ಕ್ರೀಡೆ

ಚೆಸ್: ಭಾರತಕ್ಕೆ ನಿರಾಸೆ

Published On :

ಟ್ರೋಮ್ಸೋ (ನಾರ್ವೇ): ಭಾರತದ ಪುರುಷ ಮತ್ತು ವನಿತೆಯರು 41ನೇ ಚೆಸ್ ಒಲಿಂಪಿಯಾಡ್‌ನ ನಾಲ್ಕನೇ ಸುತ್ತಿನ ಸಮರದಲ್ಲಿ ಭಾರಿ ನಿರಾಶೆ ಅನುಭವಿಸಿದ್ದಾರೆ.
ಭಾರತದ ಪುರುಷರ ತಂಡ 1.5-2.5 ಅಂಕಗಳ ಅಂತರದಲ್ಲಿ ಕ್ಯೂಬಾ ಎದುರು ಸೋಲನುಭವಿಸಿತು. 12ನೇ ಶ್ರೇಯಾಂಕದ ತಂಡವಾಗಿರುವ ಕ್ಯೂಬಾ, ಉತ್ತಮ ನಡೆ ತೋರುವ ಮೂಲಕ ಭಾರತದ ಸವಾಲನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು.
ಭಾರತದ ಆಟಗಾರರಾದ ಎಸ್.ಪಿ. ಸೇತುರಾಮನ್, ಕೆ. ಶಶಿಕಿರಣ್ ಹಾಗೂ ಬಿ. ಆಧಿಬನ್ ಅವರು ತಮ್ಮ ಪಂದ್ಯಗಳಲ್ಲಿ ಕ್ರಮವಾಗಿ ಲೀನಿಯರ್ ಡಾಮಿನಿಗ್ ಪೆರೇಜ್, ಲಾಜಾರೊ ಬ್ರೂಜಾನ್ ಮತ್ತು ಯೂನೇಸ್ಕಿ ಕ್ವೆಸದ ಪೆರೇಜ್ ಎದುರು ಡ್ರಾ ಫಲಿತಾಂಶ ಪಡೆದರು.
ಆದರೆ, ಮತ್ತೊಬ್ಬ ಭರವಸೆ ಆಟಗಾರ ಎಂ.ಆರ್. ಲಲಿತ್ ಬಾಬು ತಮ್ಮ ಪೈಪೋಟಿಯಲ್ಲಿ ಇಸಾನ್ ರೇನಾಲ್ಡ್ ಓರಿಜ್ ಸೂರೆಜ್ ಎದುರು ಸೋಲನುಭವಿಸಿದ್ದು, ಭಾರತಕ್ಕೆ ಹಿನ್ನಡೆಯಾಯಿತು.
ಇನ್ನು ಭಾರತದ ಮಹಿಳೆಯರ ತಂಡ ಸಹ ಪ್ರಬಲ ಸರ್ಬಿಯಾ ಎದುರು ತಲೆಬಾಗಿಸಿತು. ನಿರೀಕ್ಷಿತ ಮಟದಲ್ಲಿ ಕಾಯಿ ಮುನ್ನಡೆಸಲು ವಿಫಲರಾದ ಆಟಗಾರ್ತಿಯರು 1.5-2.5 ಅಂಕಗಳಿಂದ ಸರ್ಬಿಯಾ ಎದುರು ಸೋಲನುಭವಿಸಿದರು. ಪ್ರಮುಖ ಆಟಗಾರ್ತಿಯರಾದ ಹರಿಕಾ ದ್ರೋನವಳ್ಳಿ, ತಮ್ಮ ಪಂದ್ಯದಲ್ಲಿ ಜೋವಾನ ವೋಜಿನೋವಿಚ್ ವಿರುದ್ದ ಗೆಲವು ಸಂಪಾದಿಸಿದ್ದರು. ಆದರೆ, ತಾನಿಯಾ ಸಚದೇವ್, ಆ್ಯಂಜೆಲಿಜಾ ವಿರುದ್ಧ ಹಾಗೂ ಮೇರಿ ಆನ್ ಗೋಮ್ಸ್, ಮಾರಿಜಾ ರಾಕಿಕ್ ಎದುರು ಆಘಾತ ಅನುಭವಿಸಿದ್ದು ಭಾರತಕ್ಕೆ ದುಬಾರಿಯಾಯಿತು. ಮತ್ತೊಂದು ಪಂದ್ಯದಲ್ಲಿ ಆಡೆಲಾ ವೆಲಿಕಿಕ್ ವಿರುದ್ಧ ಪದ್ಮಿನಿ ರೌತ್ ಡ್ರಾಗೆ ಸಮಾಧಾನಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.