ಕ್ರೀಡೆ

ಹರಿಣಗಳಿಗೆ ಜಯದ ಹಾರ

ಹರಿಣಗಳಿಗೆ ಜಯದ ಹಾರ
Published On :

ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲವು ದಾಖಲಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರವೇ ಗೆಲುವಿನ ದಡ ಸೇರಿದ ಹರಿಣಗಳು ಒಂದು ದಿನ ಬಾಕಿ ಇರುವಂತೆಯೇ ಜಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿದ್ದಾರೆ.

ಪಂದ್ಯದ ಮೂರನೇ ದಿನ ಜಿಂಬಾಬ್ವೆ ವಿರುದ್ಧ ಮೊದಲ ಇನಿಂಗ್ಸ್ 141 ರನ್ ಮುನ್ನಡೆ ಸಾಧಿಸದ್ದ ದಕ್ಷಿಣ ಆಫ್ರಿಕಾ ತಂಡ, ನಂತರ ದಿನದಾಟ ಮುಕ್ತಾಯಕ್ಕೆ ಜಿಂಬಾಬ್ವೆ ತಂಡ 28 ರನ್ ಗಳಿಸಿದಾಗ 1 ವಿಕೆಟ್ ಪಡೆದುಕೊಂಡಿತ್ತು.

ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರಿಸಿದ ಜಿಂಬಾಬ್ವೆ ಹರಿಣಗಳ ಬೌಲಿಂಗ್  ದಾಳಿಗೆ ನಲುಗಿತು. ವುಸಿ ಸಿಬಾಂದ (45) ಹಾಗೂ ರಿಚ್‌ಮಂಡ್ ಮುತುಂಬಮಿ (43) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಪರಿಣಾಮ ಜಿಂಬಾಬ್ವೆ ತಂಡ 76.2 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು.
ಈ ಮೂಲಕ ಹರಿಣಗಳಿಗೆ ಕೇವಲ 41 ರನ್‌ಗಳ ಗುರಿ ನೀಡಿತು.

ದಕ್ಷಿಮ ಆಫ್ರಿಕಾ ತಂಡದ ಪರ ಡೆನ್ ಪಿಡೆಟ್ 4, ಡೇಲ್ ಸ್ಪೇಯ್ನ್ ಹಾಗೂ ಮಾರ್ನ್ ಮಾರ್ಕೆಲ್ ತಲಾ 3 ವಿಕೆಟ್ ಕಬಳಿಸಿದರು.

ಅಲ್ಪ ಗುರಿಯನ್ನು ಬೆನ್ನಟ್ಟಿದ ಪ್ರವಾಸಿಗರು 10.4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 44 ರನ್ ದಾಖಲಿಸಿ ಗೆಲುವಿನ ದಡ ಸೇರಿತು.

ಹರಿಣಗಳ ಪರ ಡೀನ್ ಎಲ್ಗರ್ (21), ಆಲ್ವಿರೊ ಪೀಟರ್ಸನ್ (ಅಜೇಯ 17) ಹಾಗೂ ಫಫ್ ಡುಪ್ಲೆಸಿಸ್ (ಅಜೇಯ 5) ರನ್ ಗಳಿಸಿದರು. ಇನ್ನು ಜಿಂಬಾಬ್ವೆ ಪರ ಟೆಂಡೈ ಚಟಾರ, ಎಲ್ಗರ್ ವಿಕೆಟ್ ಪಡೆದುಕೊಂಡರು.

ಇನ್ನು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಎರಡೂ ಇನಿಂಗ್ಸ್‌ನಲ್ಲೂ ತಲಾ 4 ವಿಕೆಟ್ ಪಡೆದ ಡೆನ್ ಪಿಡೆಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 256 ಮತ್ತು 181 (ವುಸಿ ಸಿಬಾಂದ 45, ರಿಟ್‌ಮಂಡ್ ಮುತುಂಬಮಿ 43, ಪಿಡೆಟ್ 62 ಕ್ಕೆ4)
ದಕ್ಷಿಣ ಆಫ್ರಿಕಾ 397 ಮತ್ತು 44 ಕ್ಕೆ 1 ( ಎಲ್ಗರ್ 21, ಪೀಟರ್ಸನ್ ಅಜೇಯ 17, ಚಟಾರ 5ಕ್ಕೆ 1).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.