ಕ್ರೀಡೆ

ಟೆನಿಸ್‌: ಸೆರೆನಾ, ಶರಪೋವಾ ಮುನ್ನಡೆ

ಟೆನಿಸ್‌: ಸೆರೆನಾ, ಶರಪೋವಾ ಮುನ್ನಡೆ
Published On :

ಮಾಂಟ್ರಿಯಲ್‌: ಮಾಂಟ್ರಿಯಲ್‌ ಡಬ್ಲ್ಯುಟಿಎ ಟೆನಿಸ್‌ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌, ಮರಿಯಾ ಶರಪೋವಾ ಮುನ್ನಡೆ ಸಾಧಿಸಿದ್ದಾರೆ.

ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ ಅವರನ್ನು 6-0, 6-2 ಅಂತರದಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಸೆಟ್‌ ವೇಳೆ ಅಂಕ 1-1 ಸಮಬಲದಲ್ಲಿದ್ದಾಗ ಮಳೆ ಸುರಿಯಿತು. ಬಳಿಕ ತನ್ನ ಎಂದಿನ ಪರಾಕ್ರಮ ಮುಂದುವರಿಸಿದ ಸೆರೆನಾ, ಕಾಂಗರೂ ಆಟಗಾರ್ತಿಯನ್ನು ಸುಲಭದಲ್ಲಿ ಮಣಿಸಿದರು. ಇವರ ಹೋರಾಟ ಒಟ್ಟು 58 ನಿಮಿಷಗಳಲ್ಲಿ ಮುಗಿಯಿತು.

2011ರ ಯುಎಸ್‌ ಓಪನ್‌ನಲ್ಲಿ ಸೆರೆನಾಗೆ ಆಘಾತವಿಕ್ಕಿದ್ದ ಸಮಂತಾ, ಅನಂತರ ವಿಶ್ವದ ಈ ಅಗ್ರಮಾನ್ಯ ಆಟಗಾರ್ತಿಯ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲೂ ಸೋಲುಂಡಂತಾಯಿತು. ಸಮಂತಾ ವಿರುದ್ಧ ಸೆರೆನಾ ಗೆಲುವಿನ ದಾಖಲೆ 7-3ಕ್ಕೆ ವಿಸ್ತರಿಸಲ್ಪಟ್ಟಿದೆ.

ಫ್ರೆಂಚ್‌ ಓಪನ್‌ ಚಾಂಪಿಯನ್‌ ಮರಿಯಾ ಶರಪೋವಾ 3 ಸೆಟ್‌ಗಳ ಕಾದಾಟದ ಬಳಿಕ ಸ್ಪೇನಿನ ಉದಯೋನ್ಮುಖ ಆಟಗಾರ್ತಿ ಗಾರ್ಬಿನೆ ಮುಗುರುಝ ಅವರನ್ನು ಸೋಲಿಸಿದರು. ಶರಪೋವಾ ಗೆಲುವಿನ ಅಂತರ 4-6, 6-3, 6-1. ರಶ್ಯನ್‌ ತಾರೆಯೀಗ ಮತ್ತೋರ್ವ ಸ್ಪ್ಯಾನಿಷ್‌ ಆಟಗಾರ್ತಿ ಕಾರ್ಲಾ ಸೂರೆಜ್‌ ನವಾರೊ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ನವಾರೊ ಜೆಕ್‌ನ ಕ್ಯಾರೋಲಿನಾ ಪ್ಲಿಸ್ಕೋವಾ ಅವರಿಗೆ 6-1, 3-6, 6-3 ಸೆಟ್‌ಗಳ ಸೋಲುಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.