ಕ್ರೀಡೆ

ಕುಸಿದ ರಾಕ್‌ಸ್ಟಾರ್ಸ್, ಯುನೈಟೆಡ್ ವಿಜಯ

ಕುಸಿದ ರಾಕ್‌ಸ್ಟಾರ್ಸ್, ಯುನೈಟೆಡ್ ವಿಜಯ
Published On :

ಮೈಸೂರು: ರಾಕ್‌ಸ್ಟಾರ್ರ್ಸ್ ತಂಡದ ಕಳಪೆ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯದ ಲಾಭ ಪಡೆದ ಮಂಗಳೂರು ಯುನೈಟೆಡ್ ತಂಡವು, ಕೆಪಿಎಲ್ ಟಿ20 ಪಂದ್ಯಾವಳಿಯಲ್ಲಿ 7 ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿತು.

ನಗರದ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಕೆಎಸ್‌ಸಿಎ ಆಯೋಜಿಸಿರುವ ಕೆಪಿಎಸ್ 3ನೇ ಅವತ್ತಿಯ ಮೊದಲ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯುನೈಟ್‌ಡ್ ತಂಡ, ರಾಕ್‌ಸ್ಟಾರ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿ ಕೇವಲ 117 ರನ್‌ಗಳಿಗೆ ಕಟ್ಟಿ ಹಾಕಿತು. ಉತ್ತರವಾಗಿ ಮಂಗಳೂರು ಯುನೈಟೆಡ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 118 ರನ್‌ಗಳಿಸಿ ಗುರಿ ಮುಟ್ಟಿತ್ತು.

ಸಂಕ್ಷಿಪ್ತ ಸ್ಕೋರ್
ರಾಕ್‌ಸ್ಟಾರ್ಸ್ 20 ಓವರುಗಳಲ್ಲಿ 7 ವಿಕೆಟ್‌ಗೆ 117
ರಾಜೀವ್ 35, ಪ್ರದೀಪ್ 44, ಧ್ರುವ ಶರ್ಮಾ 22, ಉದಿತ್ ಪಟೇಲ್ 25ಕ್ಕೇ3, ಮಿತ್ರಕಾಂತ್ ಸಿಂಗ್ 12ಕ್ಕೇ2.

ಮಂಗಳೂರು ಯುನೈಟೆಡ್ 18.1 ಓವರುಗಳಲ್ಲಿ 3 ವಿಕೆಟ್‌ಗೆ 118
ರೋಹಿತ್ ಶಬರ್‌ವಾಲ್ 11, ಕರುಣ್ ನಾಯರ್ 46, ಗಣೇಶ್ ಸತೀಶ್ 27, ಪವನ್ ದೇಶಪಾಂಡೆ ಅಜೇಯ 24, ವಿಕ್ರಾಂತ್ 19ಕ್ಕೇ2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.