ಇಂಗ್ಲೆಂಡ್ನಲ್ಲಿ ಹ್ಯಾಮಿಲ್ಟನ್ ಹವಾ

ಸಿಲ್ವರ್ಸ್ಟೋನ್: ಗೇರ್ಬಾಕ್ಸ್ ತೊಂದರೆ ಕಾರಣ ಪ್ರತಿಸ್ಪರ್ಧಿ ನಿಕೋ ರೋಸ್ಬರ್ಗ್ ರೇಸ್ನಿಂದ ಹಿಂದೆ ಸರಿಯುವುದರೊಂದಿಗೆ, ಮರ್ಸಿಡೀಸ್ನ ಲೂಯಿಸ್ ಹ್ಯಾಮಿಲ್ಟನ್ ಬ್ರಿಟಿಷ್ ಗ್ರ್ಯಾನ್ ಪ್ರೀನಲ್ಲಿ ದರ್ಬಾರು ನಡೆಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಹ್ಯಾಮಿಲ್ಟನ್ ಪ್ರಸಕ್ತ ಋತುವಿನ 6ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ರೋಸ್ಬರ್ಗ್ ಅವರೊಂದಿಗೆ ಪ್ರಶಸ್ತಿಗಾಗಿಪೈಪೋಟಿ ನಡೆಸಿರುವ ಹ್ಯಾಮಿಲ್ಟನ್ ಅವರು, ಈಗ ಕೇವಲ ನಾಲ್ಕು ಅಂಕ ಹಿಂದಿದ್ದಾರೆ. ಒಟ್ಟು 52 ಲ್ಯಾಪ್ಸ್ಗಳ ಗುರಿಯನ್ನ್ನ್ನು ಹ್ಯಾಮಿಲ್ಟನ್ 2:26:52.094 ಅವಧಿಯಲ್ಲಿ ಕ್ರಮಿಸಿ ಮೊದಲಿಗರಾದರು. ಉಳಿದಂತೆ, ವಾಲ್ಟೇರಿ ಬೋಟ್ಟಾಸ್, ಡ್ಯಾನಿಯಲ್ ರಿಸಾರ್ಡೋ, ಜೆನ್ಸನ್ ಬಟನ್, ಸೆಬಾಸ್ಟಿಯನ್ ವೆಟಲ್ 2ರಿಂದ 5ನೇ ಸ್ಥಾನ ಹಂಚಿಕೊಂಡರು.
ಫೋರ್ಸ್ ಇಂಡಿಯಾಗೆ 4 ಅಂಕ: ಫೋರ್ಸ್ ಇಂಡಿಯಾ ಮರ್ಸಿಡೀಸ್ ತಂಡದ ಚಾಲಕ ನಿಕೋ ಹಲ್ಕನ್ಬರ್ಗ್ 8ನೇ ಸ್ಥಾನ ಪಡೆಯುವ ಮೂಲಕ 4 ಅಂಕ ಗಳಿಸಿದ್ದಾರೆ. ಆದರೆ, ಫೋರ್ಸ್ ಇಂಡಿಯಾದ ಮತ್ತೊಬ್ಬ ಚಾಲಕ ಸೆರ್ಗಿಯೋ ಪೆರೆಜ್ 11ನೇ ಸ್ಥಾನ ಪಡೆದು ಅಂಕ ಪಡೆಯುವಲ್ಲಿ ವಿಫಲವಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


