ಟೀಂ ಇಂಡಿಯಾಗೆ ರವಿಶಾಸ್ತ್ರಿ ನಿರ್ದೇಶಕ

ನವದೆಹಲಿ: ಟೀಂ ಇಂಡಿಯಾಗೆ ನಿರ್ದೇಶಕರಾಗಿ ರವಿಶಾಸ್ತ್ರಿ ಅವರನ್ನು ಹಾಗೂ ಸಹ ಕೋಚ್ಆಗಿ ಸಂಜಯ್ ಬಂಗಾರ್ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಮೂರು ಬಾರಿ ಹಿನಾಯ ಸೋಲು ಕಂಡ ಟೀಂ ಇಂಡಿಯಾಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿರುವ ಬಿಸಿಸಿಐ ತಂಡದ ನಿರ್ದೇಶಕರಾಗಿ ರವಿಶಾಸ್ತ್ರಿ ಅವರನ್ನು ಹಾಗೂ ಸಹ ಕೋಚ್ಆಗಿ ಸಂಜಯ್ ಬಂಗಾರ್ ಅವರನ್ನು ನೇಮಕ ಮಾಡಲಾಗಿದೆ.
ಟೀಂ ಇಂಡಿಯಾ ಆಂಗ್ಲರ ನಾಡಲ್ಲಿ ಮೂರು ಟೆಸ್ಟ್ಗಳಲ್ಲಿ ಹೀನಾಯ ಸೋಲು ಕಂಡಿತು. ಇದರಿಂದಾಗಿ ಕೋಚ್ ಡೆಂಕನ್ ಫ್ಲೆಚರ್ ಬದಲಾವಣೆಗೆ ಬಿಸಿಸಿಐ ಮೇಲೆ ಒತ್ತಡ ಹೇರಲಾಗಿತ್ತು. ಇದರಿಂದ ಎಚ್ಚೆತ್ತು ಕೊಂಡಿರುವ ಬಿಸಿಸಿಐ ರವಿಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
ಇನ್ನೂ ಮುಂದೆ ಟೀಂ ಇಂಡಿಯಾದ ಕ್ರಿಕೆಟ್ ವ್ಯವಹಾರಗಳ ಬಗ್ಗೆ ರವಿಶಾಸ್ತ್ರಿ ನೋಡಿಕೊಳ್ಳಲಿದ್ದಾರೆ. ಡೆಂಕನ್ ಫ್ಲೆಚರ್ ಅವರು ಕೋಚ್ ಆಗಿ ಮುಂದುವರೆಯಲಿದ್ದು, ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಅವರನ್ನು ನೇಮಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಕ್ರಿಕೆಟಿಗರು ಟಿ-20 ಏಕದಿನ ಪಂದ್ಯಗಳನ್ನಾಡುವುದೇ ಹೆಚ್ಚು. ಐಪಿಎಲ್ ಬಂದ ಮೇಲಂತೂ ಟೆಸ್ಟ್ ಪಂದ್ಯಗಳನ್ನೇ ಮರೆತಂತಾಗಿದೆ. ಟೀ-20 ಬಿಟ್ಟರೆ, ಏಕದಿನ ಪಂದ್ಯಗಳಿಗೆ ಒತ್ತು ನೀಡುವುದು ಈಗ ಸ್ವಾಭಾವಿಕವಾಗಿಬಿಟ್ಟಿದೆ.
2011ರಲ್ಲಿ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡಿದ್ದಾಗ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 0-4 ಸೋಲಿನ ಅಂತರದಲ್ಲಿ ಎದುರಾಳಿಗೆ ಸಂಪೂರ್ಣ ಶರಣಾಗಿತ್ತು. ಈ ಬಾರಿ ಒಂದು ಪಂದ್ಯ ಗೆದ್ದುಕೊಂಡೆವು ಎಂಬುದೊಂದು ಸಮಾಧಾನ ಬಿಟ್ಟರೆ, 1-3ರ ಅಂತರದಲ್ಲಿ ಸರಣಿ ಕಳೆದುಕೊಂಡ ರೀತಿ ದೊಡ್ಡ ಅವಮಾನ ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


