ಬಿಎಫ್ಸಿ ಡ್ರಾಗೆ ತೃಪ್ತಿ
ಬೆಂಗಳೂರು: ಕೊನೆಯವರೆಗೂ ಪ್ರೇಕ್ಷಕರನ್ನು ರೋಚಕತೆಯಲ್ಲೇ ಸೆಳೆದುಕೊಂಡು ಹೋದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಮತ್ತು ಮುಂಬೈ ಫುಟ್ಬಾಲ್ ಕ್ಲಬ್ ತಂಡಗಳು ಭಾನುವಾರ ನಡೆದ ಐ-ಲೀಗ್ ಪಂದ್ಯದಲ್ಲಿ ಡ್ರಾ ಸಾಧಿಸಿದವು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ನಾಯಕ ಸುನಿಲ್ ಛೆಟ್ರಿ ಅಲಭ್ಯರಾದ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಬಿಎಫ್ಸಿ, ಬಲಿಷ್ಠ ಮುಂಬೈ ವಿರುದ್ಧ 1-1 ಗೋಲುಗಳ ಅಂತರದಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮೊದಲಾರ್ಧ ಪಂದ್ಯದಲ್ಲಿ ಎಷ್ಟೇ ಹರಸಾಹಸ ಮಾಡಿದರೂ, ಉಭಯ ತಂಡಗಳಿಗೆ ಒಂದು ಗೋಲು ದಾಖಲಿಸಲೂ ಸಾಧ್ಯವಾಗಲಿಲ್ಲ. ಆದರೆ, ದ್ವಿತೀಯಾರ್ಧ ಪಂದ್ಯ ಆರಂಭವಾಗುತ್ತಿದ್ದಂತೆ ಉಭಯ ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾದವು. ಫಲವಾಗಿ 46ನೇ ನಿಮಿಷದಲ್ಲಿ ಮುಂಬೈ ತಂಡದ ಪರ ಗೋಲು ದಾಖಲಿಸಿದ ಎಬಿ ಸುಕೋರೆ ಅವರು ಪ್ರವಾಸಿ ತಂಡ ಮುನ್ನಡೆ ಪಡೆಯುವ ಮೂಲಕ ಹರ್ಷದ ಹೊನಲಿನಲ್ಲಿ ತೇಲುವಂತೆ ಮಾಡಿದರು. ಆತಿಥೇಯ ಆಟಗಾರರನ್ನು ಸುಲಭವಾಗಿ ವಂಚಿಸುವ ಮೂಲಕ ಸುಕೋರೆ ಗೋಲು ದಾಖಲಿಸಿದ್ದು, ಬೆಂಗಳೂರು ಫುಟ್ಬಾಲ್ ಕ್ಲಬ್ನಲ್ಲಿ ನರೆದಿದ್ದ 7 ಸಾವಿರಕ್ಕೂ ಅಧಿಕ ತವರಿನ ಅಭಿಮಾನಿಗಳಲ್ಲಿ ನಿರಾಸೆ ಉಂಟುಮಾಡಿತು.
ಈ ಹರ್ಷ ಮುಂಬೈ ತಂಡದಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಕಾರಣ, ಪಂದ್ಯದ 54ನೇ ನಿಮಿಷದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಆಟಗಾರ ಸ್ಟ್ರೈಕರ್ ಬೀಖೋಖೀ ಬೆಂಗಾಯಿಚೋ ಅವರು ಪಾಸ್ ಮಾಡಿದ ಚೆಂಡನ್ನು ಮಿಸ್ ಮಾಡದೇ, ಗೋಲ್ ಪೆಟ್ಟಿಗೆಗೆ ಸೇರಿಸುವಲ್ಲಿ ಇನ್ನೊಬ್ಬ ಸ್ಟ್ರೈಕರ್ ರಾಬಿನ್ ಸಿಂಗ್ ಯಶಸ್ವಿಯಾದರು. ಆಗ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸು ವುದರೊಂದಿಗೆ ಬಿಎಫ್ಸಿ ಅಭಿಮಾನಗಳಲ್ಲಿ ಕೊಂಚ ನೆಮ್ಮದಿ ಉಂಟುಮಾಡಿತು.
ಆದರೆ, ಪಂದ್ಯದ 55ನೇ ನಿಮಿಷದಲ್ಲಿ ಗೋಲು ದಾಖಲಿಸಲು ಸಿಕ್ಕ ಅವಕಾಶದಲ್ಲಿ ಬೆಂಗಳೂರು ತಂಡದ ಆಟಗಾರರು ಕೈಚೆಲ್ಲಿದ್ದು ಮಾತ್ರ ತವರಿನ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಪಂದ್ಯದಲ್ಲಿ 90 ನಿಮಿಷಗಳು ಅಂತ್ಯಗೊಂಡಾಗ ಡ್ರಾದಲ್ಲೇ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ನಂತರ 5 ನಿಮಿಷಗಳ ಹೆಚ್ಚುವರಿ ಸಮಯದಲ್ಲೂ ಗೋಲು ದಾಖಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಲಿಲ್ಲ.
ಇದರೊಂದಿಗೆ ಬೆಂಗಳೂರು ತಂಡ 16 ಪಂದ್ಯಗಳಿಂದ 9ರಲ್ಲಿ ಜಯ ಸಾಧಿಸಿ 31 ಅಂಕಗಳನ್ನು ಗಳಿಸಿಕೊಂಡಿತು. ಇನ್ನೊಂದೆಡೆ ಮುಂಬೈ 16 ಪಂದ್ಯಗಳಿಂದ 18 ಅಂಕಗಳನ್ನು ಗಳಿಸಿಕೊಂಡಿತು.
ಅಂತಿಮವಾಗಿ ಉಭಯ ತಂಡಗಳು ಜಯದ ಹೊಸ್ತಿಲು ತುಳಿಯಲು ಸಾಕಷ್ಟು ಪ್ರಯತ್ನ ನಡೆಸಿದವಾದರೂ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರು ಡ್ರಾದಲ್ಲೇ ತೃಪ್ತಿಪಡಬೇಕಾಯಿತು. ಬೆಂಗಳೂರು ತಂಡ ಉತ್ತಮವಾಗಿಯೇ ಪ್ರದರ್ಶನ ನೀಡಿತಾದರೂ, ಗೋಲು ದಾಖಲಿಸಲು ದೊರಕಿದ ಹಲವಾರು ಅವಕಾಶಗಳಲ್ಲಿ ಪ್ರಮುಖ ಆಟಗಾರರಾದ ರಾಬಿನ್ ಸಿಂಗ್, ಸೀನ್ ರೂನಿ ಹಾಗೂ ಜಾನ್ ಜಾನ್ಸನ್ ಅವರು ಕೈಚೆಲ್ಲಿದ್ದು, ಜಯದ ಹಾದಿ ತಪ್ಪುವಂತೆ ಮಾಡಿತು.
ಮೊದಲಾರ್ಧ ಪಂದ್ಯದ 17ನೇ ಮತ್ತು 29ನೇ ನಿಮಿಷದಲ್ಲಿ ಮುಂಬೈಗೆ ಗೋಲು ದಾಖಲಿಸುವ ಅವಕಾಶ ದೊರಕಿತ್ತು. ಆದರೆ, ಬೆಂಗಳೂರು ಗೋಲ್ ಕೀಪರ್ ಪವನ್ ಕುಮಾರ್ ಅವಕಾಶ ವ್ಯರ್ಥಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

