ಐಪಿಎಲ್ ಫಿಕ್ಸಿಂಗ್ನಲ್ಲಿ ಧೋನಿ ಭಾಗಿ
ನವದೆಹಲಿ: ಐಪಿಎಲ್ ಫಿಕ್ಸಿಂಗ್ನಲ್ಲಿ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಭಾಗಿಯಾಗಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರನೊಬ್ಬ ಲಂಡನ್ ಮೂಲದ ಪತ್ರಿಕೆಯೊಂದಕ್ಕೆ ಹೇಳಿರುವುದು ವರದಿಯಾಗಿದೆ.
ದ ಸಂಡೇ ಗಾರ್ಡಿಯನ್ ಪತ್ರಿಕೆಯ ಜತೆಗಿನ ಮಾತುಕತೆಯ ವೇಳೆ ರಾಜಸ್ಥಾನದ ಆಟಗಾರನೊಬ್ಬ ಈ ವಿಷಯವನ್ನು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಆ ಆಟಗಾರನ ಹೆಸರನ್ನು ಎಲ್ಲೂ ಬಹಿರಂಗ ಪಡಿಸಿಲ್ಲ.
ಐಪಿಎಲ್ 6ನೇ ಆವೃತ್ತಿಯಲ್ಲಿ ಮೇ 12ರಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ 61ನೇ ಪಂದ್ಯದ ಮೇಲೆ ಸಂಶಯ ಮೂಡಿದ್ದು, ಬುಕ್ಕಿಗಳು ಈ ಪಂದ್ಯದ ಫಿಕ್ಸಿಂಗ್ ವೇಳೆ ಧೋನಿ ಕೈವಾಡದ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್, ನ್ಯಾ. ಮುದ್ಗಲ್ ಸಮಿತಿಗೆ ತಿಳಿಸಿದ್ದಾರೆ.
ಪಂದ್ಯದಲ್ಲಿ ಸಿಎಸ್ಕೆ ತಂಡದ ಆಟಗಾರರ ಮನೋಭಾವ, ತಂಡ ಆಡಿದ ರೀತಿ ಹಾಗೂ ಮೈದಾನದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವರ್ತನೆ ಬಗ್ಗೆ ಆರ್ಆರ್ ತಂಡದ ಆಟಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಪಂದ್ಯದಲ್ಲಿ ಸಿಎಸ್ಕೆ ತಂಡ ಗೆಲವು ಸಾಧಿಸಲು ಮನಸ್ಸು ಮಾಡಲಿಲ್ಲ. ಇದಕ್ಕೆ ಹಲವಾರು ಅಂಶಗಳು ಪುಷ್ಠೀಕರಿಸುತ್ತದೆ. ಪಂದ್ಯದಲ್ಲಿ ಅವರು ಮೊದಲು ಬ್ಯಾಟಿಂಗ್ಗೆ ಆಗಮಿಸಿದ ಕ್ಷಣದಿಂದ ಅಂತಿಮದ ವರೆಗೂ ನಡೆದ ಹಲವಾರು ಘಟನೆಗಳು ಪ್ರಶ್ನೆ ಮೂಡುವಂತೆ ಮಾಡುತ್ತದೆ. ಅಲ್ಲದೆ ಪಂದ್ಯದ ವೇಳೆ ನಾಯಕ ಧೋನಿ ಅಪರೂಪ ಎಂಬಂತೆ ಹೆಚ್ಚಿನ ಒತ್ತಡಕ್ಕೆ ಸಿಲುಕಿದ್ದರು. ಆ ದಿನ ಸಿಎಸ್ಕೆ ಆಡಿದ ವೈಖರಿಯನ್ನು ನೋಡಿದರೆ ಧೋನಿ ಸಹ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ. ಆ ಪಂದ್ಯದಲ್ಲಿ ಸಿಎಸ್ಕೆ ಆಟಗಾರರು ರನ್ ಗಳಿಸಲು ಹೆಚ್ಚಿನ ಪ್ರಯತ್ನ ನಡೆಸಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಗುರುನಾಥ ಮೇಯಪ್ಪನ್ ಹಾಗೂ ವಿಂದೂ ದಾರಾ ಸಿಂಗ್ ಅವರ ನಡುವಣ ಮಾತುಕತೆಯ ಟ್ರಾನ್ಸ್ಸ್ಕ್ರಿಪ್ಟ್ನಲ್ಲಿ ಮೇಯಪ್ಪನ್ ಸಿಎಸ್ಕೆ 140ರ ಗಡಿಯಲ್ಲಿ ರನ್ ದಾಖಲಿಸಲಿದೆ ಎಂದು ತಿಳಿಸಿದ್ದರು. ಅಲ್ಲದೆ ಮೇಯಪ್ಪನ್ ಸಿಎಸ್ಕೆ ತಂಡದ ವಿರುದ್ಧ 1.4ಕೋಟಿ ಬೆಟ್ಟಿಂಗ್ ಮಾಡಿದ್ದರು. ಅಲ್ಲದೆ ಮೇಯಪ್ಪನ್ 'ರಾಜಸ್ಥಾನ ರಾಯಲ್ಸ್ ಗೆಲವು ಸಾಧಿಸುವುದು ಪಕ್ಕಾ' ಎಂದು ಹೇಳಿದ್ದರು ಎಂಬುದು ಟ್ರಾನ್ಸ್ಸ್ಕ್ರಿಪ್ಟ್ನ ಮೂಲಕ ಬಹಿರಂಗವಾಗಿದೆ.
ಟಿ20 ಪಂದ್ಯದಲ್ಲಿ 12ರಿಂದ 15 ಸಿಕ್ಸರ್ಗಳನ್ನು ನೋಡಬಹುದು ಆದರೆ, ಸಿಎಸ್ಕೆ ತಂಡ ಆ ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್ ದಾಖಲಿಸಲಿಲ್ಲ. ಇದು ಟಿ20 ಪಂದ್ಯದಲ್ಲಿ ವಿರಳವಾದ ಅಂಶ. ಇದುವರೆಗೂ ನನ್ನ ಟಿ20 ಪಂದ್ಯಗಳ ಅನುಭವದಲ್ಲಿ ಯಾವುದೇ ತಂಡ ತಮ್ಮ ಇನಿಂಗ್ಸ್ನಲ್ಲಿ ಸಿಕ್ಸರ್ ಬಾರಿಸದೇ ಅಂತ್ಯಗೊಳಿಸಿರುವುದನ್ನು ನೋಡಿಲ್ಲ. ಸಿಎಸ್ಕೆ ತಂಡದ ಆಟದ ಶೈಲಿ ಅನುಮಾನ ಮೂಡುವಂತಿದೆ ಎಂಬುದು ನಮಗೆ ತಿಳಿದಿತ್ತು ಎಂದು ಆರ್ಆರ್ ಆಟಗಾರ ತಿಳಿಸಿದ್ದಾರೆ.
ಅಲ್ಲದೆ ಟಿ20 ಮಾದರಿಯಲ್ಲಿ ಅಪಾಯಕಾರಿ ಆಟಗಾರರಾದ ಧೋನಿ ಹಾಗೂ ರೈನಾ ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿದರು. ಹೆಚ್ಚು ರನ್ಗಳಿಸುವ ಪ್ರಯತ್ನ ನಡೆಸಲಿಲ್ಲ. ಈ ಆಟ ಅನುಮಾನ ಮೂಡಿಸುವುದಿಲ್ಲವಾದರೂ ಈ ಇಬ್ಬರು ಆಟಗಾರರು ಕೆವೊನ್ ಕೂಪರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೂಲ್ ಕ್ಯಾಪ್ಟನ್ ಎಂದೇ ಹೆಸರು ಮಾಡಿರುವ ಧೋನಿ ಆ ಪಂದ್ಯದಲ್ಲಿ ಹೆಚ್ಚು ಒತ್ತಡದಲ್ಲಿದ್ದಂತೆ ಕಂಡರು. ಪಂದ್ಯಾವಳಿಯಲ್ಲಿ ಅವರು ಪ್ಲೇ ಆಫ್ಗೆ ಪ್ರವೇಶಿಸಿದ್ದರು. ಹಾಗಾಗಿ ಆ ಪಂದ್ಯದಲ್ಲಿ ಸಿಎಸ್ಕೆ ಸೋತರೂ ಯಾವುದೇ ರೀತಿಯ ನಷ್ಟವಾಗುತ್ತಿರಲಿಲ್ಲ. ಆದರೂ ಧೋನಿ ಕಾರಣವಿಲ್ಲದೇ ಹೆಚ್ಚು ಒತ್ತಡಕ್ಕೆ ಸಿಲುಕಿದ್ದರು ಎಂದು ಆಟಗಾರ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

