ಮೋದಿಗೆ ಪಾಸ್‌ಪೋರ್ಟ್; ಕೋರ್ಟ್ ಆದೇಶ

ನವದೆಹಲಿ: ಬಿಸಿಸಿಐನಿಂದ ಅಮಾನತುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮಾಜಿ ಆಯುಕ್ತ ಲಲಿತ್ ಮೋದಿಗೆ ಪಾಸ್‌ಪೋರ್ಟ್ ನೀಡುವಂತೆ ಡೆಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಬುಧವಾರ ಆದೇಶಿಸಿದೆ. ಮುಂಬೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ 2010 ಮಾರ್ಚ್ 3ರಂದು ಮೋದಿ ಪಾಸ್‌ಪೋರ್ಟ್ ತೆರವುಗೊಳಿಸಿತ್ತು. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ನಿಷೇಧ ಎದುರಿಸುತ್ತಿರುವ ಮೋದಿ ಅವರು, ಭಾರತಕ್ಕೆ ಮರಳಿ ಕ್ರಿಕೆಟ್ ಆಡಳಿತಕ್ಕೆ ಮರು ಪ್ರವೇಶ ಮಾಡುವ ಸಾಧ್ಯತೆಗಳಿವೆ.
ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ(ಆರ್‌ಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಲಿತ್ ಮೋದಿ, ಈಗಲೂ ಬಿಸಿಸಿಐನಿಂದ ನಿಷೇಧ ಎದುರಿಸುತ್ತಿದ್ದಾರೆ. ಅವರು ತಮ್ಮ ಪಾಸ್‌ಪೋರ್ಟ್ ಮರಳಿಸುವಂತೆ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವೊಂದು ಕಳೆದ ಜನವರಿ 16ರಂದು ರತಳ್ಳಿ ಹಾಕಿತ್ತು.
ಐಪಿಎಲ್‌ನಲ್ಲಿ ಹಣಕಾಸು ವ್ಯವಹಾರ ಮಾಡಿರುವ ಕುರಿತು ಜಾರಿ ನಿರ್ದೇಶನಾಲಯದಿಂದ ಮೋದಿ ತನಿಕೆ ಎದುರಿಸುತ್ತಿದ್ದಾರೆ. ಮೋದಿ ಭಾರತೀಯ ಕ್ರಿಕೆಟ್‌ಗೆ ಮರಳುವುದನ್ನು ಬಿಸಿಸಿಐ ವಿರೋಧಿಸುತ್ತಿದೆ. ರಾಜಸ್ಥಾನ ಕ್ರೀಡಾ ಕಾಯ್ದೆಯ ಪ್ರಕಾರ ಅಧ್ಯಕ್ಷರನ್ನಾಗಿ ಮೋದಿ ಅವರನ್ನು ಆಯ್ಕೆ ಮಾಡಿರುವ ಆರ್‌ಸಿಎಯನ್ನು ಬಿಸಿಸಿಐ ಅಮಾನತುಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


