ಯುವ ಶಕ್ತಿಗೆ ಅಗ್ನಿ ಪರೀಕ್ಷೆ

ನಾಟಿಂಗ್ಹ್ಯಾಮ್: ಯುವ ಪ್ರತಿಭೆಗಳಿಂದ ಕೂಡಿರುವ ಭಾರತ ತಂಡಕ್ಕೆ ಇಂಗ್ಲೆಂಡ್ ಪ್ರವಾಸ ಅಗ್ನಿ ಪರೀಕ್ಷೆಯಾಗಿದ್ದು, ಬುಧವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
2011ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ಕ್ಲೀನ್ಸ್ವೀಪ್ ಸೋಲನುಭವಿಸಿತ್ತು. ತದನಂತರವಿದೇಶಿ ನೆಲದಲ್ಲಿ ಆಡಿದ ಯಾವುದೇ ಟೆಸ್ಟ್ ಪಂದ್ಯವನ್ನ್ನೂ ಭಾರತ ಗೆದ್ದುಕೊಂಡಿಲ್ಲ. ಹಾಗಾಗಿ ಇಂಗ್ಲೆಂಡ್ ವಿರದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಭಾರತದ ಪಾಲಿಗೆ ದೊಡ್ಡ ಸವಾಲು ಎಂದರೆ ತಪ್ಪಲ್ಲ.
ಯುವ ಆಟಗಾರರು ಭಾರತೀ ಕ್ರಿಕೆಟ್ಗೆ ಹೊಸ ಭವಿಷ್ಯ ಬರೆಯಲು ಈ ಸರಣಿ ಉತ್ತಮ ವೇದಿಕೆಯಾಗಿದೆ. ತಂಡದ ಆಟಗಾರರು ಈ ಸರಣಿಯಲ್ಲಿ ನೀಡುವ ಪ್ರದರ್ಶನ ಭಾರತ ತಂಡದ ದಿಕ್ಸೂಚಿ ನಿರ್ಧರಿಸಲಿದೆ. ಪ್ರಸಕ್ತ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಮೇಲೆ ಬ್ಯಾಟಿಂಗ್ ವಿಭಾಗ ಹೆಚ್ಚಿನ ನಿರೀಕ್ಷೆ ಇಟ್ಟಿದೆ. ಇನ್ನು ಆರಂಭಿಕರಾಗಿ ಗೌತಮ್ ಗಂಭಿರ್ ಅನುಭವ ಪ್ರಮುಖವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಜತೆಗೆ ಧೋನಿ ಹೆಗಲಿಗೆ ಜವಾಬ್ದಾರಿ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ ಮೊಹಮದ್ ಶಮಿ ಪ್ರಮುಖ ಅಸ್ತ್ರವಾಗಲಿದ್ದಾರೆ. ಇನ್ನು ವೇಗದ ಪಿಚ್ನಲ್ಲಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಆಡಿದರೆ ಅನುಮಾನವಿಲ್ಲ. ಆದರೆ ಜಡೇಜಾ ಬದಲಿಗೆ ಧೊನಿ ಬಿನ್ನಿಗೆ ಮಣೆ ಹಾಕುವರೆ ಎಂಬುದನ್ನು ಕಾದು ನೋಡಬೇಕು.
ಇನ್ನು ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆ್ಯಶಸ್ ಸರಣಿಯನ್ನು ಹೀನಾಯವಾಗಿ ಸೋತು ಹತಾಶೆಯಲ್ಲಿದೆ. ಕಾರಣ ಭಾರತದ ವಿರುದ್ಧ ಗೆದ್ದೇ ತೀರುವ ವಿಶ್ವಾಸದಲ್ಲಿ ಆತಿಥೇಯ ಆಟಗಾರರಿದ್ದಾರೆ.
ಕಳೆದ ಬಾರಿ ಇಂಗ್ಲೆಂಡ್ನಲ್ಲಿ ನಡೆದ ಸರಣಿಯಲ್ಲಿ ಭಾರತ ತಂಡ ಆಡಿದ ನಾಲ್ಕೂ ಪಂದ್ಯಗಳಲ್ಲೂ ಸೋಲನುಭವಿಸುವ ಮೂಲಕ ಭಾರೀ ಮುಖಭಂಗ ಅನುಭವಿಸಿತ್ತು. ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ 4 ಪಂದ್ಯಗಳಲ್ಲಿ ಸೋಲು, ಕಳೆದ ಋತುವಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲೂ ಭಾರತ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.
ಇನ್ನು ಇಂಗ್ಲೆಂಡ್ ತಂಡ 2012/13ನೇ ಸಾಲಿನಲ್ಲಿ ಭಾರತ ಪ್ರವಾಸ ಕೈಗೊಂಡಾಗಲೂ ಭಾರತ ಸೋಲನುಭವಿಸಿತ್ತು. ಹಾಗಾಗಿ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಇದಾಗಿದೆ.
ತಂಡಗಳು
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಗೌತಮ್ ಗಂಭೀರ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಅಜಿಂಕ್ಯ ರಹಾನೆ, ಮುರಳಿ ವಿಜಯ್, ವೃದ್ಧಿಮಾನ್ ಸಾಹ, ಸ್ಟುವರ್ಟ್ ಬಿನ್ನಿ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ವರುಣ್ ಎರಾನ್, ಪಂಕಜ್ ಸಿಂಗ್, ಈಶ್ವರ್ ಪಾಂಡೆ
ಇಂಗ್ಲೆಂಡ್: ಅಲಸ್ಟೆರ್ ಕುಕ್ (ನಾಯಕ), ಮೋಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್, ಮ್ಯಾಟ್ ಪ್ರಯರ್, ಸ್ಯಾಮ್ ರಾಬ್ಸನ್, ಜೋ ರೂಟ್, ಬೆನ್ ಸ್ಟೊಕ್ಸ್, ಕ್ರಿಸ್ ವೊಕ್ಸ್.
ಪಂದ್ಯದ ಸಮಯ: ಮಧ್ಯಾಹ್ನ 3:30 (ಭಾರತೀಯ ಕಾಲಮಾನ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


