ತ್ರಿವರ್ಣ ಧ್ವಜದಡಿ ಅಥ್ಲೀಟ್ಗಳ ಪಥಸಂಚಲನ
ಸೋಚಿ: ಈ ಬಾರಿಯ ಸೋಚಿ ಚಳಿಗಾಲದ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಅಥ್ಲೀಟ್ಗಳು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಧ್ವಜದಡಿ ಪಥಸಂಚಲನ ಮಾಡುವ ಮೂಲಕ ಭಾರತೀಯರಿಗೆ ನಿರಾಸೆ ಮೂಡಿತ್ತು. ಆದರೆ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಇದೇ ಅಥ್ಲೀಟ್ಗಳು ತ್ರಿವರ್ಣ ಧ್ವಜದಡಿ ಪಥ ಸಂಚಲನ ಮಾಡಿದ್ದಾರೆ.
ಸೋಮವಾರ ನಡೆದ ಸೋಚಿ ಚಳಿಗಾಲದ ಒಲಿಂಪಿಕ್ಸ್ನ ಅಭೂತಪೂರ್ವ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜದಡಿ ಪಥಸಂಚಲನ ಮಾಡಿದ ಭಾರತೀಯ ಅಥ್ಲೀಟ್ಗಳು ಹೆಮ್ಮೆಪಟ್ಟರು.
ಭಾರತೀಯ ಒಲಿಂಪಿಕ್ಸ್ ಸಮಿತಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಿಂದ ನಿಷೇಧಕ್ಕೊಳಗಾಗಿದ್ದ ಹಿನ್ನಲೆಯಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಅಥ್ಲೀಟ್ಗಳು ಐಒಸಿ ಧ್ವಜದಡಿ ಭಾಗವಹಿಸಿದ್ದರು. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
ಆದರೆ ಫೆ.9ರಂದು ಭಾರತೀಯ ಒಲಿಂಪಿಕ್ಸ್ ಸಮಿತಿ ಐಒಸಿ ಷರತ್ತಿನಂತೆ ಚುನಾವಣೆ ನಡೆಸಿದ ಹಿನ್ನಲೆಯಲ್ಲಿ ಫೆ.11ರಂದು ಭಾರತದ ಮೇಲಿನ ನಿಷೇಧವನ್ನು ಐಒಸಿ ತೆರವುಗೊಳಿಸಿತು. ಹಾಗಾಗಿ ಭಾರತದ ತ್ರಿವರ್ಣ ಧ್ವಜ ಸೋಚಿ ಒಲಿಂಪಿಕ್ಸ್ನಲ್ಲಿ ಹಾರಾಟ ನಡೆಸಿತು. ಐಒಸಿ ಕ್ರೀಡಾಕೂಟದ ಮಧ್ಯಭಾಗದಲ್ಲೇ ನಮ್ಮ ಮೇಲಿನ ನಿಷೇಧವನ್ನು ತೆರವುಗೊಳಿಸಿತು. ಅದಕ್ಕಾಗಿ ಐಒಸಿ ಅಧ್ಯಕ್ಷ ಥಾಮಸ್ ಬ್ಯಾಚ್ಗೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಭಾರತದ ಪಾಲಿಗೆ ಮಹತ್ವವಾದ ನಿರ್ಧಾರ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಐಒಸಿ ಧ್ವಜದಡಿಯಲ್ಲಿ ಭಾಗವಹಿಸಿದ್ದು, ನಿರಾಸೆಯ ಅನುಭವವಾಗಿತ್ತು.
ನಿಷೇಧ ತೆರವಾದ ನಂತರ ಭಾರತದ ಧ್ವಜದಡಿ ಭಾಗವಹಿಸಿದೆ. ಅಲ್ಲದೆ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜದಡಿ ಭಾಗವಹಿಸಿದ್ದು, ನನ್ನ ಕೋಚ್, ತಂದೆ ತಾಯಿ ಹಾಗೂ ಸ್ನೇಹಿತರಿಗೂ ಸಂತಸ ತಂದಿದೆ ಎಂದು ಆಲ್ಫೈನ್ ಸ್ಕೀಯರ್ ಹಿಮಾಂಶು ಠಾಕೂರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

