ಕ್ರೀಡೆ

ಬೃಹತ್ ಮುನ್ನಡೆಗೆ ಆಂಗ್ಲರ ರೂಟ್

ಬೃಹತ್ ಮುನ್ನಡೆಗೆ ಆಂಗ್ಲರ ರೂಟ್
Published On :

ಲಂಡನ್: ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿ ದಿಟ್ಟ ಹೆಜ್ಜೆ ಇಟ್ಟು ಮುಂದೆ ಸಾಗುತ್ತಿರುವ ಇಂಗ್ಲೆಂಡ್ ಆಟಗಾರರು ಐದನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪೂರ್ಣ ಪ್ರಭುತ್ವ ಸ್ಥಾಪಿಸುವ ಉತ್ತಮ ಅವಕಾಶ ಹೊಂದಿದ್ದಾರೆ.

ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶನಿವಾರದ ಆಟ ನಿಂತಾಗ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 385 ರನ್‌ಗಳಿಸಿ ಬೃಹತ್ ಮುನ್ನಡೆ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತ ಕಲೆಹಾಕಿರುವ 148 ರನ್‌ಗಳ ಉತ್ತರವಾಗಿ ಇಂಗ್ಲೆಂಡ್ ಸದ್ಯ 237 ರನ್‌ಗಳಿಂದ ಮುನ್ನಡೆ ಸಾಧಿಸಿದ್ದು, ಬೃಹತ್ ಮೊತ್ತ ಪೇರಿಸುವ ಮೂಲಕ ಭಾರತದ ವಿರುದ್ಧ ಇನಿಂಗ್ಸ್ ಅಂತರದ ಗೆಲವು ದಾಖಲಿಸುವ ಲೆಕ್ಕಚಾರದಲ್ಲಿದ್ದಾರೆ.

ಸ್ಕೋರ್ ವಿವರ:
ಭಾರತ ಮೊದಲ ಇನಿಂಗ್ಸ್ 148
ಇಂಗ್ಲೆಂಡ್ ಮೊದಲ ಇನಿಂಗ್ಸ್ 73 ಓವರುಗಳಲ್ಲಿ 5 ವಿಕೆಟ್‌ಗೆ 246
(ವಿಕೆಟ್ ನಷ್ಟವಿಲ್ಲದೆ 62ರಿಂದ ಮುಂದುವರಿದಿದೆ, 2ನೇ ದಿನದಾಟ ಮುಕ್ತಾಯಕ್ಕೆ)
ಅಲಸ್ಪೇರ್ ಕುಕ್ ಸಿ ವಿಜಯ್ ಬಿ ಅರುಣ್ 79, ಸ್ಯಾಮ್ ರಾಬ್ಸನ್ ಬಿ ಅರುಣ್ 37, ಗ್ಯಾರಿ ಬ್ಯಾಲೆನ್ಸ್ ಸಿ ಪೂಜಾರ ಬಿ ಅಶ್ವಿನ್ 64, ಇಯಾನ್ ಬೆಲ್ ಸಿ ಧೋನಿ ಬಿ ಇಶಾಂತ್ 7, ಜೋ ರೂಟ್ ಬ್ಯಾಟಿಂಗ್ 92, ಮೊಯೀನ್ ಅಲಿ ಬಿ ಅಶ್ವಿನ್ 14, ಜೋಸ್ ಬಟ್ಲರ್ ಸಿ ಅಶ್ವಿನ್ ಬಿ ಇಶಾಂತ್ 45, ವೊಕ್ಸ್ ಸಿ ಧೋನಿ ಬಿ ಭುವನೇಶ್ವರ್ 0, ಜೋರ್ಡಾನ್ ಬ್ಯಾಟಿಂಗ್ 19.
ಇತರೆ: (ಬೈ-14, ಲೆಗ್ ಬೈ-3, ವೈಡ್-1, ನೋಬಾಲ್-10) 28.
ಬೌಲಿಂಗ್ ವಿವರ: ಭುವನೇಶ್ವರ ಕುಮಾರ 24-3-86-1, ಇಶಾಂತ್ ಶರ್ಮಾ 24-8-58-2, ವರುಣ್ ಅರುಣ್ 25-1-111-2, ಸ್ಪುವರ್ಟ್ ಬಿನ್ನಿ 12-0-58-0, ರವಿಚಂದ್ರನ್ ಅಶ್ವಿನ್ 20-2-55-2.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.