ಕ್ರೀಡೆ

ಎ ತಂಡಕ್ಕೆ ಓಜಾ ದ್ವಿಶತಕ ಬಲ

ಎ ತಂಡಕ್ಕೆ ಓಜಾ ದ್ವಿಶತಕ ಬಲ
Published On :

ಬ್ರಿಸ್ಬೇನ್: ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಓಜಾ ಅವರ ಅಜೇಯ ದ್ವಿಶತಕದ ನೆರವಿನೊಂದಿಗೆ ಭಾರತ 'ಎ' ತಂಡ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ನಡೆಯುತ್ತಿರುವ ನಾಲ್ಕು ದಿನದ ಪಂದ್ಯದ 2ನೇ ದಿನ ಪಾರಮ್ಯ ಮೆರೆದಿದೆ.
ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಓಜಾ ಪ್ರದರ್ಶನದೊಂದಿಗೆ ಭಾರತ 'ಎ' ತಂಡ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 475 ರನ್ಗಳ ಬೃಹತ್ ಮೊತ್ತ ಕಲೆ ಹಾಕುತ್ತಿದ್ದಂತೆಯೇ ಡಿಕ್ಲೇರ್ ಘೋಷಿಸಿತು.
ನಂತರ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 2ನೇ ದಿನಾಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ.
ಭಾನುವಾರ ದಿನಾಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 304 ರನ್ ಗಳಿಸಿದ್ದ ಭಾರತ ತಂಡ ಸೋಮವಾರ ರನ್ಗಳ ಹೊಳೆ ಹರಿಸಿತು. ಮೊದಲ ದಿನಾಂತ್ಯಕ್ಕೆ 82 ರನ್ಗಳಿಸಿ ಅಜೇಯರಾಗುಳಿದಿದ್ದ ಓಜಾ, 2ನೇ ದಿನಾರಂಭದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಶತಕ ಪೂರೈಸಿದರು.
ಓಜಾ ಅವರೊಂದಿಗೆ ಉತ್ತಮ ಸಾಥ್ ನೀಡಿದ ಧವಳ್ ಕುಲಕರ್ಣಿ, ಇಬ್ಬರ  ಜತೆಯಾಟದಲ್ಲಿ 99 ರನ್ ಗಳಿಸುತ್ತಿದ್ದಂತೆಯೇ, ಕೆಮರೂನ್ ಬಾಯ್ಸೆ ಎಸೆತದಲ್ಲಿ ಚಡ್ ಸಾಯೆರ್ಸ್ಗೆ ಕ್ಯಾಚ್ ನೀಡಿದರು.
ಆದರೆ, ತಮ್ಮ ಅದ್ಭುತ ಬ್ಯಾಟಿಂಗ್ಮುಂದುವರಿಸಿದ ಓಜಾ ಮೊದಲ ಅವಧಿಯ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದ್ವಿಶತಕ ಪೂರೈಸಿದರು. ಆಗ ಭಾರತ 9 ವಿಕೆಟ್ ಕಳೆದುಕೊಂಡು ಸರಿಯಾಗಿ 450 ರನ್ ಗಳಿಸಿತ್ತು. ನಂತರ 25 ರನ್ಗಳಿಸಿದ ಭಾರತ ಡಿಕ್ಲೇರ್ ಘೋಷಿಸಿತು.
ನಂತರದ ಓವರ್ನಲ್ಲಿ ಉಮೇಶ್ ಯಾದವ್ ವಿಕೆಟ್ ಪಡೆದ ಬಾಯಸ್ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬೌಲಿಂಗ್ ಪ್ರದರ್ಶಿಸುವ ಮೂಲಕ, 146 ರನ್ ನೀಡಿ 4 ವಿಕೆಟ್ ಪಡೆದರು.
ನಂತರ ಭಾರತದ ಬೌಲಿಂಗ್ದಾಳಿಯನ್ನು ತಾಳಲಾರದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆರಂಭಿಕ ಆಟಗಾರ ಫಿಲಿಪ್ ಹ್ಯೂಸ್ (34) ಮಾತ್ರ ಕೊಂಚ ಭಾರತದ ಬೌಲರ್ಗಳಿಗೆ ಪ್ರರೋಧ ತೋರಿದರು.
2ನೇ ದಿನದ ಕೊನೆಯ ಅವಧಿಯಲ್ಲಿ 5 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಪೀಟರ್ ಫಾರೆಸ್ಟ್ (16), ನಾಯಕ ಜೇಮ್ಸ್ ಫಾಕ್ನರ್ (1), ಹೆನ್ರಿಕ್ಸ್ (4), ಹಾಗೂ ಕ್ರಿಸ್ ಲಿಯಾನ್ (20) ಲುಗುಬಗನೆ ವಿಕೆಟ್ ಒಪ್ಪಿಸಿದರು.
ಭಾರತದ ಪರ ಕರ್ಷಕ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ 42 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಮೇಶ್ ಯಾದವ್, ಧವಳ್ ಕುಲಕರ್ಣಿ ಹಾಗೂ ಪ್ರಗ್ಯಾನ್ ಓಜಾ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:     ಭಾರತ ಎ 9 ವಿಕೆಟ್ಗೆ 475ಕ್ಕೆ ಡಿಕ್ಲೇರ್ನಮನ್ ಓಜಾ ಅಜೇಯ 219, ಮನೋಜ್ ತಿವಾರಿ 83, ಜೀವನ್ಜ್ಯೋತ್ ಸಿಂಗ್ 56, ಕೆಮರೂನ್ ಬಾಯ್ಸೆ 4/146, ಮಿಚೆಲ್ ಮಾರ್ಷ್ 54/2, ಬೆನ್ ಕಟಿಂಗ್ 104/2.    ಆಸ್ಟ್ರೇಲಿಯಾ ಎ 126/7ಫಿಲಿಪ್ ಹ್ಯೂಸ್ 34, ಕ್ರಿಸ್ ಲಿನ್ 20, ಜಸ್ಪ್ರೀತ್ ಬುಮ್ರಾ 3/42, ಧವಳ್ ಕುಲಕರ್ಣಿ 10/1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.