ಕ್ರೀಡೆ

ಜಯ ವಿದಾಯ

ಜಯ ವಿದಾಯ
ಪತ್ನಿ ಕ್ರಿಸ್ಟಿನಾ ಮತ್ತು ಮಗಳು ಸಾನ್ಸಾ ಜತೆ ಮಹೇಲ ಜಯವರ್ದನೆ
Published On :

ಕೊಲಂಬೊ: ಸುದೀರ್ಘ 17 ವರ್ಷಗಳ ಕಾಲ ಶ್ರೀಲಂಕಾವನ್ನು ಕ್ರಿಕೆಟ್ ಮೈದಾನದಲ್ಲಿ ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ದ ಮಹೇಲ ಜಯವರ್ದನೆ ತಮ್ಮ ವರ್ಣರಂಜಿತ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಭೂತಪೂರ್ವ ತೆರೆ ಎಳೆದಿದ್ದಾರೆ.

ಮಹೇಲ ಜಯವರ್ದನೆ, 1997ರಲ್ಲಿ ತವರು ಅಂಗಣ ಕೊಲಂಬೊದಲ್ಲಿ ಭಾರತದ ವಿರುದ್ಧ ಟೆಸ್ಟ್ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಪದಾರ್ಪಣೆ ಮಾಡಿದರು. ಭಾರತದ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅರ್ಧಶತಕ(66) ದಾಖಲಿಸಿದ್ದ ಮಹೇಲ, ಪಾಕಿಸ್ತಾನ ವಿರುದ್ಧ ತಮ್ಮ ಕಡೇಯ ಟೆಸ್ಟ್ ಇನಿಂಗ್ಸ್ನಲ್ಲಿ (54) ಅರ್ಧಶತಕ ದಾಖಲಿಸಿ ವೃತ್ತಿ ಜೀವನದುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ ಯಶಸ್ವಿ ಟೆಸ್ಟ್ ಕ್ರಿಕೆಟಿಗನಾಗಿದ್ದಾರೆ.

ಮಹೇಲ ಜಯವರ್ದನೆ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇ ಆದ ದಾಖಲೆ ಬರೆದಿದ್ದಾರೆ. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಸ್ಎಸ್ಸಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 374ರನ್ ದಾಖಲಿಸಿದ್ದು, ಮಹೇಲ ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ. ಅಲ್ಲದೆ ಅದೇ ಇನಿಂಗ್ಸ್ನಲ್ಲಿ ಸಹ ಆಟಗಾರ ಕುಮಾರ ಸಂಗಕ್ಕಾರ(287) ಜತೆಗೆ 3ನೇ ವಿಕೆಟ್ಗೆ 624ರನ್ಗಳ ಬೃಹತ್ ಜತೆಯಾಟ ನೀಡಿರುವುದು, ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗಿನ ಶ್ರೇಷ್ಠ ಜತೆಯಾಟವಾಗಿದೆ.

ಶ್ರೀಲಂಕಾ ತಂಡದ ನಾಯಕನಾಗಿಯೂ ಉತ್ತಮ ಪ್ರದರ್ಶನ ನೀಡಿರುವ ಮಹೇಲ, ವೆಸ್ಟ್ ಇಂಡೀಸ್ನಲ್ಲಿ ನಡೆದ 2007ರ ವಿಶ್ವಕಪ್ನಲ್ಲಿ ತಂಡವನ್ನು ಫೈನಲ್ವರೆಗೂ ಮುನ್ನಡೆಸಿದ್ದರು. ತಂಡ ಪ್ರಶಸ್ತಿ ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತಮ್ಮ ನಾಯಕತ್ವ ಸ್ಥಾನ ತ್ಯಜಿಸಿದ್ದರು. ಒಟ್ಟಿನಲ್ಲಿ ಜಂಟಲ್ಮನ್ ಗೇಮ್ನಲ್ಲಿ ಯಶಸ್ಸು ಹಾಗೂ ವೈಫಲ್ಯದ ಹಂತವನ್ನು ಕಂಡ ಮಹೇಲ ಯಾವುದೇ ಹಂತದಲ್ಲೂ ಕ್ರೀಡಾಸ್ಫೂರ್ತಿಯನ್ನು ಮರೆಯಲಿಲ್ಲ. ಇಂತಹ ಅದ್ಭುತ ಆಟಗಾರನಿಗೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ಸಲಾಮ್ ಮಾಡುವುದು ಖಚಿತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.