ಕ್ರೀಡೆ

ಭಾರತಕ್ಕೆ ದಂಡ

ಭಾರತಕ್ಕೆ ದಂಡ
Published On :

ಲಂಡನ್: ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಐಧನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.

ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪಂದ್ಯದ ಪ್ರತಿಶತ 60ರಷ್ಟು ದಂಡ ವಿಧಿಸಲಾಗಿದ್ದರೆ, ಉಳಿದ ಆಟಗಾರರಿಗೆ ತಲಾ 30ರಷ್ಟು ದಂಡ ನಿಗದಿಪಡಿಸಲಾಗಿದೆ. ಮ್ಯಾಚ್ ರೆಫರಿ ರಂಜನ್ ಮುದುಗಲೆ ಈ ದಂಡ ಪ್ರಕಟಿಸಿದ್ದಾರೆ. ಭಾರತದ ಬೌಲರ್‌ಗಳು ನಿಗದಿತ ಅವಧಿಗೆ ಮೂರು ಓವರುಗಳನ್ನು ಕಡಿಮೆ ಎಸೆದಿದ್ದಾರೆ ಎಂದು ಮದುಗಲೆ ಆರೋಪಿಸಿದ್ದಾರೆ. ಐಸಿಸಿ ನೀತಿ ಸಂಹಿತೆ ಪ್ರಕಾರ ನಿಗದಿತ ಅವಧಿಗೆ ಓವರ್ ಪೂರ್ಣಗೊಳಿಸದಿದ್ದರೆ, ತಲಾ ಓವರಿಗೆ ಆಟಗಾರರಿಗೆ ಪ್ರತಿಶತ 10ರಷ್ಟು ಮತ್ತು ನಾಯಕನಿಗೆ 20ರಷ್ಟು ದಂಡ ವಿಧಿಸಲಾಗುತ್ತದೆ. ಇಲ್ಲಿ 3 ಓವರುಗಳನ್ನು ಕಡಿಮೆ ಎಸೆದಿದ್ದರಿಂದ ಹೆಚ್ಚಿನ ದಂಡಕ್ಕೆ ಗುರಿಯಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.