ನೈಟ್ರೈಡ್ ಮಾಡಿದ ಡೆವಿಲ್ಸ್
ದುಬೈ: ಆರಂಭಿಕ ಆಘಾತದ ನಡುವೆಯೂ ತಂಡದ ಪ್ರಮುಖ ಬ್ಯಾಟ್ಸ್ಮನ್ ಜೆ.ಪಿ ಡುಮಿನಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಡೇರ್ಡೆವಿಲ್ಸ್ ತಂಡ ಐಪಿಎಲ್ ಏಳನೇ ಆವೃತ್ತಿಯಲ್ಲಿ ಮೊದಲ ಗೆಲವು ದಾಖಲಿಸಿದೆ.
ಶನಿವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ತಂಡ 4 ವಿಕೆಟ್ಗಳ ಅಂತರದಲ್ಲಿ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಗೆಲವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಕೆಕೆಆರ್ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 166 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ಡೆವಿಲ್ಸ್ ತಂಡ 19.3 ಓವರ್ಗಳಲ್ಲಿ 4 ವಿಕೆಟ್ಗೆ 167 ರನ್ ದಾಖಲಿಸಿತು.
ಡೆವಿಲ್ಸ್ಗೆ ಡುಮಿನಿ ಆಸರೆ: ಕೆಕೆಆರ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಡೆವಿಲ್ಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ ಇನಿಂಗ್ಸ್ನ ಮಹತ್ವದ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಜೆ.ಪಿ ಡುಮಿನಿ (ಅಜೇಯ 52, 35 ಎಸೆತ, 3 ಬೌಂಡರಿ, 3 ಸಿಕ್ಸರ್) ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿ, ಗೆಲವಿನ ದಡ ಸೇರಿಸಿದರು. ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ರನೌಟ್ ಆಗುವ ಮೂಲಕ ತಂಡಕ್ಕೆ ಆಘಾತ ಎದುರಾಯಿತು. ನಂತರ ಅಗರ್ವಾಲ್ (26), ಟೇಲರ್ (6) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ದಿನೇಶ್ ಕಾರ್ತಿಕ್ ಹಾಗೂ ಡುಮಿನಿ ತಂಡಕ್ಕೆ 58 ರನ್ಗಳ ಜತೆಯಾಟ ನೀಡಿತು. ಕಾರ್ತಿಕ್ ಔಟಾದ ನಂತರ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಪರಿಣಾಮ ತಂಡ ಗೆಲವಿನ ನಗೆ ಬೀರಲು ಸಾಧ್ಯವಾಯಿತು.
ಉತ್ತಪ್ಪ, ಪಾಂಡೆ ಹೋರಾಟ ವ್ಯರ್ಥ: ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾದ ಜಾಕ್ ಕಾಲಿಸ್ ಹಾಗೂ ನಾಯಕ ಗೌತಮ್ ಗಂಭೀರ್ ಅವರು ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ಸಿಡಿಲು ಬಡಿದಂತಾಯಿತು. ಈ ವೇಳೆ ಜತೆಯಾದ ಕನ್ನಡದ ಕುವರರಾದ ಮನೀಷ್ ಪಾಂಡೆ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ 64 ರನ್ಗಳ ಜತೆಯಾಟ ನೀಡಿ ಆಸರೆಯಾಗಿ ನಿಂತರು. ಕಳೆದ ಪಂದ್ಯದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಂಡೆ, ಈ ಪಂದ್ಯದಲ್ಲೂ ಅಮೂಲ್ಯವಾದ 48 ರನ್ ದಾಖಲಿಸಿ ನದೀಮ್ಗೆ ವಿಕೆಟ್ ಒಪ್ಪಿಸಿದರು. ಆನಂತರ ಉತ್ತಪ್ಪಗೆ ಜತೆಯಾದ ಆಲ್ರೌಂಡರ್ ಶಕಿಬ್ ಅಲ್ ಹಸನ್, ತಂಡದ ರನ್ ವೇಗವನ್ನು ಹೆಚ್ಚಿಸುವತ್ತ ಗಮನ ಹರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ ಅಬ್ಬರದ 57 ರನ್ಗಳ ಜತೆಯಾಟ ನೀಡಿ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು. ರಾಬಿನ್ ಉತ್ತಪ್ಪ (55) ಹಾಗೂ ಶಕಿಬ್ (ಅಜೇಯ 30) ತಂಡ ಮತ್ತೆ ಪಂದ್ಯದಲ್ಲಿ ಸುಸ್ಥಿತಿಗೆ ತಲುಪುವಂತೆ ಮಾಡಿದರು.
ಸ್ಕೋರ್ ವಿವರ
ಕೋಲ್ಕತಾ ನೈಟ್ರೈಡರ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 166
ಕಾಲಿಸ್ ಸಿ ಟೇಲರ್ ಬಿ ಶಮಿ 0 (1)
ಗಂಭೀರ್ ಸಿ ಡುಮಿನಿ ಬಿ ಕೌಲ್ಟರ್ ನೀಲ್ 0 (4)
ಮನೀಷ್ ಪಾಂಡೆ ಬಿ ನಿಶಾಮ್ 48 (42)
ಉತ್ತಪ್ಪ ಸಿ ಟೇಲರ್ ಬಿ ಉನದ್ಕತ್ 55 (41)
ಶಕಿಬ್ ಅಜೇಯ 30 (22)
ಯೂಸುಫ್ ಬಿ ಕೌಲ್ಟರ್ ನೀಲ್ 11 (8)
ಸೂರ್ಯ ಕುಮಾರ್ ಅಜೇಯ 8 (3)
ಇತರೆ: (ಲೆಗ್ ಬೈ 1, ವೈಡ್ 12, ನೊಬಾಲ್ 1) ಒಟ್ಟು 14
ವಿಕೆಟ್ ಪತನ: 1-1, 2-11, 3-75, 4-132, 5-157
ಬೌಲಿಂಗ್ ವಿವರ
ಮೊಹ್ಮದ್ ಶಮಿ 4-0-33-1
ಕೌಲ್ಟರ್ ನೀಲ್ 4-0-27-2
ಉನದ್ಕತ್ 4-0-25-1
ನಿಶಾಮ್ 2-0-26-0
ನದೀಮ್ 3-0-29-1
ಡುಮಿನಿ 3-0-25-0
ಡೆಲ್ಲಿ ಡೇರ್ಡೆವಿಲ್ಸ್ 19.3 ಓವರ್ಗಳಲ್ಲಿ 6 ವಿಕೆಟ್ಗೆ 167
ಮುರಳಿ ವಿಜಯ್ ರನೌಟ್ (ಮನೀಷ್) 0 (2)
ಮಾಯಾಂಕ್ ಅಗರ್ವಾಲ್ ಸಿ ಚಾವ್ಲಾ ಬಿ ಮಾರ್ಕೆಲ್ 26 (14)
ದಿನೇಶ್ ಕಾರ್ತಿಕ್ ಎಲ್ಬಿ ನಾರಾಯಣ್ 56 (40)
ರಾಸ್ ಟೇಲರ್ ಬಿ ಕಾಲಿಸ್ 6 (9)
ಜೆ.ಪಿ ಡುಮಿನಿ ಅಜೇಯ 52 (35)
ಮನೋಜ್ ತಿವಾರಿ ಸಿ ತಿವಾರಿ ಬಿ ಮಾರ್ಕೆಲ್ 8 (6)
ನಿಶಾಮ್ ಸಿ ಪಠಾಣ್ ಬಿ ಚಾವ್ಲಾ 8 (11)
ಕೌಲ್ಟರ್ ನೀಲ್ ಅಜೇಯ 0 (0)
ಇತರೆ: (ಲೆಗ್ ಬೈ 6, ವೈಡ್ 5) ಒಟ್ಟು 11
ವಿಕೆಟ್ ಪತನ: 1-10, 2-39, 3-60, 4-118, 5-127, 6-161
ಬೌಲಿಂಗ್ ವಿವರ
ವಿನಯ್ ಕುಮಾರ್ 4-0-35-0
ಮಾರ್ನ್ ಮಾರ್ಕೆಲ್ 4-0-41-2
ಶಕಿಬ್ ಅಲ್ ಹಸನ್ 3-0-25-0
ಜಾಕ್ ಕಾಲಿಸ್ 2-0-15-1
ಪಿಯೂಷ್ ಚಾವ್ಲಾ 2.3-0-27-1
ಸುನಿಲ್ ನಾರಾಯಣ್ 4-0-18-1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

