ಡ್ರಾದತ್ತ ಸಾಗಿದ ಅನಧಿಕೃತ ಟೆಸ್ಟ್
ಬ್ರಿಸ್ಬೇನ್: ಸ್ಯಾಮ್ ವೈಟ್ಮನ್ ಶತಕ ಮತ್ತು ಮಿಚೆಲ್ ಮಾರ್ಷ್ ದ್ವಿಶತಕ ಹಾಗೂ ಈ ಇಬ್ಬರೂ ಕಲೆ ಹಾಕಿದ 371 ರನ್ಗಳ ದಾಖಲೆ ಜತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 'ಎ' ತಂಡ ಭಾರತ 'ಎ' ತಂಡದ ವಿರುದ್ಧ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಸೋಮವಾರ 126 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಆಸ್ಟ್ರೇಲಿಯಾ 'ಎ' ತಂಡ ಮಂಗಳವಾರ 3ನೇ ದಿನಾಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 522 ರನ್ ದಾಖಲಿಸಿದೆ. ಕೆಮರೂನ್ ಬಾಯ್ಸೆ (16) ಮತ್ತು ಚಡ್ ಸಯೆರ್ಸ್ (3) ಕ್ರೀಸ್ನಲ್ಲಿದ್ದರು. ಇದರೊಂದಿಗೆ ಕೇವಲ ಇನ್ನೊಂದು ದಿನ ಮಾತ್ರ ಉಳಿದಿರುವ ನಾಲ್ಕು ದಿನಗಳ ಪಂದ್ಯ ಡ್ರಾದತ್ತ ಮುಖ ಮಾಡಿದೆ. ಸದ್ಯ ಆಸೀಸ್ 47 ರನ್ ಮುನ್ನಡೆ ಸಾಧಿಸಿದೆ. 294 ಎಸೆತಗಳನ್ನು ಎದುರಿಸಿದ ಮಿಚೆಲ್ ಮಾರ್ಷ್ (211) ಮೊತ್ತದಲ್ಲಿ 10 ಸಿಕ್ಸರ್ ಮತ್ತು 21 ಬೌಂಡರಿಗಳು ಸೇರಿದ್ದವು. ಇನ್ನು 278 ಎಸೆತಗಳನ್ನು ಎದುರಿಸಿದ ಸ್ಯಾಮ್ ವೈಟ್ಮನ್ (174) ಮೊತ್ತದಲ್ಲಿ 1 ಸಿಕ್ಸರ್ ಹಾಗೂ 26 ಬೌಂಡರಿಗಳು ಸೇರಿದ್ದವು. ಈ ಜೋಡಿ 7ನೇ ವಿಕೆಟ್ಗೆ 86.4 ಓವರ್ಗಳಿಂದ 371 ರನ್ ಪೇರಿಸಿತು. ಇದರೊಂದಿಗೆ ಈ ಆಟಗಾರರು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಸೀಸ್ ಪರ 7ನೇ ವಿಕೆಟ್ಗೆ ದೊಡ್ಡ ಮೊತ್ತದ ದಾಖಲೆ ಜತೆಯಾಟಕ್ಕೆ ಭಾಜನರಾದರು. ಅಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಸಂಕ್ಷಿಪ್ತ ಸ್ಕೋರ್:
ಭಾರತ ಎ ಮೊದಲ ಇನಿಂಗ್ಸ್ 475/9 ಡಿಕ್ಲೇರ್
ಆಸ್ಟ್ರೇಲಿಯಾ ಎ 522/9 ಮಿಚೆಲ್ ಮಾರ್ಷ್ 211, ವೈಟ್ಮನ್ 174. ಬಾಯ್ಸೆ 16, ಕಟಿಂಗ್ 11, ಜಸ್ಪ್ರೀತ್ ಬುಮ್ರಾ 4/128, ಕರುಣ್ ನಾಯರ್ 1/22, ಪ್ರಗ್ಯಾನ್ ಓಜಾ 163/1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

