ಚೆಂಡು ವಿರೂಪ ನಿರಾಕರಿಸಿದ ಹರಿಣಗಳು
ಕೇಪ್‌ಟೌನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಚೆಂಡನ್ನು ವಿರೂಪಗೊಳಿಸಿರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಮಾಡಿರುವ ಆರೋಪವನ್ನು ದಕ್ಷಿಣ ಆಫ್ರಿಕಾ ಬುಧವಾರ ತಳ್ಳಿ ಹಾಕಿದೆ.
ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 231 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು.ಆಸ್ಟ್ರೇಲಿಯಾ ಮಾಡುತ್ತಿರುವ ಆರೋಪಗಳು ಬೇಸರ ಉಂಟುಮಾಡುತ್ತಿವೆ. ಅಲ್ಲದೆ ನಮ್ಮನ್ನು ಧೈರ್ಯಗೆಡುವಂತೆ ಸಹ ಮಾಡುತ್ತಿವೆ ಎಂದು ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್ ಮೊಹ್ಮದ್ ಮಸಾಜೀ ಅವರು ಹೇಳಿದ್ದಾರೆ.ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ ಅವರು ಚೆಂಡನ್ನು ವಿರೂಪಗೊಳಿಸಿರುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾದ ವಿವಾದಿತ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆರೋಪ ಮಾಡಿದ್ದಾರೆ.
'ಡಿವಿಲಿಯರ್ಸ್ ಅವರು ತಮ್ಮ ಕೈಯಲ್ಲಿ ಚೆಂಡನ್ನು ಹಿಡಿದುಕೊಂಡು, ಗ್ಲೋಸ್‌ಗಳೊಂದಿಗೆ ಚೆಂಡಿನ ಪ್ರತಿಯೊಂದು ಭಾಗದಲ್ಲಿ ಗಟ್ಟಿಯಾಗಿ ತಿಕ್ಕಿದ್ದಾರೆ' ಎಂಬುದು ವಾರ್ನರ್ ಆರೋಪವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

