'ಜಯ'ಪುರ ಚಾಂಪಿಯನ್

ಮುಂಬೈ: ಬಾಲಿವುಡ್ ತಾರೆಗಳು ಮತ್ತು ಮಾಲೀಕರಾದ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬೆಂಬಲದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಉದ್ಘಾಟನಾ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಭಾನುವಾರ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೈಪುರ ತಂಡ ಯು ಮುಂಬಾ ವಿರುದ್ಧ 35-24 ಅಂಕಗಳಿಂದ ಭರ್ಜರಿ ಜಯ ದಾಖಲಿಸಿತು.
ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ ತಂಡದ ಪರ ಆಕರ್ಷಕ ಪ್ರದರ್ಶನ ತೋರಿದ ಮಣಿಂದರ್ ಸಿಂಗ್ ಅವರು 7 ಅಂಕ ಗಳಿಸಿಕೊಂಡರೆ, ರಾಜೇಶ್ ನರ್ವಾಲ್ ಅವರು 5 ಅಂಕ ಪಡೆದರು.
ಯು ಮುಂಬಾ ತಂಡದ ಪರ ನಾ.ಕ ಅನೂಪ್ ಕುಮಾರ್ 11 ಅಂಕ ಪಡೆದರು. ಆದರೆ, ಅದ್ಭುತ ಪ್ರದರ್ಶನ ತೋರಿದ ಜೈಪುರದ ರಕ್ಷಣಾ ವಿಭಾಗ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿತು. ಆರಂಭದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದವು. ಯು ಮುಂಬಾ ತಂಡದ ಪರ ನಾಯಕ ಅನೂಪ್ ಕುಮಾರ್ ಉತ್ತಮ ರೈಡಿಂಗ್ ನಡೆಸುವ ಮೂಲಕ ತಂಡ 4-2 ಅಂತರದಿಂದ ಮುನ್ನಡೆ ಕಂಡುಕೊಳ್ಳುವಂತೆ ನೋಡಿಕೊಂಡಿದ್ದರು. ನಂತರ ತಿರುಗೇಟು ನೀಡಿದ ಪ್ಯಾಂಥರ್ಸ್ ತಂಡ 8-6 ಅಂಕಗಳಿಂದ ಮುನ್ನಡೆ ಕೊಂಡುಕೊಂಡಿತು. ಅನಂತರ ಹಿಂದೆ ನೋಡದ ಜೈಪುರ ತಂಡ ಮೊದಲಾರ್ಧ ಪಂದ್ಯದಲ್ಲಿ 18-14 ಅಂಕಗಳಿಂದ ಮೇಲುಗೈ ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


