ಕ್ರೀಡೆ

ಸೋಮ್ ಮೇಲೆ ಡೇವಿಸ್ ಕಪ್ ಭಾರ

ಸೋಮ್ ಮೇಲೆ ಡೇವಿಸ್ ಕಪ್ ಭಾರ
Published On :

ನವದೆಹಲಿ: ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅನುಪಸ್ಥಿಯಲ್ಲಿ ಸೋಮ್‌ದೇವ್ ದೇವ್‌ವರ್ಮಾನ್ ಅವರು, ಸರ್ಬಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಭಾರತ ತಂಡದ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ.

ಸೆಪ್ಟೆಂಬರ್ 12 ರಿಂದ 14ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ 2013ರಲ್ಲಿ ಫೈನಲ್ ಪ್ರವೇಶಿಸಿದ್ದ ಸರ್ಬಿಯಾ ತಂಡ ಭಾರತಕ್ಕೆ ಕಠಿಣ ಸವಾಲೊಡ್ಡುವ ಸಾಧ್ಯತೆಗಳಿವೆ.

ಅನಿಲ್ ಧುಪರ್ ನಾಯಕತ್ವದ ಅಖಿಲ ಭಾರತ ಟೆನಿಸ್ ಸಂಸ್ಥೆಯ(ಎಐಟಿಎ) ಆಯ್ಕೆ ಸಮಿತಿ ಬುಧವಾರ ದೆಹಲಿಯಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಸೋಮ್‌ದೇವ್, ಯುಕಿ ಭಾಂಬ್ರೀ, ರೋಹನ್ ಬೋಪಣ್ಣ ಹಾಗೂ ಸಾಕೆತ್ ಮೈನೇನಿ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬೋಪಣ್ಣ ಮತ್ತು ಮೈನೇನಿ ಜೋಡಿ ಈ ಋತುವಿನಲ್ಲಿ ಡಬಲ್ಸ್ ವಿಭಾಗದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದು, ಯಶಸ್ವಿ ಜೋಡಿ ಎನಿಸಿದೆ.

ಪಂದ್ಯಾವಳಿಗೆ ಲಿಯಾಂಡರ್ ಪೇಸ್ ಅಲಭ್ಯರಾದಾಗಿನಿಂದ, ಮಹೇಶ್ ಭೂಪತಿ ಅವರು ತೆಲ ತಿಂಗಳಿಂದ ಸ್ಪರ್ಧಾತ್ಮಕ ಟೆನಿಸ್ ಆಡುತ್ತಿಲ್ಲವಾದ್ದರಿಂದ ಸೋಮ್‌ದೇವ್, ಯುಕಿ, ಬೋಪಣ್ಣ ಹಾಗೂ ಮೈನೀನ್ ಅವರನ್ನು ಆಯ್ಕೆ ಮಾಡಲು, ಕೋಚ್ ಜೀಶಾನ್ ಅಲಿ ಮತ್ತ ತಂಡದ ಆಟವಾಡುವ ನಾಯಕ ಆನಂದ್ ಅಮೃತ್‌ರಾಜ್ ಅವರು ಆಯ್ಕೆ ಸಮಿತಿಗೆ ಸಲಹೆ ನೀಡಿದ್ದರು. ಎಂದು ಧುಪರ್ ತಿಳಿಸಿದ್ದಾರೆ.

ಆದರೆ, ದಕ್ಷಿಣ ಕೊರಿಯಾ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಆಡಿದ್ದ ಸನಮ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಾಮ್ ಕುಮಾರ್ ರಾಮ್‌ನಾಥನ್ ಮತ್ತು ಜೀವನ್ ನೆದುಂಚೆಜಿಯಾನ್ ಅವರು ತಂಡದಲ್ಲಿ ಮೀಸಲು ಆಟಗಾರರಾಗಿದ್ದಾರೆ.

ಯುಕಿಗೆ ಸ್ಥಾನ: ಹಿಮ್ಮಡಿ ನೋವಿನ ಹಿನ್ನೆಲೆಯಲ್ಲಿ ಕೊರಿಯಾ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಗೆ ಅಲಭ್ಯರಾಗಿದ್ದ ಯುಕಿ ಭಾಂಬ್ರಿ ಅವರು ವಿಶ್ವದ ಎರಡನೇ ನಂಬರ್ ತಂಡವಾಗಿರುವ ಸರ್ಬಿಯಾ ವಿರುದ್ಧ ನಡೆಯುವ ಪಂದ್ಯಾವಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.