ಕುಸ್ತಿ ಮಾಂತ್ರಿಕ ಮೆಲೆಂಡೇಜ್

ಕಾಲು ಕಳೆದರೂ ಉತ್ಸಾಹ ಕುಗ್ಗಲಿಲ್ಲ!
ಆತ ಎಂಟು ವರ್ಷಗಳ ಹಿಂದೆ ಇರಾಕ್ ಯುದ್ಧದಲ್ಲಿ ವೀರಾವೇಷದಿಂದ ಹೋರಾಡುತ್ತಿದ್ದ. ಅಲ್ಲೂ ಆತ ಹೀರೋನೇ. ಅವನ ತಲೆಯಲ್ಲಿ ಆಗ ಸದಾ ಗೆಲುವಿನ ಕನಸು. ಶತ್ರುಗಳನ್ನು ಹತ್ಯೆ ಮಾಡುವ ಆಕ್ರಮಣದ ಹಸಿವು ಎದೆಯಲ್ಲಿ. ಪ್ರಾಣದ ಬಗ್ಗೆ ಆತನಿಗೆ ಯಾವ ಕಾಳಜಿಯೂ ಇರಲಿಲ್ಲ. ಆದರೆ, ಯುದ್ಧ ಮಾಡುತ್ತಿರುವಾಗಲೇ ಆತನಿಗೆ ಅತ್ಯಾಧುನಿಕ ಸ್ಫೋಟಕದ ದೊಡ್ಡ ಸದ್ದು ಕೇಳಿಸಿತು. ಅಷ್ಟೇ, ಅನಂತರ ಇದ್ದಕ್ಕಿದ್ದಂತೆ ಎಚ್ಚರವಾದಾಗ ತಾನೆಲ್ಲಿದ್ದೇನೆಂದು ಆತನಿಗೆ ಗೊತ್ತಾಗಲಿಲ್ಲ.
ರಣಾಂಗಣದಲ್ಲಿ ದಿಕ್ಕಿಲ್ಲದೆ, ಬಿದ್ದಿದ್ದ ಸೈನಿಕರ ಹೆಣಗಳ ನಡುವೆ ಆತನೂ ಬಿದ್ದಿದ್ದ. ಕಾಲಿನ ಭಾಗದಲ್ಲಿ ಏನೋ ಹೇಳತೀರದ ನೋವು ಕಾಣಿಸಿತು. ಮುಟ್ಟಿ ನೋಡೋಣ ಎಂದು ಕೈ ಇಳಿಬಿಟ್ಟ. ಆದರೆ ಕಾಲಿಗೆ ಕೈ ಸ್ಪರ್ಶಿಸಲೇ ಇಲ್ಲ. ನಿಧಾನವಾಗಿ ತನ್ನ ಕಾಲಿನೆಡೆಗೆ ನೋಡಿದ. ರಕ್ತ ಇನ್ನೂ ಹನಿಯುತ್ತಿತ್ತು. ಕಾಲು ಅದೆಲ್ಲೋ ತುಂಡಾಗಿ ಬಿದ್ದಿದೆ! ಆತನ ಹೆಸರು ಕ್ರಿಸ್ ಮೆಲೆಂಡೆಜ್.
ಕಾಲು ಕಳೆದರೂ ಉತ್ಸಾಹ ಕುಗ್ಗಲಿಲ್ಲ!
ಈಗವನ ಕಾಲಿನಲ್ಲಿ ನೋವಿಲ್ಲ. ಕೃತಕ ಕಾಲು ಜೋಡಿಸಿಕೊಂಡಿದ್ದಾನೆ. ನಡೆಯಲು, ಕೂರಲು ತೊಂದರೆಯೇನಿಲ್ಲ. ಎಷ್ಟೇ ಆದರೂ ಯೋಧನಲ್ಲವೇ? ಸುಮ್ಮನೆ ಕೂರದ ಜೀವಕ್ಕೆ ತಾನು ಬಾಲ್ಯದಲ್ಲಿ ಕುಸ್ತಿಪಟು ಆಗಬೇಕೆಂದು ಕಂಡಿದ್ದ ಕನಸು ಮತ್ತೆ ಕಾಡತೊಡಗುತ್ತದೆ. ಹೀಗಾಗಿ 2012ರಲ್ಲಿ ಆತ ಕುಸ್ತಿಯಲ್ಲಿ ತರಬೇತಿ ಪಡೆಯತೊಡಗಿದ. ಕಳೆದ ವಾರವಷ್ಟೆ ತನ್ನ ವೃತ್ತಿಯನ್ನು ಆರಂಭಿಸಿರುವ ಮೆಲೆಂಡೆಜ್, ಆಗಸ್ಟ್ 8ರಂದು ನಡೆದ ಟೂರ್ನಿಯಲ್ಲಿ ಇಬ್ಬರು ಕುಸ್ತಿಪಟುಗಳನ್ನು ಸೋಲಿಸಿ ಅಚ್ಚರಿ ಸೃಷ್ಟಿಸಿದ. ಅಲ್ಲದೆ ಪ್ರತಿಷ್ಠಿತ ಟೋಟಲ್ ನಾನ್ ಸ್ಟಾಪ್ ಆ್ಯಕ್ಷನ್ ಇಂಪ್ಯಾಕ್ಟ್ ಕುಸ್ತಿ ಲೀಗ್ನೊಂದಿಗೆ ಬಹು ವರ್ಷಗಳ ಗುತ್ತಿಗೆಯನ್ನೂ ಪಡೆದುಕೊಂಡಿದ್ದಾನೆ.
ಅಪ್ಪನ ಸ್ಫೂರ್ತಿಯಿಂದ ಸೇನೆಗೆ ಸೇರಿದ ಮೆಲೆಂಡೆಜ್ ತಂಜೆ ಮಾಜಿ ಯೋಧ. ಇವರ ಸ್ಫೂರ್ತಿಯ ಕಾರಣಕ್ಕೆ ಮೆಲೆಂಡೆಜ್ 17ನೇ ವಯಸ್ಸಿನಲ್ಲೇ ಸೇನೆ ಸೇರಿಕೊಂಡ ಆದರೆ ತಾನು ಸೇನೆಗೆ ಸೇರಿ ಇನ್ನೂ ಎರಡು ವರ್ಷಗಳು ತುಂಬಲು ತಿಂಗಳು ಬಾಕಿ ಇರುವಂತೆಯೇ ಈತ ಸ್ಟೋಟದಲ್ಲಿ ಸಿಲುಕಿ ಕಾಲು ಕಳೆದುಕೊಂಡಿದ್ದು ದುರದೃಷ್ಟವೇ ಸರಿ. ನಂತರ ಸ್ಯಾನ್ ಆಂಟೋನಿಯೋದಲ್ಲಿನ ಬ್ರೂಕೆ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಮೆಲೆಂಡೆಜ್ ತವರಿಗೆ ಮರಳುತ್ತಾನೆ.
ಮೆಲೆಂಡೆಜ್ ಚಿಕ್ಕ ವಯಸ್ಸಿನಲ್ಲಿ ತನ್ನ ಅಜ್ಜಿಯ ಜತೆಗೆ ಕುಳಿತು ಟಿವಿ ವೀಕ್ಷಿಸುತ್ತಿದ್ದಾಗ ಕುಸ್ತಿ ಪಂದ್ಯಗಳತ್ತ ಹೆಚ್ಚು ಆಕರ್ಷಿತನಾಗಿದ್ದ. ಕಾಲು ಕಳೆದುಕೊಂಡು ಮನೆಯಲ್ಲಿ ಕುಳಿತ ನಂತರ ಕುಸ್ತಿಯೆಡೆಗೆ ಮನಸು ಸೆಳೆಯತೊಡಗಿತು. ಹೀಗಾಗಿ ಅದಕ್ಕೆ ಬೇಕಾದ ಸಕಲ ತಯಾರಿಗಳನ್ನು ಮಾಡಿಕೊಂಡು ಕುಸ್ತಿ ತರಬೇತಿ ಪಡೆಯಲು ಅಂಗಣಕ್ಕಿಳಿದೇ ಬಿಟ್ಟ ಮೆಲೆಂಡೆಜ್.
'ನಾನು ಕೊಂಚ ವೇಗವಾಗಿಯೇ ಕುಸ್ತಿಯನ್ನು ಕಲಿಯುತ್ತಿದ್ದೇನೆ. ಕುಸ್ತಿಯಲ್ಲಿ ಇನ್ನು ಏನು ಬೇಕಾದರೂ ಸಾಧಿಸುತ್ತೇನೆ' ಎನ್ನುತ್ತಾನೆ ಮೆಲೆಂಡೆಜ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


