ಕ್ರೀಡೆ

ಇಂದಿನಿಂದ ಅಂತರ್ಶಾಲಾ ಹಾಕಿ ಟೂರ್ನಿ

Published On :

ಬೆಂಗಳೂರು: ರೋಟರಿ ಕ್ಲಬ್ ವತಿಯಿಂದ ಡಾ.ಜಿ.ಎಸ್ ರಾಂಧವ ಸ್ಮಾರಕ ಶಾಲಾ ಮಟ್ಟದ ಹಾಕಿ ಟೂರ್ನಿಯನ್ನು ಬುಧವಾರದಿಂದ ಆಯೋಜಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಶಾಲಾ ತಂಡಗಳೂ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಜು.16ರಿಂದ ಆರಂಭವಾಗಲಿರುವ ಟೂರ್ನಿ ಜು.26ರವರೆಗೆ ನಡೆಯಲಿದೆ.  ಈ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರು ಗರಿಷ್ಠ 10ನೇ ತರಗತಿಯರಾಗಿರುತ್ತಾರೆ. ಇಲ್ಲಿ ತರಗತಿ ಆಧಾರದ ಮೇಲೆ ಆಟಗಾರರಿಗೆ ಅರ್ಹತೆ ನೀಡಿದ್ದು, ವಯಸ್ಸಿನ ಆಧಾರ ಪರಿಗಣಿಸಿಲ್ಲ.
ಟೂರ್ನಿಯಲ್ಲಿ ಎರಡು ಹಂತಗಳಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೋಟರಿಯಿಂದ ಇದು ಮೊದಲ ಕಾರ್ಯಕ್ರಮವಾಗಿದ್ದು, ಈ ಹಾಕಿ ಟೂರ್ನಿ 25ನೇ ಆವೃತ್ತಿಯಾಗಿದೆ. ಈ ಬಾರಿ ಹೊರ ರಾಜ್ಯದಿಂದ ಮೂರು ತಂಡಗಳು ಭಾಗವಹಿಸಿದ್ದು, ಚೆನ್ನೈನಿಂದ 2 ಹಾಗೂ ಅನಂತಪುರದಿಂದ 1 ತಂಡಗಳು ಭಾಗವಹಿಸುತ್ತಿವೆ.
ಕೆಎಸ್ಎಫ್ಎ ಅಂಚೆ ಚೀಟಿ
ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಸಂಭ್ರಮ ಆಚರಿಸುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ (ಕೆಎಸ್ಎಫ್ಎ) ಚಿತ್ರದೊಂದಿಗೆ ಅಂಚೆ ಚೀಟಿ ಮತ್ತು ಕವರ್ ಬಿಡುಗಡೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಕರ್ನಾಟಕ ಫುಟ್ಬಾಲ್ ಸಂಸ್ಥೆ ಭಾರತದ ಅಂಚೆ ಚೀಟಿಯಲ್ಲಿ ಕಾಣಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.