ಕಿರುಚಿತ್ರಗಳ ಸರಣಿಯಲ್ಲಿ ಜೊಕೊವಿಚ್ ಆತ್ಮಕಥೆ

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ...
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್
Updated on: 

ಸಿಡ್ನಿ: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ತಮ್ಮ ಆತ್ಮಕಥೆ ಪ್ರಕಟಿಸಲಿದ್ದಾರೆ. ಆದರೆ, ಈ ಆತ್ಮಕಥೆ ಪುಸ್ತಕ ರೂಪದಲ್ಲಿರದೇ, ಕಿರುಚಿತ್ರಗಳ ಸರಣಿಯ ಸ್ವರೂಪದ್ದಾಗಿರುತ್ತದೆ. ಈ ಸಾಕ್ಷ್ಯ ಚಿತ್ರದ  ಹೆಸರು 'ಮೇಡ್ ಬೈ'.

27 ವರ್ಷದ ವಯಸ್ಸಿನ ಈ ಆಟಗಾರ ಹುಟ್ಟಿದ್ದು, ಬೆಳೆದಿದ್ದು, ವಿದ್ಯಾರ್ಜನೆ ಮಾಡಿದ್ದು, ಟೆನಿಸ್ ಬಗ್ಗೆ ಅಪಾರ ಒಲವು ತಾಳಿದ್ದು, ಆನಂತರ ಜಗತ್ತಿನ ನಂಬರ್ ಒನ್ ಟೆನಿಸ್ ಆಟಗಾರನಾಗಿ ಮಿಂಚಿದ್ದು ...ಹೀಗೆ ಎಲ್ಲವನ್ನೂ ಈ ಕಿರುಚಿತ್ರದಲ್ಲಿ ಹೇಳಲಾಗುತ್ತದೆ. ಇದಕ್ಕಾಗಿ ಕಿರುಚಿತ್ರ ತಯಾರಿಕಾ ಸಂಸ್ಥೆಯನ್ನು ಹುಟ್ಟುಹಾಕಲಿರುವ ಜೊಕೊವಿಚ್, ಆ ಮೂಲಕವೇ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಶುರುವಾಗಲಿದ್ದು, ಅದಕ್ಕೂ ಮುನ್ನವೇ ಕಿರುಚಿತ್ರಗಳ ಎಲ್ಲಾ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಜೊಕೊವಿಚ್ ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com