ಪಾಕ್‌ಗೆ ಯೂನಿಸ್ ಆಸರೆ
ಗಾಲೆ: ಮಧ್ಯಮ ಕ್ರಮಾಂಕದ ಅನುಭವಿ ದಾಂಡಿಗ ಯೂನಿಸ್ ಖಾನ್‌ರ ಜವಾಬ್ದಾರಿಯುತ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಚೇತರಿಕೆ ಪಡೆದಿದೆ.
ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪಾಕಿಸ್ತಾನ ಮೊದಲ ದಿನದಾಟ ನಿಂತಾಗ 4 ವಿಕೆಟ್ ನಷ್ಟಕ್ಕೆ 261 ರನ್‌ಗಳಿಸಿತ್ತು.
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಯೂನಿಸ್ ಖಾನ್ ತಮ್ಮ 90ನೇ ಟೆಸ್ಟ್‌ನಲ್ಲಿ 24ನೇ ಶತಕ ಪೂರೈಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಅಸಾದ್ ಶಫೀಕ್ ಅರ್ಧಶತಕ ಬಾರಿಸಿದರು. ಆಟ ನಿಂತಾಗ ಯೂನಿಸ್ 133 ರನ್ ಹಾಗೂ ಶಫೀಕ್ 55 ರನ್‌ಗಳಿಸಿ ಆಡುತ್ತಿದ್ದರು. ಮುರಿಯದ 5ನೇ ವಿಕೆಟ್ ಜೊತೆಯಾಟದಲ್ಲಿ ಯೂನಿಸ್ ಮತ್ತು ಶಫೀಕ್ ಈಗಾಗಲೇ 30.2 ಓವರುಗಳಿಂದ 105 ರನ್ ಪೇರಿಸಿದ್ದಾರೆ. ನಾಯಕ ಮಿಸ್ಬಾ ಉಲ್ ಹಕ್ ಮತ್ತು ಅಜರ್ ಅಲಿ ಸಹ ಉಪಯುಕ್ತ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರ್:
ಪಾಕಿಸ್ತಾನ ಮೊದಲ ಇನಿಂಗ್ಸ್ 88 ಓವರುಗಳಲ್ಲಿ 4 ವಿಕೆಟ್‌ಗೆ 261
(ಯೂನಿಸ್ ಖಾನ್ ಬ್ಯಾಟಿಂಗ್ 133, ಅಸಾದ್ ಶಫೀಕ್ ಬ್ಯಾಟಿಂಗ್ 55, ಮಿಸ್ಬಾ ಉಲ್-ಹಕ್ 31, ಅಜರ್ ಅಲಿ 30, ಧಮ್ಮಿಕಾ ಪ್ರಸಾದ್ 54ಕ್ಕೆ2, ಹೆರಾತ್ 68ಕ್ಕೆ2).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

