ಕ್ರೀಡೆ

ಭಾರತಕ್ಕೆ ಬಂಗಾರ, ಬೆಳ್ಳಿ ಗರಿ

ಭಾರತಕ್ಕೆ ಬಂಗಾರ, ಬೆಳ್ಳಿ ಗರಿ
Published On :

ಗ್ಲಾಸ್ಗೋ: ದೇಶ ಸ್ವಾಂತ್ರ್ಯೋತ್ಸವ ಆಚರೆಯ ಈ ಶುಭ ಸಂದರ್ಭದಲ್ಲಿ ತವರಿನ ಬಿಲಿಯರ್ಡ್ಸ್ ಪಟುಗಳು ಭಾರತಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ತವರಿನ ಖ್ಯಾತಿಯನ್ನು ವಿಶ್ವಮಟ್ಟದಲ್ಲಿ ಮೆರೆಸಿದ್ದಾರೆ.

ಗ್ಲಾಸ್ಗೋದಲ್ಲಿ ನಡೆದ ಆರಂಭಿಕ ವಿಶ್ವ ಬಿಲಿಯರ್ಡ್ಸ್ ತಂಡ ಚಾಂಪಿಯನ್ ಶಿಪ್‌ನಲ್ಲಿ ಭಾರತದ 'ಬಿ' ತಂಡ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ಭಾರತದ 'ಎ' ತಂಡ ಬೆಳ್ಳಿ ಪದಕ ಸಂಪಾದಿಸಿ ತವರಿನ ಕೀರ್ತಿ ಹೆಚ್ಚಿಸಿದ್ದಾರೆ.

ಗುರುವಾರ ತಡರಾತ್ರಿ ಇಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಭಾರತಜ ಬಿ ತಂಡದ ಆಟಗಾರರು 5-4 ಅಂಕಗಳ ಅಂತರದಲ್ಲಿ ತಮ್ಮದೇ ದೇಶದ ಮತ್ತೊಂದು ತಂಡ ಎ ವಿರುದ್ಧ ಗೆಲುವು ದಾಖಲಿಸಿ ಬಂಗಾರದ ಹಾರ ಕೊರಳಿಗೆ ಹಾಕಿಕೊಂಡಿತು. ಇತ್ತ ಎರಡನೇ ಸ್ಥಾನದ ಗೌರವ ಪಡೆದ ಭಾರತದ ಎ ತಂಡದ ಆಟಗಾರರು ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದರು.

ಬೆಂಗಳೂರಿನ ಹುಡುಗ ಪಂಕಜ್ ಆಡ್ವಣಿ ನೇತೃತ್ವದ ಭಾರತ ಬಿ ತಂಡದಲ್ಲಿ ರೂಪೇಶ್ ಶಾ, ದೇವೇಂದ್ರ ಜೋಶಿ ಮತ್ತು ಅಶೋಕ್ ಶಾಂಡಿಲ್ಯ ಅವರು ತವರಿನ ಸವಾಲು ಮುನ್ನಡೆಸಿದ್ದರು. ಮತ್ತೊಂದೆಡೆ ಭಾರತದ ಎ ತಂಡದಲ್ಲಿ ಅಲೋಕ್ ಕುಮಾರ್. ಬಿ. ಭಾಸ್ಕರ್ ಸೌರವ್ ಕೊಠಾರಿ ಮತ್ತು ಧೃವ ಸಿತ್ವಾಲಾ ಹೋರಾಟಕ್ಕೆ ಅಣಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.