ಕ್ರೀಡೆ

ಪಡುವಂಡ, ಕುತ್ತಂಡ ರೋಚಕ ಮುನ್ನಡೆ

Published On :

ವಿರಾಜಪೇಟೆ: ತಾತಂಡ ಹಾಕಿ ಕಪ್ ಪಂದ್ಯಾವಳಿಯ 8ನೇ ದಿನ ಭಾನುವಾರದ ಮುಖಾಮುಖಿಯಲ್ಲಿ 14 ತಂಡಗಳು ಮುನ್ನಡೆ ಸಾಧಿಸಿವೆ.
1ನೇ ಮೈದಾನ: ಮೈದಾನ 1ರಲ್ಲಿ ನಡೆದ ಪಂದ್ಯದಲ್ಲಿ ಪಡುವಂಡ ಮತ್ತು ಮಾಣಿದ ತಂಡಗಳು ಬೆಳಗ್ಗಿನ ಸಮಯದಲ್ಲಿ ಉತ್ತಮ ಪ್ರದರ್ಶನ ಪ್ರೇಕ್ಷಕರು ಹುಬ್ಬೇರುವಂತೆ ಮಾಡಿದವು. ಎರಡು ತಂಡಗಳು ಪಂದ್ಯದ ಅಂತಿಮ ಹಂತದವರೆಗೆ 1-1 ಸಮಬಲ ಸಾಧಿಸಿದ್ದವು. ಆದರೆ ಸಡನ್‌ಡೆತ್‌ನಲ್ಲಿ ಪಡುವಂಡ ತಂಡ 1 ಗೋಲು ಗಳಿಸಿ ಜಯದ ಮಾಲೆ ತನ್ನ ಕೊರಳಿಗೇರಿಸಿಕೊಂಡಿತು.
ತೀವ್ರ ಹಣಾಹಣಿ: ಭಾರಿ ಪೈಪೋಟಿಯಿಂದ ಕೂಡಿದ್ದ ಕುಟ್ಟಂಡ ಕಾರ್ನಾಡು ಮತ್ತು ತನ್ನುವಂಡ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು 2-2 ಸಮಬಲ ಸಾಧಿಸಿದವು. ಕೊನೆಯಲ್ಲಿ ಟೈಬ್ರೇಕರ್‌ನಲ್ಲಿ ಕುಟ್ಟಂಡ ತಂಡ ಪೊನ್ನುವಂಡ ತಂಡಗಳಿಂದ 4-2 ಗೋಲುಗಳಿಂದ ಮಣಿಸಿತು.     ಮುಂದಿನ ಪಂದ್ಯದಲ್ಲಿ ಪಾಲೇಖಂಡ ತಂಡದ ಭರ್ಜರಿ ಪ್ರದರ್ಶನದ ಮುಂದೆ ಚೆನ್ನಪಂಡ ತಂಡ ಮಂಕಾಯಿತು.
ಪೇರರ ತಂಡ ಮುಲ್ಲಂಡ(ಚೆಟ್ಟಳ್ಳಿ) ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಬಳಿಕ ನಡೆದ ಪಂದ್ಯದಲ್ಲಿ ಪಂದ್ಯೇಟಿರ ತಂಡ ನನ್ನವಂಡ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.
ಪುಡ್ರಂಡ ಮತ್ತು ಮಲ್ಲಚಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಚಿರ ತಂಡ 5-1 ಗೋಲುಗಳ ಅಂತರದಿಂದ ಜಯ ದಾಖಲಿಸಿತು.
ಸುಲಭ ಜಯ: ಚೋಯಮಂಡ ಮತ್ತು ಕೋಚಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಯಮಂಡ ತಂಡ 4-0 ಗೋಲುಗಳ ಅಂತರದಿಂದ ಜಯ ದಾಖಲಿಸಿತು.
2ನೇ ಮೈದಾನದಲ್ಲಿ ನಡೆದ ಪುಲ್ಲಂಗಡ ಮತ್ತು ಸೋಮಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಸೋಮಯಂಡ ತಂಡದ ಪರವಾಗಿ ಸಂಜು ಅಪ್ಪಯ್ಯನವರು ಉತ್ತಮ ಪ್ರದರ್ಶನ ನೀಡಿ ತಂಡ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೋಮಯಂಡ ತಂಡ 4-1 ಗೋಲುಗಳ ಅಂತರದಿಂದ ಜಯ ದಾಖಲಿಸಿತು. ಚಂದುರ ಮತ್ತು ಚಂಬಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂದುರ ತಂಡವು ಚಂಬಂಡ ತಂಡವನ್ನು 5-0 ಗೋಲುಗಳಿಂದ ಮಣಿಸಿತು.  ಕಂಬೆಯಂಡ ಮತ್ತು ಮುಕ್ಕಾಟಿರ (ಡೇ 3) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ ಕಂಬೆಯಂಡ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು.
 ಮುಂದಿನ ಮುಂಡಿಯವಳಂಡ ಮತ್ತು ಐಚಿಟ್ಟೀರ ನಡುವಿನ ಪಂದ್ಯದಲ್ಲಿ ಮುಂಡಿಯವಳಂಡ ತಂಡ 4-0 ಗೋಲುಗಳ ಅಂತರದಿಂದ ಸೋಲಿಸಿತು.
ಪತ್ತಡ ಉತ್ತಮ ಪ್ರದರ್ಶನ: ಪೊಲ್ಲಂಡ ಮತ್ತು ಪತ್ತಡ ನಡುವಿನ ಪಂದ್ಯದಲ್ಲಿ ಪತ್ತಡ ತಂಡ ಉತ್ತಮ ಪ್ರದರ್ಶನ ನೀಡಿ, ಪೊಲ್ಲಂಡ ತಂಡವನ್ನು 5-1 ಅಂತರದಿಂದ ಮಣಿಸಿತು. ಪೊಲ್ಲೇರ ಮತ್ತು ಮುಲ್ಲೇರ ನಡುವಿನ ಪಂದ್ಯದಲ್ಲಿ ಮುಲ್ಲೇರ ತಂಡ 4-1 ಅಂತರದಿಂದ ವಿಜಯ ಸಾಧಿಸಿತು. ಪೊಲ್ಲೇರ ತಂಡದ ಪರವಾಗಿ ಸ್ಕ್ಯಾಟಿ ಮಂದಣ್ಣ 2 ಗೋಲು ದಾಖಲಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.