ಕ್ರೀಡೆ

ಟಿಟಿಯಲ್ಲಿ ತವರಿಗೆ ಮೊದಲ ಪದಕ ಖಚಿತಪಡಿಸಿದ ಕಮಲ್-ಆಂಥೋಣಿ

ಟಿಟಿಯಲ್ಲಿ ತವರಿಗೆ ಮೊದಲ ಪದಕ ಖಚಿತಪಡಿಸಿದ ಕಮಲ್-ಆಂಥೋಣಿ
Published On :

ಗ್ಲಾಸ್ಗೋ: ಅನುಭವಿ ಆಟಗಾರರಾದ ಶರತ್ ಕಮಲ್ ಮತ್ತು ಆಂಥೋಣಿ ಅಮಲ್‌ರಾಜ್ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವುದನ್ನು ಈ ಜೋಡಿ ಖಚಿತಪಡಿಸಿದೆ. ಶುಕ್ರವಾರ ನಡೆದ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಶರತ್ ಮತ್ತು ಆಂಥೋಣಿ 11-7, 12-10, 11-3 ಅಂಕಗಳಿಂದ ಸಿಂಗಾಪುರದ ಯಾಂಗ್ ಝೀ ಮತ್ತು ಝಾನ್ ಜಿಯಾನ್ ಅವರನ್ನು ಪರಾಭವಗೊಳಿಸಿ ಚಿನ್ನದ ಬೇಟೆಯ ಸುತ್ತಿಗೆ ಅರ್ಹತೆ ಪಡೆದುಕೊಂಡರು.
ಚಾಂಪಿಯನ್‌ಪಟ್ಟದ ಸೆಣಸಿನಲ್ಲಿ ಭಾರತದ ಜೋಡಿಯು ಸಿಂಗಾಪುರದ ಮತ್ತೊಂದು ಜೋಡಿಯಾದ ಗಾವೊ ನಿಂಗ್ ಮತ್ತು ಲೀ ಹೂ ಅವರ ವಿರುದ್ಧ ಸೆಣಸಲಿದ್ದಾರೆ. ಈ ಮಧ್ಯೆ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್, ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು ನೈಜೀರಿಯಾದ ಸೆಗುನ್ ಟೊರಿಯೋಲಾ ಅವರನ್ನು 11-5, 11-6, 11-7, 11-4ರಿಂದ ಮಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.