ಕ್ರೀಡೆ

ಪೇಸ್ ಜೋಡಿ ಸೇಮಿಸ್‌ಗೆ

ಪೇಸ್ ಜೋಡಿ ಸೇಮಿಸ್‌ಗೆ
Published On :

ಲಂಡನ್: ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮತ್ತು ಚೆಕ್ ಗಣರಾಜ್ಯದ ರಾಡೆಕ್ ಸ್ಟಿಪಾನೆಕ್ ಜೋಡಿ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
  ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ-ಚೆಕ್ ಜೋಡಿ, ಕೆನಾಡಾದ ಡೇನಿಯಲ್ ನೆಸ್ಟೋರ್ ಮತ್ತು ಸರ್ಬಿಯಾದ ನೆನಾದ್ ಜಿಮೋಂಜಿಕ್ ಜೋಡಿಯನ್ನು 7-6, 6-3, 6-4 ಸೆಟ್‌ಗಳಿಂದ ಸೋಲಿಸಿತು.   ಮಹಿಳೆಯರ ಸಿಂಗಲ್ಸ್‌ನಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಉಪಾಂತ್ಯದ ಪಂದ್ಯದಲ್ಲಿ ಪೆಟ್ರಾ ಕ್ವಿಟೋವಾ ತಮ್ಮ ದೇಶದವರೇ ಆದ ಲೂಸಿ ಸ್ಯಾಫರೋವಾ ವಿರುದ್ಧ 7-6 (8-6), 6-1 ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಪಂದ್ಯದ ಆರಂಭದಿಂದಲೇ ಉಭಯ ಆಟಗಾರ್ತಿಯರು ತೀವ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾದ ಪರಿಣಾಮ ಮೊದಲ ಸೆಟ್ ಹೆಚ್ಚು ಪೈಪೋಟಿಯಿಂದ ಕೂಡಿತ್ತು. ನಂತರ ಎರಡನೇ ಸೆಟ್‌ನಲ್ಲಿ ಲೂಸಿ ಅವರಿಂದ ಹೆಚ್ಚು ಪ್ರತಿರೋಧ ಎದುರಿಸದ ಕ್ವಿಟೋವಾ ಸುಲಭ ಮುನ್ನಡೆಯೊಂದಿಗೆ ಗೆಲವು ದಾಖಲಿಸಿದರು.
ಇನ್ನು ಬುಧವಾರ ತಡ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೆನಡಾದ ಮಿಲೊಸ್ ರೌನಿಕ್ ತಮ್ಮ ಎದುರಾಳಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್ ವಿರುದ್ಧ 6-7 (4-7), 6-2, 6-4, 7-6 (7-4) ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಸಾನಿಯಾ ಜೋಡಿ ಪ್ರಿಕ್ವಾರ್ಟರ್‌ಗೆ: ಬುಧವಾರ ತಡರಾತ್ರಿ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಜೋಡಿಯು ತಮ್ಮ ಎದುರಾಳಿ ಜೋಡಿಯಾದ ಮ್ಯಾಟ್ ಪ್ಯಾವಿಕ್ ಹಾಗೂ ಬೊಜಾನ ಜೊವಾನೊವಿಸ್ಕಿ ವಿರುದ್ಧ 6-3, 6-3 ನೇರ ಸೆಟ್‌ಗಳಿಂದ ಗೆಲವು ದಾಖಲಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.  ಇನ್ನು ಮತ್ತೊಂದು ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಆ್ಯಂಡ್ರ ಲಾವಕ್ಕೊವಾ ಜೋಡಿಯು 6-3, 5-7, 3-6 ಸೆಟ್‌ಗಳ ಅಂತರದಲ್ಲಿ ರಷ್ಯಾದ ಮಿಕೈಲ್ ಎಲ್ಗಿನ್ ಹಾಗೂ ಅನಾಸ್ಟೇಸಿಯಾ ರೊಡಿನೋವಾ ವಿರುದ್ಧ ಪರಾಭವಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.