ಕ್ರೀಡೆ

ಎಸ್ಬಿಎಂ, ದೇನಾ ಬ್ಯಾಂಕ್ಗೆ ಪ್ರಶಸ್ತಿ

ಎಸ್ಬಿಎಂ, ದೇನಾ ಬ್ಯಾಂಕ್ಗೆ ಪ್ರಶಸ್ತಿ
Published On :

ಚನ್ನಪಟ್ಟಣ: ಎಸ್ಬಿಎಂ ತಂಡ ಪುರುಷರ ವಿಭಾಗದಲ್ಲಿ, ದೇನಾಬ್ಯಾಂಕ್ ತಂಡ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಪಡೆಯುವುದರೊಂದಿಗೆ, ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಬಾಲಕರ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ತೆರೆಕಂಡಿತು.
ಜು.3 ರಂದು ಆರಂಭಗೊಂಡ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ 30 ತಂಡಗಳು, ಮಹಿಳಾ ವಿಭಾಗದಲ್ಲಿ 20 ತಂಡಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಪುರುಷರ ವಿಭಾಗದಲ್ಲಿ ಎಸ್ಬಿಎಂ ಮತ್ತು ಬಿಪಿಸಿಎಲ್ ತಂಡ ಫೈನಲ್ ಪ್ರವೇಶಿಸಿದವು. ಮಹಿಳಾ ವಿಭಾಗದಲ್ಲಿ
ದೇನಾಬ್ಯಾಂಕ್ ಮತ್ತು ಶಿವಶಕ್ತಿ ತಂಡದ ನಡುವೆ ಅಂತಿಮ ಹಣಾಹಣಿ ಏರ್ಪಟ್ಟಿತ್ತು.
ಪುರುಷ ವಿಭಾಗದಲ್ಲಿ ವಿಜೇತ ತಂಡಕ್ಕೆ 2ಲಕ್ಷ ರು. ನಗದು ಮತ್ತು ಪಾರಿತೋಷಕ, ಪರಾಜಿತ ತಂಡಕ್ಕೆ ಒಂದುಲಕ್ಷ ರು. ನಗದು ಮತ್ತು  ಮೂರನೇ ಸ್ಥಾನ ಪಡೆದ 2 ತಂಡಗಳಿಗೆ 50 ಸಾವಿರ ರು. ನಗದನ್ನು ಬಹುಮಾನವಾಗಿ ನೀಡಲಾಯಿತು. ಮಹಿಳಾ ವಿಭಾಗದಲ್ಲಿ  ವಿಜೇತ ತಂಡಕ್ಕೆ 1ಲಕ್ಷ ನಗದು ಮತ್ತು ಪಾರಿತೋಷಕ, ಪರಾಜಿತ ತಂಡಕ್ಕೆ 50ಸಾವಿರ ನಗದು ಮತ್ತು ಪಾರಿತೋಷಕ, ಮೂರನೇ ಸ್ಥಾನ ಪಡೆದ ಎರಡು ತಂಡಗಳಿಗೆ ತಲಾ 25 ಸಾವಿರ ನಗದನ್ನು ನೀಡಲಾಯಿತು.
ವೈಯಕ್ತಿಕ ಪ್ರಶಸ್ತಿ: ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಪುರುಷರ ವಿಭಾಗದಲ್ಲಿ  ಬಿಪಿಸಿಎಸ್ ತಂಡದ ಇಷಾಂತರ ದೇವಾಡಿಗ(ಉತ್ತಮ ರೈಡರ್), ಎಸ್ಬಿಎಂ ತಂಡದ ನಾಗರಾಜ ನಾಯಕ್(ಉತ್ತಮ ಕ್ಯಾಚರ್), ಎಸ್ಬಿಎಂನ ಶಬೀರ್ (ಉತ್ತಮ ಆಲ್ರೌಂಡರ್)
ಪ್ರಶಸ್ತಿ ಪಡೆದರು. ಮಹಿಳಾ ವಿಭಾಗದಲ್ಲಿ ದೇನಾಬ್ಯಾಂಕ್ನ ಅಪೀಷಾ
(ಉತ್ತಮ ರೈಡರ್), ಶಿವಶಕ್ತಿ ತಂಡದ ಜ್ಯೋತಿ (ಉತ್ತಮ ಕ್ಯಾಚರ್), ರೇಖಾಸಾವಂತ್ (ಉತ್ತಮ ಆಲೌರಂಡರ್) ಪ್ರಶಸ್ತಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.