ರಾಹುಲ್, ಪ್ರತಿಭಾಗೆ ಪ್ರಶಸ್ತಿ

ಬೆಂಗಳೂರು: ಉದಯೋನ್ಮುಖ ಪ್ರತಿಭೆಗಳಾದ ಕರ್ನಾಟಕದ ರಾಹುಲ್ ಶಂಕರ್ ಮತ್ತು ಪಿ.ಎನ್. ಪ್ರತಿಭಾ ಅವರು 16 ವರ್ಷದೊಳಗಿನವರ ನಟೇಶ್ ಬ್ಯಾಟರೀಸ್-ಅಮರಾನ್ ಎಐಟಿಎ ಚಾಂಪಿಯನ್ಶಿಪ್ ಸಿರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಟಾಪ್ಸ್ಪಿನ್ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ಜೆ.ಪಿ. ನಗರದಲ್ಲಿ ನಡೆದ ಟೂರ್ನಿಯಲ್ಲಿ ಮಂಗಳವಾರ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಾಹುಲ್ ಶಂಕರ್, 6-4, 6-4 ನೇರ ಸೆಟ್ಗಳಿಂದ ಕರ್ನಾಟಕದವರೇ ಆದ ಹರಿ ಸಿಂಗ್ರನ್ನು ಸೋಲಿಸಿದರು.
ಒಂದು ಗಂಟೆ 30 ನಿಮಿಷಗಳ ಕಾಲ ನಡೆದ ಅಂತಿಮ ಸಮರದಲ್ಲಿ ರಾಹುಲ್ ಶಂಕರ್, ಉತ್ತಮ ಪ್ರದರ್ಶನ ನೀಡುವ ಮೂಲಕ ಹರಿ ಸಿಂಗ್ ಒಡ್ಡಿದ್ದ ಕಠಿಣ ಸವಾಲುಗಳನ್ನು ಮೆಟ್ಟಿನಿಲ್ಲುವಲ್ಲಿ ಸಫಲರಾದರು.
ಅದೇ ರೀತಿ ಬಾಲಕಿಯರ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಪಿ.ಎನ್. ಪ್ರತಿಭಾ ಕೂಡ ತಮ್ಮ ರಾಜ್ಯದವರೇ ಆದ ಅನ್ನಿಕಾ ಕಣ್ಣನ್ ವಿರುದ್ಧ 6-3, 6-3 ನೇರ ಸೆಟ್ಗಳಿಂದ ಜಯದಾಖಲಿಸಿ ಟ್ರೋಫಿ ಎತ್ತಿ ಹಿಡಿದರು. ಸುಮಾರು ಒಂದು ಗಂಟೆ ಆಟದಲ್ಲಿ ಪ್ರತಿಭಾ ಉತ್ತಮ ಹೊಡೆತಗಳನ್ನು ಬಾರಿಸಿ ಗಮನ ಸೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


