾ, ಯುಜ್ವೆಂದ್ರ ಚಾಹಲ್, ಅಬು ನಚಿಮ್, ವರುಣ್ ಎರಾನ್, ಸಚಿನ್ ರಾಣಾ.
ಡೆಲ್ಲಿ ಡೇರ್ಡೆವಿಲ್ಸ್
ಕೆವಿನ್ ಪೀಟರ್ಸನ್ (ನಾಯಕ), ಮಾಯಾಂಕ್ ಅಗರ್ವಾಲ್, ನಾಥನ್ ಕೌಲ್ಟರ್ ನೀಲ್, ಖಿಂಟಾನ್ ಡಿ ಕಾಕ್, ಜೀನ್ ಪಾಲ್ ಡುಮಿನಿ, ಕೆದಾರ್ ಜಾದವ್, ದಿನೇಶ್ ಕಾರ್ತಿಕ್, ಸಿದ್ಧಾರ್ತ್ ಕೌಲ್, ಮಿಲಿಂದ್ ಕುಮಾರ್, ಮೊಹ್ಮದ್ ಶಮಿ, ಶಹಬಾಜ್ ನದೀಮ್, ಜಿಮ್ಮಿ ನಿಶಮ್, ವೇಯ್ನ್ ಪಾರ್ನೆಲ್, ಎಚ್.ಎಸ್ ಶರತ್, ರಾಹುಲ್ ಶರ್ಮಾ, ಲಕ್ಷ್ಮಿ ರತನ್ ಶುಕ್ಲಾ, ರಾಹುಲ್ ಶರ್ಮಾ, ರಾಸ್ ಟೇಲರ್, ಮನೋಜ್ ತಿವಾರಿ, ಸೌರಬ್ ತಿವಾರಿ, ಜಯ್ದೇವ್ ಉನಾದ್ಕತ್, ಮುರಳಿ ವಿಜಯ್ ಜಯಂತ್ ಯಾದವ್
ಕೆವಿನ್ ಅಲಭ್ಯ
ಲಂಡನ್: ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ಸನ್, ಗುರುವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ತಿಂಗಳು ಸರ್ರೆ ಕ್ರಿಕೆಟ್ತಂಡದ ಅಭ್ಯಾಸದ ವೇಳೆ ಬಲಗೈನ ಕಿರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯ ಸಂಪೂರ್ಣವಾಗಿ ಗುಣಮುಖಾವಾಗದಿರುವ ಹಿನ್ನೆಲೆಯಲ್ಲಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕೆವಿನ್ ಪೀಟರ್ಸನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನು ಕೆಲವು ದಿನಗಳ ಅಗತ್ಯವಿದೆ. ಹಾಗಾಗಿ ಮೊದಲ ಪಂದ್ಯಕ್ಕೆ ಅವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಆತ ತಂಡದ ಪ್ರಮುಖ ಆಟಗಾರನಾಗಿದ್ದು, ಹಾಗಾಗಿ ಇದು ತಂಡಕ್ಕೆ ಹಿನ್ನಡೆ ಎಂದು ಡೆಲ್ಲಿ ತಂಡದ ಸಹಾಯಕ ಎರಿಕ್ ಸಿಮನ್ಸ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಕೆವಿನ್ ಪೀಟರ್ಸನ್ ಸಂಪೂರ್ಣ ಗುಣಮುಖರಾಗುವವರೆಗೂ ಕಾಯುತ್ತೇವೆ. ಪರಿಸ್ಥಿತಿ ಯಾವ ರೀತಿ ಮುಂದುವರಿಯುತ್ತದೆ ಎಂಬುದನ್ನು ಕಾದುನೋಡಬೇಕು. ಆದರೆ ಮೊದಲ ಪಂದ್ಯಕ್ಕೆ ಅವರನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಪಂದ್ಯಾವಳಿಯ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಸಮಯ
ಏ.16 ಮುಂಬೈ ಇಂಡಿಯನ್ಸ್-ಕೋಲ್ಕತಾ ನೈಟ್ ರೈಡರ್ಸ್ ಅಬುಧಾಬಿ 8.00
ಏ.17 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಡೆಲ್ಲಿ ಡೇರ್ಡೆವಿಲ್ಸ್ ಶಾರ್ಜಾ 8.00
ಏ.18 ಚೆನ್ನೈ ಸೂಪರ್ ಕಿಂಗ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಅಬುಧಾಬಿ 4.00
ಏ.18 ಸನ್ರೈಸರ್ಸ್ ಹೈದರಾಬಾದ್-ರಾಜಸ್ಥಾನ ರಾಯಲ್ಸ್ ಅಬುಧಾಬಿ 8.00
ಏ.19 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ ದುಬೈ 4.00
ಏ.19 ಕೋಲ್ಕತಾ ನೈಟ್ ರೈಡರ್ಸ್-ಡೆಲ್ಲಿ ಡೇರ್ಡೆವಿಲ್ಸ್ ದುಬೈ 8.00
ಏ.20 ರಾಜಸ್ಥಾನ ರಾಯಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಶಾರ್ಜಾ 8.00
ಏ.21 ಚೆನ್ನೈ ಸೂಪರ್ ಕಿಂಗ್ಸ್-ಡೆಲ್ಲಿ ಡೇರ್ಡೆವಿಲ್ಸ್ ಅಬಧಾಬಿ 8.00
ಏ.22 ಕಿಂಗ್ಸ್ ಇಲೆವೆನ್ ಪಂಜಾಬ್-ಸನ್ರೈಸರ್ಸ್ ಹೈದರಾಬಾದ್ ಶಾರ್ಜಾ 8.00
ಏ.23 ರಾಜಸ್ಥಾನ ರಾಯಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ದುಬೈ 8.00
ಏ.24 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್ ಶಾರ್ಜಾ 8.00
ಏ.25 ಸನ್ರೈಸರ್ಸ್ ಹೈದರಾಬಾದ್-ಡೆಲ್ಲಿ ಡೇರ್ಡೆವಿಲ್ಸ್ ದುಬೈ 4.00
ಏ.25 ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ದುಬೈ 8.00
ಏ.26 ರಾಜಸ್ಥಾನ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಬುಧಾಬಿ 4.00
ಏ.26 ಕೋಲ್ಕತಾ ನೈಟ್ ರೈಡರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಅಬುಧಾಬಿ 8.00
ಏ.27 ಡೆಲ್ಲಿ ಡೇರ್ಡೆವಿಲ್ಸ್-ಮುಂಬೈ ಇಂಡಿಯನ್ಸ್ ಶಾರ್ಜಾ 4.00
ಏ.27 ಸನ್ರೈಸರ್ಸ್ ಹೈದರಾಬಾದ್-ಚೆನ್ನೈ ಸೂಪರ್ ಕಿಂಗ್ಸ್ ಶಾರ್ಜಾ 8.00
ಏ.28 ಕಿಂಗ್ಸ್ ಇಲೆವೆನ್ ಪಂಜಾಬ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ದುಬೈ 8.00
ಏ.29 ಕೋಲ್ಕತಾ ನೈಟ್ ರೈಡರ್ಸ್-ರಾಜಸ್ಥಾನ ರಾಯಲ್ಸ್ ಅಬುಧಾಬಿ 8.00
ಏ.30 ಮುಂಬೈ ಇಂಡಿಯನ್ಸ್-ಸನ್ರೈಸರ್ಸ್ ಹೈದರಾಬಾದ್ ದುಬೈ 8.00
ಮೇ 2 ಚೆನ್ನೈ ಸೂಪರ್ ಕಿಂಗ್ಸ್-ಕೋಲ್ಕತಾ ನೈಟ್ ರೈಡರ್ಸ್ ರಾಂಚಿ 8.00
ಮೇ 3 ಮುಂಬೈ ಇಂಡಿಯನ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಬೈ 4.00
ಮೇ 3 ಡೆಲ್ಲಿ ಡೇರ್ಡೆವಿಲ್ಸ್-ರಾಜಸ್ಥಾನ ರಾಯಲ್ಸ್ ದೆಹಲಿ 8.00
ಮೇ 4 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್ರೈಸರ್ಸ್ ಹೈದರಾಬಾದ್ ಬೆಂಗಳೂರು 8.00
ಮೇ 5 ರಾಜಸ್ಥಾನ ರಾಯಲ್ಸ್-ಕೋಲ್ಕತಾ ನೈಟ್ ರೈಡರ್ಸ್ ಅಹ್ಮದಾಬಾದ್ 4.00
ಮೇ 5 ಡೆಲ್ಲಿ ಡೇರ್ಡೆವಿಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ದೆಹಲಿ 8.00
ಮೇ 6 ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ 8.00
ಮೇ 7 ಡೆಲ್ಲಿ ಡೇರ್ಡೆವಿಲ್ಸ್-ಕೋಲ್ಕತಾ ನೈಟ್ ರೈಡರ್ಸ್ ದೆಹಲಿ 4.00
ಮೇ 7 ಕಿಂಗ್ಸ್ ಇಲೆವೆನ್ ಪಂಜಾಬ್-ಚೆನ್ನೈ ಸೂಪರ್ ಕಿಂಗ್ಸ್ ಕಟಕ್ 8.00
ಮೇ 8 ರಾಜಸ್ಥಾನ ರಾಯಲ್ಸ್-ಸನ್ರೈಸರ್ಸ್ ಹೈದರಾಬಾದ್ ಅಹ್ಮದಾಬಾದ್ 8.00
ಮೇ 9 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್ ಬೆಂಗಳೂರು 8.00
ಮೇ 10 ಡೆಲ್ಲಿ ಡೇರ್ಡೆವಿಲ್ಸ್-ಸನ್ರೈಸರ್ಸ್ ಹೈದರಾಬಾದ್ ದೆಹಲಿ 4.00
ಮೇ 10 ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ 8.00
ಮೇ 11 ಕಿಂಗ್ಸ್ ಇಲೆವೆನ್ ಪಂಜಾಬ್-ಕೋಲ್ಕತಾ ನೈಟ್ ರೈಡರ್ಸ್ ಕಟಕ್ 4.00
ಮೇ 11 ರಾಯಲ್ ಚಾಲೆಂಜರ್ಸ್ ಬೆಂಗಳೂರು-ರಾಜಸ್ಥಾನ ರಾಯಲ್ಸ್ ಬೆಂಗಳೂರು 8.00
ಮೇ 12 ಸನ್ರೈಸರ್ಸ್ ಹೈದರಾಬಾದ್-ಮುಂಬೈ ಇಂಡಿಯನ್ಸ್ ಹೈದರಾಬಾದ್ 8.00
ಮೇ 13 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಡೆಲ್ಲಿ ಡೇರ್ಡೆವಿಲ್ಸ್ ಬೆಂಗಳೂರು 8.00
ಮೇ 14 ಸನ್ರೈಸರ್ಸ್ ಹೈದರಾಬಾದ್-ಕಿಂಗ್ಸ್ ಇಲೆವೆನ್ ಪಂಜಾಬ್ ಹೈದರಾಬಾದ್ 4.00
ಮೇ 14 ಕೋಲ್ಕತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್ ಕೋಲ್ಕತಾ 8.00
ಮೇ 15 ರಾಜಸ್ಥಾನ ರಾಯಲ್ಸ್-ಡೆಲ್ಲಿ ಡೇರ್ಡೆವಿಲ್ಸ್ ಅಹ್ಮದಾಬಾದ್ 8.00
ಮೇ 18 ಚೆನ್ನೈ ಸೂಪರ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ 4.00
ಮೇ 18 ಸನ್ರೈಸರ್ಸ್ ಹೈದರಾಬಾದ್-ಕೋಲ್ಕತಾ ನೈಟ್ ರೈಡರ್ಸ್ ಹೈದರಾಬಾದ್ 8.00
ಮೇ 19 ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ಅಹ್ಮದಾಬಾದ್ 4.00
ಮೇ 19 ಡೆಲ್ಲಿ ಡೇರ್ಡೆವಿಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ದೆಹಲಿ 8.00
ಮೇ 20 ಸನ್ರೈಸರ್ಸ್ ಹೈದರಾಬಾದ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್ 4.00
ಮೇ 20 ಕೋಲ್ಕತಾ ನೈಟ್ ರೈಡರ್ಸ್-ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತಾ 8.00
ಮೇ 21 ಕಿಂಗ್ಸ್ ಇಲೆವೆನ್ ಪಂಜಾಬ್-ಮುಂಬೈ ಇಂಡಿಯನ್ಸ್ ಮುಂಬೈ 8.00
ಮೇ 22 ಕೋಲ್ಕತಾ ನೈಟ್ ರೈಡರ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತಾ 4.00
ಮೇ 22 ಚೆನ್ನೈ ಸೂಪರ್ ಕಿಂಗ್ಸ್-ಸನ್ರೈಸರ್ಸ್ ಹೈದರಾಬಾದ್ ಚೆನ್ನೈ 8.00
ಮೇ 23 ಮುಂಬೈ ಇಂಡಿಯನ್ಸ್-ಡೆಲ್ಲಿ ಡೇರ್ಡೆವಿಲ್ಸ್ ಮುಂಬೈ 4.00
ಮೇ 23 ಕಿಂಗ್ಸ್ ಇಲೆವೆನ್ ಪಂಜಾಬ್-ರಾಜಸ್ಥಾನ ರಾಯಲ್ಸ್ ಮೊಹಾಲಿ 8.00
ಮೇ 24 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಚೆನ್ನೈ ಸೂಪರ್ ಕಿಂಗ್ಸ್ ಬೆಂಗಳೂರು 4.00
ಮೇ 24 ಕೋಲ್ಕತಾ ನೈಟ್ ರೈಡರ್ಸ್-ಸನ್ರೈಸರ್ಸ್ ಹೈದರಾಬಾದ್ ಕೋಲ್ಕತಾ 8.00
ಮೇ 25 ಕಿಂಗ್ಸ್ ಇಲೆವೆನ್ ಪಂಜಾಬ್-ಡೆಲ್ಲಿ ಡೇರ್ಡೆವಿಲ್ಸ್ ಮೊಹಾಲಿ 4.00
ಮೇ 25 ಮುಂಬೈ ಇಂಡಿಯನ್ಸ್-ರಾಜಸ್ಥಾನ ರಾಯಲ್ಸ್ ಮುಂಬೈ 8.00
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


