ಜರ್ಮನ್ ಓಪನ್: ಪವಾರ್, ಭಟ್ಗೆ ಮುನ್ನಡೆ
ಮುಲ್ಹೇಮ್ ಎನ್ ಡೆರ್ ರುಹ್ರ್ (ಜರ್ಮನಿ): ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಆನಂದ್ ಪವಾರ್ ಮತ್ತು ಅರವಿಂದ್ ಭಟ್ ಅವರು ಜರ್ಮನ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ವಿಶ್ವದ 34ನೇ ನಂಬರ್ ಆಟಗಾರ ಪವಾರ್ ಅವರು ತಮ್ಮ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸ್ಲೋವೇನಿಯಾದ ಇಜ್ಟೋಕ್ ಉಟ್ರೋಸಾ ಅವರನ್ನು 21-16, 21-12 ನೇರ ಗೇಮ್ಗಳಿಂದ ಸುಲಭವಾಗಿ ಪರಾಭವಗೊಳಿಸಿದರು.
ಇನ್ನು ವಿಶ್ವದ 82ನೇ ನಂಬರ್ ಮತ್ತು ರಾಷ್ಟ್ರೀಯ ಮಾಜಿ ಚಾಂಪಿಯನ್ ಅರವಿಂದ್ ಭಟ್ ಅವರು ವಿಶ್ವದ ನಂಬರ್ 10 ಆಟಗಾರ ಯೂನ್ ಹೂ ವಿರುದ್ಧ ಕಠಿಣ ಸವಾಲು ಎದುರಿಸುವ ಮೂಲಕ 21-17, 16-21, 21-11 ಗೇಮ್ಗಳಿಂದ ಪ್ರಯಾಸದ ಜಯ ಕಂಡುಕೊಂಡರು.ಈಗ ಮುಂದಿನ ಸುತ್ತಿನಲ್ಲಿ ಪವಾರ್ ಅವರು ತೈಪೇಯ ಟೀನ್ ಚೆನ್ ಚೌ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ರಾಜೀವ್ ಓಸೆಫ್ ಮತ್ತು ಡಾರೆನ್ ಲೀವ್ ಸೆಣಸಲಿದ್ದು, ಈ ಪಂದ್ಯದಲ್ಲಿ ಗೆದ್ದವರ ವಿರುದ್ಧ ಮೂರನೇ ಸುತ್ತಿನ ಪಂದ್ಯದಲ್ಲಿ ಅರವಿಂದ್ ಭಟ್ ಅವರು ಹೋರಾಟ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

