ಕ್ರೀಡೆ

ಫಿಕ್ಸಿಂಗ್: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಫಿಕ್ಸಿಂಗ್: ತೀರ್ಪು ಕಾಯ್ದಿರಿಸಿದ ಸುಪ್ರೀಂ
Published On :

ನವದೆಹಲಿ: ಐಪಿಎಲ್ ಸ್ಪಾಟ್ ಫೀಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸೇರಿದಂತೆ ಇತರ 12 ಕ್ರಿಕೆಟಿಗರ ವಿರುದ್ಧ ತನಿಖೆಯನ್ನು ಮುದ್ಗಲ್ ಸಮಿತಿ ನಡೆಸುವುದನ್ನು ಬಿಸಿಸಿಐ ವಿರೋಧಿಸಿದ್ದು, ಈ ಕುರಿತ ಅಂತಿಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.      ನ್ಯಾ.ಎ.ಕೆ ಪಟ್ನಾಯಕ್ ನೇತೃತ್ವದ ಪೀಠವು, ಈ ತನಿಖೆಯನ್ನು ಮುದ್ಗಲ್ ಸಮಿತಿಯೇ ನಡೆಸಲಿ ಎಂಬ ಸಲಹೆ ನೀಡಿತ್ತು. ಆದರೆ, ಈ ಸಮಿತಿ ಪ್ರಕರಣದ ಮುಂದಿನ ತನಿಖೆಯನ್ನು ನಡೆಸಬಾರದು ಎಂದು ಎನ್.ಶ್ರೀನಿವಾಸನ್ ವಿರೋಧಿಸಿದ್ದು, ತನಿಖೆ ನಡೆಸಲು ಹೊಸ ಸಮಿತಿ ರಚನೆ ಮಾಡಲು ಮನವಿ ಮಾಡಿದರು. ಹಾಗಾಗಿ ಸುಪ್ರೀಂ ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
ಮುದ್ಗಲ್ ಸಮಿತಿ ನೀಡಿರುವ ವರದಿಯಲ್ಲಿನ ಆಧಾರದ ಮೇಲೆ ಶ್ರೀನಿವಾಸನ್ ಹಾಗೂ ಇತರೆ 12 ಆಟಗಾರರ ಬಗೆಗೆ ತಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಪೂರ್ಣ ಪ್ರಮಾಣದ ತನಿಖಾ ಸಮಿತಿ ರಚನೆಯಾಗಿ ಅದು ತನಿಖೆ ನಡೆಸಿದ ನಂತರ ಅಂತಿಮ ತೀರ್ಮಾನಕ್ಕೆ ಬರುವುದಾಗಿ ಪೀಠ ತಿಳಿಸಿದೆ.
ಈ ತನಿಖೆಗೆ ಹೊಸ ತನಿಖಾ ಸಮಿತಿಯನ್ನು ರಚಿಸಿದರೆ, ವರದಿಯಲ್ಲಿನ ಆರೋಪವನ್ನು ಇತರರಿಗೆ ತಿಳಿಸಬೇಕಾಗುತ್ತದೆ. ಹಾಗಾಗಿ ಈ ಪ್ರಕರಣದಲ್ಲಿನ ಆರೋಪವನ್ನು ರಹಸ್ಯವಾಗಿ ಇಡಲು, ಈ ಪ್ರಕರಣದ ಮುಂದಿನ ತನಿಖೆಯನ್ನು ಮುಕುಲ್ ಮದ್ಗಲ್ ಸಮಿತಿ ನಡೆಸಲಿ ಎಂದು ಸಲಹೆ ನೀಡಿತ್ತು.
ಇದಕ್ಕೂ ಮೊದಲು ಮುದ್ಗಲ್ ಸಮಿತಿ ಶ್ರೀನಿವಾಸನ್ ಹಾಗೂ ಇತರೆ 12 ಆಟಗಾರರ ವಿರುದ್ಧದ ತನಿಖೆಯನ್ನು ನಡೆಸಲು ಸಾಧ್ಯವೆ ಎಂದು ಸುಪ್ರೀಂ ಕೋರ್ಟ್ ಕೇಳಿತ್ತು.
ತನಿಖೆಗೆ ಮುದ್ಗಲ್ ಒಪ್ಪಿಗೆ: ಸುಪ್ರೀಂ ಕೋರ್ಟ್ ಪ್ರಸ್ತಾವವನ್ನು ಒಪ್ಪಿಕೊಂಡಿರುವ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು, ತಮ್ಮ ನೂತನ ತನಿಖಾ ತಂಡದಲ್ಲಿನ ಸದಸ್ಯರ ಪಟ್ಟಿಯನ್ನು ಕೋರ್ಟ್‌ಗೆ ನೀಡಿದ್ದಾರೆ.
ತನ್ನ ತನಿಖಾ ಸಮಿತಿಯಲ್ಲಿ ಐಪಿಎಸ್ ಅಧಿಕಾರಿ ಹಾಗೂ ಸಿಬಿಐನ ಮಾಜಿ ವಿಶೇಷ ನಿರ್ದೇಶಕರಾಗಿದ್ದ ಎಂ.ಎಲ್ ಶರ್ಮಾ, ಜತೆಗೆ ದೆಹಲಿ, ಚೆನ್ನೈ ಹಾಗೂ ಮುಂಬೈನ ಉನ್ನತ ಪೊಲೀಸ್ ಅಧಿಕಾರಿ ಮತ್ತು ಗೌರವಾನ್ವಿತ ಮಾಜಿ ಕ್ರಿಕೆಟ್ ಆಟಗಾರರೊಬ್ಬರನ್ನು ಹೊಂದಲು ಮುದ್ಗಲ್ ಅವರು ಇಚ್ಛಿಸಿದ್ದಾರೆ.
ಅಲ್ಲದೆ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು 4 ತಿಂಗಳ ಕಾಲಾವಕಾಶ ಕೋರಲಾಗಿದೆ.
ಐಸಿಸಿಗೆ ಕಾಲಿಡಲು ಶ್ರೀನಿಗೆ ಅನುಮತಿ: ಇನ್ನು ಶ್ರೀನಿವಾಸನ್ ಅವರು ಬಿಸಿಸಿಐ ಪ್ರತಿನಿಧಿಯಾಗಿ ಐಸಿಸಿಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಬೇಕು ಎಂದು ಬಿಹಾರ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಮನವಿ ಸಲ್ಲಿಸಿದ್ದ ನಳಿನಿ ಚಿದಂಬರಮ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತು.
ಸದ್ಯದ ಮಟ್ಟಿಗೆ ನಾವು ತನಿಖಾ ಸಮಿತಿಯ ವಿಚಾರದ ಬಗ್ಗೆ ಮಾತ್ರ ಗಮನ ಹರಿಸೋಣ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಈ ಮೂಲಕ ಶ್ರೀನಿವಾಸನ್  ಅವರು ಬಿಸಿಸಿಐನ ಪ್ರತಿನಿಧಿಯಾಗಿ ಐಸಿಸಿ ಸಭೆ, ಮಾರಂಭಗಳಲ್ಲಿ ಭಾಗವಹಿಸಲು ಯಾವುದೇ ತೊಡಕುಗಳಿಲ್ಲದಂತಾಗಿದೆ. ಅಲ್ಲದೆ ಹೊಸ ರೂಪ ಪಡೆದಿರುವ ಐಸಿಸಿಗೆ ಜೂನ್‌ನಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.