ಗೆಲ್ಲುವ ಹಾದಿಯಲ್ಲಿ ಹಿಂದಡಿ ಇಟ್ಟ ಭಾರತ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದ ಮೂರು ದಿನಗಳ ಆಟದಲ್ಲಿ ಪಂದ್ಯದ ಮೇಲೆ ಸಂಪೂರ್ಣ ತನ್ನ ಪ್ರಭುತ್ವ ಸ್ಥಾಪಿಸಿದ್ದಾಗ ನಿಚ್ಚಳ ಗೆಲುವು ದಾಖಲಿಸುವುದೆಂಬುದೇ ಎಲ್ಲರ ಲೆಕ್ಕವಾಗಿತ್ತು. ಆದರೆ, ನಾಲ್ಕನೇ ದಿನದಾಟದಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಭಾರತ ಪಂದ್ಯ ಗೆಲ್ಲುವ ಮಾತಿರಲಿ, ಸೋಲಬಹುದೇನೋ ಎಂಬ ಅತಂಕವೂ ಶುರುವಾಗಿದೆ.
ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಸೋಮವಾರ ನಾಲ್ಕನೇ ಹಾಗೂ ಉಪಾಂತ್ಯ ದಿನದಾಟದಲ್ಲಿ ಬ್ರೆಂಡನ್ ಮೆಕಲಂ ಮತ್ತು ಬ್ರ್ಯಾಡ್ಲಿ ವಾಟ್ಲಿಂಗ್ 6ನೇ ವಿಕೆಟ್ ಜೊತೆಯಾಟದಲ್ಲಿ ವಿಶ್ವದಾಖಲೆ ಸಾಧನೆ ಮಾಡುವ ಮೂಲಕ ಭಾರತ ತಂಡ ಹಿಂದಡಿ ಇಡುವಂತೆ ಮಾಡಿದ್ದಾರೆ. ಉಪಾಂತ್ಯ ದಿನದಾಂತ್ಯಕ್ಕೆ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 571 ರನ್ಗಳಿಸುವ ಮೂಲಕ ಎರಡನೇ ಇನಿಂಗ್ಸ್ನಲ್ಲಿ ಒಟ್ಟಾರೆ 325 ರನ್ಗಳ ಮುನ್ನಡೆಯಲ್ಲಿದೆ.
ನಾಯಕ ಬ್ರೆಂಡನ್ ಮೆಕಲಂ (ಬ್ಯಾಟಿಂಗ್ 281, 525 ಎಸೆತ, 28 ಬೌಂಡರಿ, 4 ಸಿಕ್ಸರ್) ಮತ್ತು ಜಿಮ್ಮಿ ನೀಶಂ (ಬ್ಯಾಟಿಂಗ್ 67, 96 ಎಸೆತ, 9 ಬೌಂಡರಿ) ನಾಳೆಗೆ ವಿಕೆಟ್ ಕಾಯ್ದುಕೊಂಡಿದ್ದರು.
ಮೊದಲ ಇನಿಂಗ್ಸ್ನಲ್ಲಿ 246 ರನ್ಗಳ ಭಾರಿ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲವಿನ ಕನಸು ಕಂಡಿದ್ದ ಮಹೇಂದ್ರ ಸಿಂಗ್ ಧೋನಿ ಪಡೆ ಈಗ ಭಾರಿ ನಿರಾಸೆಗೊಳಗಾಗಿದೆ.
ಮೆಕಲಂ-ವಾಟ್ಲಿಂಗ್ ವಿಶ್ವದಾಖಲೆ ಆಟ
ಮೂರನೇ ದಿನದ ಮೊತ್ತ 5 ವಿಕೆಟ್ಗೆ 252 ರನ್ಗಳೊಂದಿಗೆ ನಾಲ್ಕನೇ ದಿನದಾಟ ಮುಂದುವರಿಸಿದ ಬ್ರೆಂಡನ್ ಮೆಕಲಂ ಮತ್ತು ಬ್ರ್ಯಾಡ್ಲಿ ವಾಟ್ಲಿಂಗ್ 6ನೇ ವಿಕೆಟ್ಗೆ 352 ರನ್ಗಳ ವಿಶ್ವದಾಖಲೆ ಜೊತೆಯಾಟ ನೀಡಿದರು. 2009ರ ಅಹಮದಾಬಾದ್ ಪಂದ್ಯದಲ್ಲಿ ಭಾರತದ ವಿರುದ್ಧವೇ ಶ್ರೀಲಂಕಾದ ಮಹೇಲ ಜಯವರ್ದನೆ ಮತ್ತು ಪ್ರಸನ್ನ ಜಯವರ್ದನೆ ಆರನೇ ವಿಕೆಟ್ಗೆ ಸೇರಿಸಿದ್ದ 351 ರನ್ಗಳ ವಿಶ್ವದಾಖಲೆ ಜೊತೆಯಾಟದ ಸಾಧನೆಯನ್ನು ಇವರು ಅಳಿಸಿ ಹಾಕಿದರು. ಆ ಮೂಲಕ ನ್ಯೂಜಿಲೆಂಡ್ ತಂಡವನ್ನೂ ಸೋಲಿನ ದವಡೆಯಿಂದ ಪಾರು ಮಾಡಿದ್ದಲ್ಲದೇ, ಗೆಲವಿನ ಆಸೆಯನ್ನು ಹೆಚ್ಚಿಸಿದರು.
ಅಂತಿಮವಾಗಿ ವಾಟ್ಲಿಂಗ್ 21ನೇ ಟೆಸ್ಟ್ನಲ್ಲಿ 3ನೇ ಶತಕ ಬಾರಿಸಿದ ಹೆಗ್ಗಳಿಕೆಯೊಂದಿಗೆ (124ರನ್, 367 ಎಸೆತ, 13 ಬೌಂಡರಿ) ಪೆವಿಲಿಯನ್ ಸೇರಿದರು. ನಂತರ ಕ್ರೀಸ್ಗಿಳಿದ ಜಿಮ್ಮಿ ನೀಶಂ ಕೂಡ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಲ್ಲದೇ, ಶತಕ ಪೂರೈಸುವ ಅವಕಾಶವನ್ನು ತಮ್ಮದಾಗಿಸಿಕೊಂಡರು. ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ ಮೆಕಲಂ ಮತ್ತು ನೀಶಂ 125 ರನ್ ಸೇರಿಸಿದ್ದು, ತಮ್ಮ ತಂಡದ ಪಾಳಯದಲ್ಲಿ ಗೆಲವಿನ ಆಸೆ ಚಿಗುರುವಂತೆ ಮಾಡಿದರು.
ಬಳಲಿದ ಭಾರತೀಯ ಬೌಲರ್ಗಳು
ಉಪಾಂತ್ಯ ದಿನವಿಡೀ ಭಾರತೀಯ ಬೌಲರ್ಗಳು ಸಾಕಷ್ಟು ಬಳಲಿದರು. ನಾಯಕ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ನಲ್ಲಿ ಏನೇ ಬದಲಾವಣೆ ತಂದರೂ ಕೇವಲ 1 ವಿಕೆಟ್ ಪಡೆಯಲಷ್ಟೇ ದಾಳಿಕಾರರು ಶಕ್ತರಾದರು.
ಟೀಂ ಇಂಡಿಯಾ ಬೌಲರ್ಗಳ ಮೊನಚಿಲ್ಲದ ದಾಳಿಯಿಂದಾಗಿ ಆತಿಥೇಯ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.
ಮೆಕಲಂ, ವಾಟ್ಲಿಂಗ್ ಮತ್ತು ನೀಶಂರನ್ನು ಸಂಕಷ್ಟಕ್ಕೆ ಸಿಲುಕಿಸಿ ವಿಕೆಟ್ ಕೈಚೆಲ್ಲುವಂತೆ ಮಾಡುವಲ್ಲಿ ಭಾರತದ ಬೌಲರ್ಗಳು ಸಂಪೂರ್ಣ ವಿಫಲರಾದರು.
ಸ್ಕೋರ್ ವಿವರ
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 192
ಭಾರತ ಮೊದಲ ಇನಿಂಗ್ಸ್ 438
ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 6 ವಿಕೆಟ್ಗೆ 571
(ನಿನ್ನೆ 5ಕ್ಕೆ252ರಿಂದ ಮುಂದುವರಿದಿದೆ)
ಬ್ರೆಂಡನ್ ಮೆಕಲಂ ಬ್ಯಾಟಿಂಗ್ 281
ಬ್ರ್ಯಾಡ್ಲಿ ವಾಟ್ಲಿಂಗ್ ಎಲ್ಬಿ ಬಿ ಶಮಿ 124
ಜಿಮ್ಮಿ ನೀಶಂ ಬ್ಯಾಟಿಂಗ್ 67
ಇತರೆ 25
ವಿಕೆಟ್ ಪತನ: 1-1, 2-27, 3-52, 4-87, 5-94, 6-446
ಬೌಲಿಂಗ್ ವಿವರ
ಇಶಾಂತ್ ಶರ್ಮಾ 39-4-124-0
ಜಹೀರ್ ಖಾನ್ 43-12-129-3
ಮೊಹಮದ್ ಶಮಿ 40-5-136-2
ರವೀಂದ್ರ ಜಡೇಜಾ 49-10-108-1
ರೋಹಿತ್ ಶರ್ಮಾ 11-0-40-0
ವಿರಾಟ್ ಕೊಹ್ಲಿ 6-1-13-0
ಮಹೇಂದ್ರ ಸಿಂಗ್ ಧೋನಿ 1-0-5-0
ಮೆಕಲಂ ಸಾಧನೆ
ವಿಶ್ವದಾಖಲೆಯ ಜೊತೆಯಾಟದ ಸಾಧನೆಯ ನಡುವೆಯೆ ಬ್ರೆಂಡನ್ ಮೆಕಲಂ ಇನ್ನೂ ಕೆಲವು ಗೌರವಗಳಿಗೂ ಭಾಜನರಾದರು. ನ್ಯೂಜಿಲೆಂಡ್ ಪರ ವೈಯಕ್ತಿಕವಾಗಿ ಅತಿ ಹೆಚ್ಚು ರನ್ಗಳಿಸಿದ ಕೇವಲ ಎರಡನೇ ಆಟಗಾರ ಎನಿಸಿದರು. ಮಾಜಿ ನಾಯಕ ಮಾರ್ಟಿನ್ ಕ್ರೋವ್, 1991ರಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 299 ರನ್ಗಳಿಸಿದ್ದು, ಕಿವೀಸ್ ಪರ ಶ್ರೇಷ್ಠ ಸಾಧನೆಯಾಗಿದೆ. ಆದರೆ, ಈ ಸಾಧನೆ ಮೆಟ್ಟಿನಿಲ್ಲಲು ಮೆಕಲಂಗೆ ಇನ್ನು ಕೇವಲ 18 ರನ್ಗಳ ಅವಶ್ಯಕತೆಯಿದೆ. ಅಲ್ಲದೆ, ನ್ಯೂಜಿಲೆಂಡ್ ಪರ ತ್ರಿಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಳ್ಳುವ ಹಾದಿಯಲ್ಲೂ ಅವರಿದ್ದಾರೆ.
ಈ ಮಧ್ಯೆ ಸತತ ಎರಡು ದ್ವಿಶತಕ ಬಾರಿಸಿದ ನ್ಯೂಜಿಲೆಂಡ್ನ ಮೊದಲ ಆಟಗಾರ ಕೂಡ ಅವರಾಗಿದ್ದಾರೆ. ಜೊತೆಗೆ ಮೂರನೇ ದ್ವಿಶತಕ ಬಾರಿಸಿರುವ ಅವರು ನ್ಯೂಜಿಲೆಂಡ್ ಪರ ಅತಿ ಹೆಚ್ಚು ದ್ವಿಶತಕ ದಾಖಲಿಸಿರುವ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರ ಸಾಧನೆಯನ್ನೂ ಕೂಡಿಕೊಂಡಿದ್ದಾರೆ.
ಭಾರತದ ಪ್ರತಿಯೊಬ್ಬ ದಾಳಿಕಾರನನ್ನು ನ್ಯೂಜಿಲೆಂಡ್ ನಾಯಕ ಅತ್ಯಂತ ಆತ್ಮವಿಶ್ವಾಸದಿಂದಲೇ ದಂಡಿಸಿ ಮೈದಾನ ಪ್ರತಿ ಮೂಲೆಗೂ ಚೆಂಡನ್ನು ಬಾರಿಸಿ ಸುಲಭವಾಗಿ ರನ್ ಕಲೆಹಾಕಿದರು.
ಪ್ರತಿಯೊಬ್ಬನೂ ಸಮರ್ಥನಿದ್ದ
ಹಾಗಾಗಿ ಆಯ್ಕೆ ಕಷ್ಟವಾಗಿತ್ತು
ಈ ಬಾರಿ ಕರ್ನಾಟಕ ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರರು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದರು. ಹಾಗಾಗಿ ಪ್ರತಿ ಪಂದ್ಯದಲ್ಲಿ ಆಡುವ ಹನ್ನೊಂದು ಆಟಗಾರರ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡುವುದು ಅತ್ಯಂತ ಕಠಿಣವಾಗಿತ್ತು.
ಹನ್ನೊಂದು ಆಟಗಾರರನ್ನು ಆಯ್ಕೆ ಮಾಡಿ ಇತರೆ ಆಟಗಾರರನ್ನು ತಂಡದಿಂದ ಹೊರಗುಳಿಯಲು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪ್ರತಿಯೊಬ್ಬ ಆಟಗಾರನೂ ತಂಡದ ಪರಿಸ್ಥಿತಿಯನ್ನು ಅರಿತು ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತಿದ್ದರು.
ತಂಡದಲ್ಲಿ ಆಟಗಾರರನ್ನು ಪ್ರತಿ ಪಂದ್ಯದ ಪರಿಸ್ಥಿತಿ, ಎದುರಾಗುತ್ತಿದ್ದ ಸವಾಲಿಗೆ ಅನುಗುಣವಾಗಿ ಬದಲಾವಣೆ ಮಾಡುತ್ತಿದ್ದೆವು. ಎಲ್ಲಾ ಆಟಗಾರರು ಉತ್ತಮ ಪರಿಶ್ರಮ ಹಾಕುತ್ತಿದ್ದರು. ಅಲ್ಲದೆ ಆತ್ಮ ವಿಶ್ವಾಸದಿಂದ ಎದುರಾಳಿಗಳನ್ನು ಎದುರಿಸಿದರು. ಇದು ಎದುರಾಳಿ ತಂಡಕ್ಕೆ ಹೆಚ್ಚಿನ ಹೆಚ್ಚಿನ ಸವಾಲಾಗಿ ಪರಿಣಮಿಸಿತು.
ಪ್ರತಿ ಪಂದ್ಯಕ್ಕೆ ನಾವು ನಮ್ಮದೇ ಆದ ಕೆಲವು ಯೋಜನೆ ರೂಪಿಸುತ್ತಿದ್ದೆವು. ಆದರೆ ಕೆಲವು ಸಂದರ್ಭಗಳಲ್ಲಿ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ನಮ್ಮ ಯೋಜನೆಗಳಲ್ಲಿ ತಕ್ಷಣ ಬದಲಾವಣೆ ಮಾಡಿಕೊಳ್ಳುತ್ತಿದ್ದೆವು.
ತಂಡದ ಡ್ರೆಸಿಂಗ್ ರೂಮ್ನಲ್ಲಿ ಕುಟುಂಬದ ವಾತಾವರಣ ನಿರ್ಮಿತವಾಗಿತ್ತು. ಪ್ರತಿಯೊಬ್ಬರು ಇತರರ ಜತೆ ಚೆನ್ನಾಗಿ ಬೆರೆಯುತ್ತಿದ್ದರು. ಒಬ್ಬರ ಬೆಂಬಲಕ್ಕೆ ಮತ್ತೊಬ್ಬರು ನಿಲ್ಲುತ್ತಿದ್ದರು. ಇದು ತಂಡದ ಪ್ರಮುಖ ಸಕಾರಾತ್ಮಕ ಅಂಶ.
ಯುವ ಆಟಗಾರರು ಈ ಬಾರಿ ಮಹತ್ವದ ಪ್ರದರ್ಶನ ನೀಡಿದರು. ಅದೇ ರೀತಿ ಕೆಲವೊಮ್ಮೆ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಹಿರಿಯ ಆಟಗಾರರು ತಮ್ಮ ಅನುಭವವನ್ನು ಬಳಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ತಂಡದಲ್ಲಿನ ಒಗ್ಗಟ್ಟು, ಆಟಗಾರರ ಆತ್ಮ ವಿಶ್ವಾಸ, ಸವಾಲನ್ನು ಸ್ವೀಕರಿಸಿ ಅದನ್ನು ಸಕಾರಾತ್ಮಕವಾಗಿ ಮೆಟ್ಟಿನಿಂತ ರೀತಿ ಉತ್ತಮವಾಗಿತ್ತು. ಈ ಗೆಲವು ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮಹತ್ವದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


