ಓವಲ್‌ನಲ್ಲೂ ಒದ್ದಾಟ

ಲಂಡನ್: ತೇವದಿಂದ ಕೂಡಿದ, ಹಸಿರು ಅಂಕಣದ ಮೇಲೆ ಆಂಗ್ಲರ ಸ್ವಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೇ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಜಾರಿ ಬಿದ್ದಿದ್ದಾರೆ.
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ಐದನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸನ್‌ಲ್ಲಿ ಭಾರತ 61.1ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ 148 ರನ್‌ಗಳಿಸಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನ ವೇಗದ ದಾಳಿಗೆ ಮೈಯೊಡ್ಡಿ ನಿಲ್ಲುವಲ್ಲಿ ವಿಫಲರಾದರು. ಧೋನಿ 140 ಎಸೆತಗಳಲ್ಲಿ 1 ಸಿಕ್ಸರ್ 15 ಬೌಂಡರ್ ಸೇರಿದಂತೆ 82 ರನ್ ಗಳಿಸಿದರು.
ಪಂದ್ಯದಾರಂಭದ ಮುನ್ನ ಕಳೆದ 24 ಗಂಟೆಗಳಲ್ಲಿ ಸುರಿದ್ದಿದ್ದ ಭಾರಿ ಮಳೆಯಿಂದಾಗಿ ತೇವಗೊಂಡಿದ್ದ ಪಿಚ್ ಹಾಗೂ ಸ್ವಲ್ಪ ಹುಲ್ಲು ಕೂಡ ಇದ್ದಿದ್ದರಿಂದ ಮೊದಲ ಬ್ಯಾಟಿಂಗ್ ಯಾವುದೇ ತಂಡಕ್ಕೂ ಕಷ್ಟವಾಗಿತ್ತು. ಹಾಗಾಗಿ ಪಂದ್ಯದಲ್ಲಿ ಟಾಸ್ ಗೆಲ್ಲುವುದು ಪ್ರಮುಖ ಅಂಶವಾಗಿತ್ತು. ಆದರೆ, ಅದೃಷ್ಟ ಇಂಗ್ಲೆಂಡ್ ಪರವಾಗಿದ್ದರಿಂದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಸೋಲಬೇಕಾಯಿತು. ಇಂಗ್ಲೆಂಡ್ ನಾಯಕ ಅಲಸ್ಟೆರ್ ಕುಕ್ ಟಾಸ್ ಗೆಲ್ಲುತ್ತಿದ್ದಂತೆಯೇ ಒಂದು ಕ್ಷಣವೂ ಯೋಚಿಸದೇ ಟೀಂ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿ ಸಂಕಷ್ಟಕ್ಕೆ ಗುರಿಪಡಿಸಿದರು. ಒಂದು ವೇಳೆ ಟಾಸ್ ಗೆದ್ದಿದ್ದರೇ ನಾವೂ ಕೂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೇವು ಎಂದು ಧೋನಿ ನಂತರ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


