ಕ್ರೀಡೆ

ಉತ್ತರ ವಲಯ ವಿರುದ್ಧ ದಕ್ಷಿಣ ವಲಯದ ನಿಯಂತ್ರಣ

Published On :

ಮೈಸೂರು: ವೇಗದ ಬೌಲರ್ ಅಭಿಷೇಕ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ವಲಯ ತಂಡವು ವಿಝಿ ಟ್ರೋಫಿಯ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧ ನಿಯಂತ್ರಣ ಸಾಧಿಸಿದೆ.
ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯುತ್ತಿರುವ ವಿಝಿ ಟ್ರೋಫಿ ಅಂತಿಮ ಪಂದ್ಯದ ಮೂರನೆ ದಿನವಾದ ಬುಧವಾರ ದಕ್ಷಿಣ ವಲಯ ತಂಡವನ್ನು 377 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ದಕ್ಷಿಣ ವಲಯ ತಂಡವು 145 ರನ್‌ಗಳ ಮುನ್ನಡೆ ಪಡೆಯಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿರುವ ಉತ್ತರ ವಲಯ ದಿನದ ಅಂತ್ಯಕ್ಕೆ ಎಂಟು ವಿಕೆಟ್ ಕಳೆದುಕೊಂಡು 301 ರನ್ ಸಂಪಾದಿಸುವ ಮೂಲಕ 156 ರನ್‌ಗಳ ಮುನ್ನಡೆ ಸಾಧಿಸಿದೆ. ಉತ್ತರ ವಲಯದ ಪರ ಕಪಿಲ್ ಧಾಕ(83) ಬಾರಿಸಿದ ಅರ್ಧ ಶತಕದ ನೆರವಿನಿಂದ ಚೇತರಿಸಿಕೊಂಡ ಉತ್ತರ ವಲಯವು ದಕ್ಷಿಣಕ್ಕೆ ಬೃಹತ್ ಗುರಿ ನೀಡುವತ್ತ ಗಮನ ಹರಿಸಿದೆ. ಆದರೆ ಉತ್ತರ ತಂಡದ ಬಳಿ ಕೇವಲ ಎರಡು ವಿಕೆಟ್‌ಗಳು ಮಾತ್ರ ಬಾಕಿ ಉಳಿದಿವೆ. ದಕ್ಷಿಣ ವಲಯ ತಂಡ ಗುರುವಾರ ಉತ್ತರವನ್ನು ಆದಷ್ಟು ಬೇಗ ಕಟ್ಟಿಹಾಕಿ ಪಂದ್ಯದಲ್ಲಿ ಗೆಲವು ಸಾಧಿಸುವ ವಿಶ್ವಾಸದಲ್ಲಿದೆ. ಉತ್ತರದ ಪರ ಅಮನ್‌ದೀಪ್ ಬಾವಾ 45, ಯೋಗೇಶ್ ರಾತಿ 34, ಮೋಹಿತ್ ಹಂದೆ 31, ಶಿವ್‌ರಾತಿ 21, ವಿನಿತ್ 26, ಅಮಿತ್ ದಲ್ಲಾಳ್ 18 ರನ್ ಗಳಿಸಿದರು.
ದಕ್ಷಿಣ ವಲಯ ತಂಡದ ಅಭಿಷೇಕ್ ತನ್ವೀರ್ ಕೇವಲ 58 ರನ್ ನೀಡಿ 4 ವಿಕೆಟ್ ಕಬಳಿಸಿದರು. ಎಸ್. ನಿಕಿತ್, ಕಿರಣ್ ಕಶ್ಯಪ್, ಅಬ್ದುಲ್ ಮಜೀದ್ ಮತ್ತು ಆಶಿಷ್ ಕುಮಾರ್ ತಲಾ ಒಂದು ವಿಕೆಟ್ ಕಬಳಿಸಿದರು. ಇದಕ್ಕೂ ಮುನ್ನ ತನ್ನ ಮೊದಲ ಇನ್ನಿಂಗ್ಸ್ ಮುಂದುವರೆಸಿದ ದಕ್ಷಿಣ ವಲಯ ತಂಡದ ಎಸ್.ನಿಕಿತ್ 25, ಅಭಿಷೇಕ್ ತನ್ವಾರ್ 17 ಮತ್ತು ಕಿರಣ್ ಕಶ್ಯಪ್ 4 ರನ್ ಗಳಿಸಿದರು. ಶತಕ ಗಳಿಸಿ ಆಟ ಮುಂದುವರೆಸಿದ್ದ ವಿಹಾಲ್ ಉಲ್ಲಾಳ್(105) ತಮ್ಮ ಖಾತೆಗೆ ಒಂದು ರನ್ ಸೇರಿಸುವಷ್ಟರಲ್ಲಿ ಪಂಕಜ್ ಎಸೆತದಲ್ಲಿ ವಿವೇಕ್ ರಾಣಗೆ ಕ್ಯಾಚ್ ನೀಡಿದರು.




ಸಂಕ್ಷಿಪ್ತ ಸ್ಕೋರ್
ಉತ್ತರ ವಲಯ ಮೊದಲ ಇನಿಂಗ್ಸ್ 232
ದಕ್ಷಿಣ ವಲಯ, ಮೊದಲ ಇನ್ನಿಂಗ್ಸ್ 377 (ಬುಧವಾರದಿಂದ ಮುಂದುವರೆದಿದೆ)
ವಿಹಾಲ್ ಉಲ್ಲಾಳ್ 105, ಎಸ್. ನಿಕಿತ್
25, ವಿನಿತ್ 68ಕ್ಕೆ4
ಉತ್ತರ ವಲಯ ದ್ವಿತೀಯ ಇನ್ನಿಂಗ್ಸ್ 301-8
ಕಪಿಲ್ ಧಾಕ 83, ಮಂದೀಪ್
ಬಾವಾ 45, ಅಭಿಷೇಕ್ 58ಕ್ಕೆ4

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.