ಗೆದ್ದು ಕಹಿ ಮರೆಯಲು ಚಿಂತನೆ

ಬ್ರಿಸ್ಟಲ್: ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಹೀನಾಯವಾಗಿ ಸೋತು ವಿಸ್ವಾಸ ಕುಂದಿರುವ ಟೀಂ ಇಂಡಿಯಾ, ಏಕದಿನ ಸರಣಿಯಲ್ಲಿ ನೂತನ ಆರಂಭ ಕಾಣುವ ಕಾತದಿಂದ ಎದುರು ನೋಡುತ್ತಿದೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಸೋಮವರಾ ಬ್ರಿಸ್ಟಲ್ನಲ್ಲಿ ನಡೆಯಲಿದ್ದು, ಮಹೇಂದ್ರ ಸಿಂಗ್ ನಾಯಕತ್ವದ ಭಾರತ ತಂಡ ಜಯದ ಕಾತರದಲ್ಲಿದೆ.
ಮುಂದಿನ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ, ಈಗಾಗಲೇ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಸೋಲನುಭವಿಸಿರುವ ಭಾರತ ತಂಡ, ಏಕದಿನ ಕ್ರಿಕೆಟ್ನಲ್ಲಿ ವಿಜಯ ಸಾಧಿಸುವ ಮೂಲಕ ಸಮತೋಲನ ಕಾಪಾಡಿಕೊಳ್ಳಲು ಎದುರು ನೋಡುತ್ತಿದೆ.
ವಿಶ್ವಕಪ್ ಈಗ ಕೇವಲ ಆರು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾಕ್ಕೆ ಇನ್ನು ಮುಂದೆ ನಡೆಯುವ ಪ್ರತಿಯೊಂದು ಪಂದ್ಯವೂ ಪೂರ್ವಬಾವಿ ತಯಾರಿಯ ಹೆಜ್ಜೆಯಾಗಿದೆ. ಅಲ್ಲದೆ, ಹಾಲಿ ಚಾಂಪಿಯನ್ ಆಗಿರುವ ಭಾರತಕ್ಕೆ ಪ್ರಶಸ್ತಿ ಪಟ್ಟ ಉಳಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. ಇಂಗ್ಲೆಂ್ಡ, ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ತ್ರಿಕೋನ ಸರಣಿ, ವಿಶ್ವಕಪ್ಗೆ ಭಾರತ ತಂಡದ ಆಟಗಾರರ ಹಣೆ ಬರಹ ನಿರ್ಧರಿಸಲಿವೆ.
ಈಗಾಗಲೇ ಭಾರತದ ಆಯ್ಕೆ ಸಮಿತಿ ವಿಶ್ವಕಪ್ಗೆ ತಂಡವನ್ನು ಪರೋಕ್ಷವಾಗಿ ಆಯ್ಕೆ ಮಾಡಿದ್ದು, ತಂಡದಲ್ಲಿರುವ ಸಂಜು ಸ್ಯಾಮ್ಸನ್ ಮತ್ತು ಕರಣ್ ಶರ್ಮಾ ಅವರು ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದರೆ, ಹೆಚ್ಚುವರಿ ವಿಕೆಟ್ಕೀಪರ್, ಮೂರನೇ ಸ್ಪಿನ್ನರ್ ಹಾಗೂ ಆಲ್ರೌಂಡ್ ಆಟಗಾರನಿಗೆ ಸಮಿತಿ ಹುಡುಕಾಟ ನಡೆಸಿದೆ.
ಇಂಗ್ಲೆಂಡ್ನಂತಹ ವಾತಾವರಣದಲ್ಲಿ ಮಧ್ಯಮ ವೇಗಿಗಳಿಗೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅವಕಾಶ ನೀಡುವ ಬಗ್ಗೆ ಅನುಮಾನವಿದೆ. ಬ್ಯಾಟಿಂಗ್ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಕರಣ್ ಶರ್ಮಾ ಕುತೂಹಲ ಮೂಡಿಸಿದ್ದು, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಕಾದು ನೋಡಬೇಕಿದೆ. ಇನ್ನೊಂದೆಡೆ ಟೆಸ್ಟ್ ಸರಣಿ ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಸ್ವಾಸದಲ್ಲಿದೆ.
ಪಂದ್ಯದ ಸಮಯ ಮಧ್ಯಾಹ್ನ 3 ಗಂಟೆ
ಭಾರತ
ಮಹೇಂದ್ರರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕರಣ್ ಶರ್ಮಾ, ಮೋಹಿತ್ ಶರ್ಮಾ, ಉಮೇಶ್ ಯಾದವ್, ಮೊಹ್ಮದ್ ಶಮಿ, ಧವಳ್ ಕುಲಕರ್ಣಿ, ಭುವನೇಶ್ವರ ಕುಮಾರ್.
ಇಂಗ್ಲೆಂಡ್
ಅಲಸ್ಟೇರ್ ಕುಕ್ (ನಾಯಕ), ಮೋಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ಜೋಸ್ ಬಟ್ಲರ್, ಸ್ಟೀವನ್ ಫಿನ್, ಹ್ಯಾರಿ ಗುರ್ನೆ, ಅಲೆಕ್ಸ್ ಹಾಲ್ಸ್, ಆಯಾನ್ ಮೋರ್ಗನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೇಮ್ಸ್ ಟ್ರೆಡ್ವೆಲ್, ಕ್ರಿಸ್ ವೋಕ್ಸ್ .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


