ಆರ್‌ಸಿಎ ಫಲಿತಾಂಶ ಪ್ರಕಟಿಸಲು ಸುಪ್ರೀಂ ಸಮ್ಮತಿ

ನವದೆಹಲಿ: ವಿವಾದದ ಹಿನ್ನೆಲೆಯಲ್ಲಿ ಪ್ರಕಟವಾಗದೇ ಉಳಿದಿದ್ದ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ (ಆರ್‌ಸಿಎ) ಚುನಾವಣಾ ಫಲಿತಾಂಶವನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಅಲ್ಲದೆ, ಫಲಿತಾಂಶವನ್ನು ಮೇ 6ರಂದು ಪ್ರಕಟಿಕಸುವಂತೆ ಚುನಾವಣಾ ಅಧೀಕ್ಷಕರಿಗೆ ಸೂಚನೆ ನೀಡಿದೆ. ಆರ್‌ಸಿಎ ಚುನಾವಣೆಯ ಫಲಿತಾಂಶ, ಐಪಿಎಲ್ ಮಾಜಿ ಕಮಿಶನರ್ ಲಲಿತ್ ಮೋದಿ ಪರವಾಗಿ ಬರಬಹುದು ಎಂದು ಫಲಿತಾಂಶ ಪ್ರಕಟಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಸಿಸಿಐ ವಿರುದ್ಧ ಗುಡುಗಿರುವ, ನ್ಯಾಯಮೂರ್ತಿ ಎ. ಆರ್ ದೇವ್ ನೇತೃತ್ವದ ನ್ಯಾಯಪೀಠ, ಮೋಹರು ಹಾಕಿರುವ ಲಕೋಟೆಯಲ್ಲಿರುವ ಫಲಿತಾಂಶವನ್ನು ಚುನಾವಣೆ ಅಧೀಕ್ಷಕರಾದ ನಿವೃತ್ತ ನ್ಯಾಯಮೂರ್ತಿ ಎನ್.ಎಂ. ಕಾಸ್ಲಿವಾಲ ಅವರಿಗೆ ಕಳುಹಿಸಿರಿ. ಅವರು ಫಲಿತಾಂಶವನ್ನು ಪ್ರಕಟಿಸಲಿ ಎಂದು ನಿರ್ದೇಶನ ನೀಡಿದೆ.
ಆರ್‌ಸಿಎ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಯಾರಿಗಾದರೂ ಅನ್ಯಾಯವಾಗಿದೆ ಎನಿಸಿದರೆ, ಅವರು ಸೂಕ್ತ ಪ್ರಾಧಿಕಾರದ ಎದುರಿಗೆ ಅದನ್ನು ಪ್ರಶ್ನಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಆರ್‌ಸಿಎ ಚುನಾವಣೆಯ ಮುಖ್ಯ ಅಧೀಕ್ಷಕರನ್ನಾಗಿ ನಿವೃತ್ತ ನ್ಯಾಯಮೂರ್ತಿ ಕಾಸ್ಲಿವಾಲ ಅವರನ್ನು ನವೆಂಬರ್ 20, 2013ರಂದು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು.
ಸುಪ್ರೀಂ ಕೋರ್ಟ್ ನೇಮಕ ಮಾಡಿದ ಅಧೀಕ್ಷಕರ ಎದುರಿನಲ್ಲೇ ಡಿ. 19ರಂದು ನಡೆದ ಚುನಾವಣೆಯಲ್ಲಿ ಆರ್‌ಸಿಎ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಲಲಿತ್ ಮೋದಿ ಅವರಿಗೆ ನ್ಯಾಯಾಲಯ ಅನುಮತಿ ನೀಡಿತ್ತು. ಐಪಿಎಲ್ ಮುಖ್ಯಸ್ಥರಾಗಿ ಅಶಿಸ್ತು ಮತ್ತು ಹಣಕಾಸು ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಬಿಸಿಸಿಐ, ಕಳೆದ ವರ್ಷ ಸೆಪ್ಟೆಂಬರ್ 25ರಂದು ಮೋದಿ ಮೇಲೆ ಆಜೀವ ನಿಷೇಧ ಹೇರಿತ್ತು. ಮೋದಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಚುನಾವಣೆ ವಿವಾದದ ಗೂಡಾಗಿ ಮಾರ್ಪಟ್ಟಿತ್ತು.
ಚುನಾವಣೆ ನಡೆಯುವುದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಬಿಸಿಸಿಐ, ಚುನಾವಣೆಯಲ್ಲಿ ಭಾಗವಹಿಸಲು ಮೋದಿ ಅವರಿಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿತ್ತು.
ಅಲ್ಲದೆ, ಮೋದಿ ಅವರನ್ನು ಚುನುವಣೆಯಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟ, ರಾಜಸ್ಥಾನ ಕ್ರೀಡಾ ಕಾಯ್ದೆ 2005ರ ಕುರತು ಬಿಸಿಸಿಐ ಕೋರ್ಟ್ ಮೊರೆ ಹೋಗಿತ್ತು. ನಾವು ಆಜೀವ ನಿಷೇಧ ಹೇರಿರುವ ವ್ಯಕ್ತಿಯನ್ನು ಆರ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನುಮತಿ ನೀಡಬಾರದು ಎಂಬುದು ಬಿಸಿಸಿಐ ವಾದವಾಗಿತ್ತು.
ಐಪಿಎಲ್‌ನಲ್ಲಿ ಮೋದಿ ಅವರು ಹಣಕಾಸು ಅವ್ಯವಹಾರ, ಅಶಿಸ್ತು ಹಿನ್ನೆಲೆಯಲ್ಲಿ ಅವರನ್ನು ತಪ್ಪಿತಸ್ಥ ಎಂದು ಗುರುತಿಸಿದ್ದ, ಅರುಣ್ ಜೇಟ್ಲೀ ಹಾಗೂ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನೊಳಗೊಂಡ ಬಿಸಿಸಿಐನ ಶಿಸ್ತು ಸಮಿತಿ 134 ಪುಟಗಳ ಮೋದಿ ವಿರುದ್ಧದ ವರದಿಯೊಂದನ್ನು ಜುಲೈ 2013ರಂದು ಬಿಸಿಸಿಐಗೆ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


