ವಿದೇಶದಲ್ಲಿ ಕ್ರಿಕೆಟಿಗರ ವಿಚಾರಣೆ ಇಲ್ಲ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದಗಲ್ ನೇತೃತ್ವದ ತನಿಖಾ ಸಮಿತಿಯೂ ಐಸಿಸಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
2013ರಲ್ಲಿ ನಡೆದ ಟೂರ್ನಿಯಲ್ಲಿ ಸ್ಪಾಟ್ ಫಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆದಿತ್ತು ಎಂಬ ಅಂಶ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಕಳೆದ ಮೇ ತಿಂಗಳಲ್ಲಿ ಮುಕುಲ್ ಮುದಗಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು.
ಆದರೆ ಈ ತನಿಖಾ ಸಮಿತಿ ಕಳೆದ ಆಗಷ್ಟ್ 15-16ರಂದು ಚೆನ್ನೈನಲ್ಲಿ ಸಭೆ ಸೇರಿತ್ತು. ಈ ಸಂದರ್ಭದಲ್ಲಿ ಸಮಿತಿಯ ಕೆಲ ಸದಸ್ಯರು ಶ್ರೀನಿವಾಸನ್ ಮತ್ತು ಮೇಯಪ್ಪನ್ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಕೆಲಸ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಮಿತಿಯೂ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ್ದು, ತನಿಖೆ ಮುಗಿಯುವವರೆಗೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಶ್ರೀನಿವಾಸನ್ ಹಾಗೂ ಮೇಯಪ್ಪನ್ರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದೆ.
ಅಲ್ಲದೆ ಪ್ರಕರಣ ಸಂಬಂಧಿಸಿದಂತೆ ಕೆಲ ಆಟಗಾರರನ್ನು ವಿಚಾರಣೆಗೊಳಪಡಿಸಿಲು ಇಂಗ್ಲೆಂಡ್ಗೆ ಸಮಿತಿ ಸದಸ್ಯರು ತೆರಳುವ ಬಗ್ಗೆಯೂ ವರದಿಯಾಗಿತ್ತು. ಆದರೆ ಸ್ವತಃ ಬಿಸಿಸಿಐ ಹಾಗೂ ತನಿಖಾ ಸಮಿತಿಯೂ, ಯಾರೂ ಕೂಡ ಇಂಗ್ಲೆಂಡ್ಗೆ ತೆರಳುತ್ತಿಲ್ಲ. ಟೆಸ್ಟ್ ಸೋತು ಒತ್ತಡದಲ್ಲಿರುವ ಭಾರತ ತಂಡ ಆಟಗಾರರು ಏಕದಿನ ಸರಣಿಗೆ ಅಣಿಯಾಗಲಿದ್ದು, ಅವರಿಗೆ ತೊಂದರೆ ಉಂಟು ಮಾಡಲು ಬಯಸುವುದಿಲ್ಲ ಎಂದು ಹೇಳಿವೆ.
ಈ ಮಧ್ಯೆ, ಸುಪ್ರೀಂ ಕೋರ್ಟ್ ನೀಡಿರುವ ಗಡುವಿನಂತೆ ಮುದಗಲ್ ಸಮಿತಿಯೂ ಈ ತಿಂಗಳ ಕೊನೆಯಲ್ಲಿ ತನ್ನ ವರದಿ ಸಲ್ಲಿಸಬೇಕಾಗಿದೆ. ಆದರೆ ಆಗಸ್ಟ್ 27ರಂದು ಸಭೆ ಸೇರಲಿರುವ ತನಿಖಾ ಸಮಿತಿ ಸದಸ್ಯರು ಇನ್ನೂ ಸ್ವಲ್ಪ ಹೆಚ್ಚಿನ ಕಾಲಾವಕಾಶ ಕೋರಿ ಸುಪ್ರೀಂಗೆ ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


