ವಿಶ್ವ ಆರ್ಚರಿ: ಭಾರತಕ್ಕೆ ಚಿನ್ನ, ಬೆಳ್ಳಿ

ವ್ರೋಕ್ಲಾವ್(ಪೊಲೆಂಡ್): ಆರ್ಚರಿ ವಿಶ್ವಕಪ್ 4ನೇ ಹಂತದ ಟೂರ್ನಿಯಲ್ಲಿ ಮೂರು ಸ್ವರ್ಣ ಪದಕಕ್ಕೆ ಗುರಿ ಇಟ್ಟಿದ್ದ ಭಾರತ ಈಗ ಮಿಶ್ರ ಫಲ ಅನುಭವಿಸಿದೆ.
ಮಹಿಳಾ ರೆಕುರ್ವ್ ತಂಡ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರೆ, ಪುರುಷರ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಈ ಮೂಲಕ ಭಾರತ ಮುಂದಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಉತ್ತಮ ತಯಾರಿ ನಡೆಸಿದೆ.
ಭಾನುವಾರ ನಡೆದ ಫೈನಲ್ ಸುತ್ತಿನ ಹಣಾಹಣಿಯಲ್ಲಿ ಭಾರತದ ಮಹಿಳಾ ತಂಡ ಎದುರಾಳಿ ಮೆಕ್ಸಿಕೊ ವಿರುದ್ಧ 6-0 ಅಂತರದ ಮಹತ್ವದ ಗೆಲವು ದಾಖಲಿಸಿತು. ಈ ಮೂಲಕ ಮಹಿಳಾ ತಂಡ ಸ್ವರ್ಣ ಪದಕಕ್ಕೆ ಕೊರಳೊಡ್ಡಿತು.
ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 2010ರ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇಕ ದೀಪಿಕಾ ಕುಮಾರಿ, ಗೆಲವಿನ ರೂವಾರಿಯಾದರು. ದೀಪಿಕಾ ಭಾರತದ ಪರ ಐದು ಬಾರಿ ಪೂರ್ಣ 10 ಅಂಕಗಳನ್ನು ಪಡೆಯುವ ಮೂಲಕ ಭಾರತಕ್ಕೆ ಅತ್ಯುತ್ತಮ ಮುನ್ನಡೆ ತಂದುಕೊಟ್ಟರು.
ಇನ್ನು ಭಾರತದ ಪುರುಷರ ತಂಡ ಮೆಕ್ಸಿಕೊ ವಿರುದ್ಧ 3-5 ಅಂಕಗಳ ಅಂತರದಲ್ಲಿ ಮುಖಭಂಗ ಅನುಭವಿಸಿದೆ. ಆರಂಭದಲ್ಲೇ ಭಾರತದ ವಿರುದ್ಧ ನಿಯಂತ್ರಣ ಸಾಧಿಸಿದ ಮೆಕ್ಸಿಕೊ 2-0 ಅಂತರದ ಮುನ್ನಡೆ ಕಾಯ್ದುಕೊಂಡಿತು. ಅಂತಿಮವಾಗಿ ಮೆಕ್ಸಿಕೊ 5-3 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿತು. ಇನ್ನು ಕಂಚಿಗಾಗಿ ನಡೆದ ಪಂದ್ಯದಲ್ಲಿ ರಷ್ಯಾ ತಂಡ ಚೀನಾ ವಿರುದ್ಧ ಸೋಲನುಭವಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


